- Home
- Entertainment
- Cine World
- 33 ವರ್ಷದ ಮಗನ ಮುಂದೆ 3ನೇ ಮದುವೆ ಬಗ್ಗೆ ಮಾತಾಡಿದ Aamir Khan; ಮುಜುಗರವೋ, ವ್ಯಂಗ್ಯವೋ? ಕಿಸಕ್ಕನೆ ನಕ್ಕ ಪುತ್ರ
33 ವರ್ಷದ ಮಗನ ಮುಂದೆ 3ನೇ ಮದುವೆ ಬಗ್ಗೆ ಮಾತಾಡಿದ Aamir Khan; ಮುಜುಗರವೋ, ವ್ಯಂಗ್ಯವೋ? ಕಿಸಕ್ಕನೆ ನಕ್ಕ ಪುತ್ರ
Aamir Khan gauri spratt marriage: ಆಮೀರ್ ಖಾನ್ 59ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ. ಈಗಾಗಲೇ ಎರಡು ಮದುವೆಗಳು ಮುರಿದುಬಿದ್ದಿದ್ದು, ಈಗ ಮೂರನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಆಮೀರ್ ಖಾನ್ ಜೀವನಕ್ಕೆ ಕಾಲಿಡುತ್ತಿರುವ ಆ ಮೂರನೇ ವ್ಯಕ್ತಿ ಯಾರು? ಅವರ ಹಿನ್ನೆಲೆ ಏನು?

ಆಮಿರ್ ಖಾನ್‌ಗೆ ಮೂರನೇ ಮದುವೆ ಸಂಭ್ರಮ
ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ಸುದ್ದಿ ಯಾವಾಗ ವೈರಲ್ ಆಗುತ್ತೆ ಅಂತ ಹೇಳೋದು ಕಷ್ಟ. ಅದರಲ್ಲೂ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಬರುವ ವದಂತಿಗಳು ಕ್ಷಣಾರ್ಧದಲ್ಲಿ ಹಾಟ್ ಟಾಪಿಕ್ ಆಗುತ್ತವೆ.
ಸದ್ಯ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರ ಮೂರನೇ ಮದುವೆ ಸುದ್ದಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಎರಡನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ ನಂತರ, ಅಮೀರ್ ಖಾನ್ ಶೀಘ್ರದಲ್ಲೇ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಮಗನಿಗೆ ನಾಚಿಕೆಯೋ?
ಸಿನಿಮಾ ಪ್ರೀಮಿಯರ್ ಶೋನಲ್ಲಿ ಆಮಿರ್ ಖಾನ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಲಾಯ್ತು. ಆಗ ಅವರ ಪಕ್ಕದಲ್ಲಿ ಮಗ ಕೂಡ ಇದ್ದನು. ತಂದೆಗೆ ಈ ಪ್ರಶ್ನೆ ಕೇಳಿದ್ದು ನೋಡಿ ಅವರು ನಕ್ಕಿದ್ದಾರೆ, ಅಷ್ಟೇ ಅಲ್ಲದೆ ಇವರ ನಗು ಮುಜುಗರವೋ, ವ್ಯಂಗ್ಯವೋ ಅರಿಯದಂತಾಗಿದೆ.
ಎರಡು ಡಿವೋರ್ಸ್
ಆಮೀರ್ ಖಾನ್ ತಮ್ಮ ಮೊದಲ ಪತ್ನಿ ರೀನಾ ದತ್ತಾ ಅವರನ್ನು 1986ರಲ್ಲಿ ಮದುವೆಯಾಗಿ 2002ರಲ್ಲಿ ವಿಚ್ಛೇದನ ನೀಡಿದರು. ಇವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಆಮೀರ್ ಖಾನ್ 2005ರಲ್ಲಿ ಕಿರಣ್ ರಾವ್ ಅವರನ್ನು ಎರಡನೇ ಮದುವೆಯಾಗಿ 2021ರಲ್ಲಿ ಬೇರ್ಪಟ್ಟರು. ಈ ದಂಪತಿಗೆ ಆಜಾದ್ ಎಂಬ ಓರ್ವ ಮಗನಿದ್ದಾನೆ.
ಜುಲೈ 5 ವಿಶೇಷವಾದ ದಿನ
ಈಗ ಆಮೀರ್ ಖಾನ್ ಸ್ವತಃ ಮಾಧ್ಯಮಗಳ ಮುಂದೆ ತಮ್ಮ ಮೂರನೇ ಮದುವೆ ದಿನಾಂಕವನ್ನು ಘೋಷಿಸಿದ್ದಾರೆ. ಜುಲೈ 5 ರಂದು ತಾವು ಹಸೆಮಣೆ ಏರಲಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇದು ತುಂಬಾ ಚಿಕ್ಕ ಸಮಾರಂಭವಾಗಿದ್ದು, ಮನೆಯಲ್ಲೇ ಎರಡೂ ಕುಟುಂಬದವರು ಮತ್ತು ಕೆಲವೇ ಕೆಲವು ಅತಿಥಿಗಳನ್ನು ಮಾತ್ರ ಆಹ್ವಾನಿಸುತ್ತಿರುವುದಾಗಿ ಆಮೀರ್ ಖಾನ್ ಹೇಳಿದ್ದಾರೆ. ಈ ಜುಲೈ 5 ತಮಗೆ ಬಹಳ ವಿಶೇಷವಾದ ದಿನ ಎಂದಿದ್ದಾರೆ. ಎಲ್ಲರ ಆಶೀರ್ವಾದ ಇರಲಿ ಎಂದು ಅವರು ಕೋರಿದ್ದಾರೆ.
ಆಮೀರ್ ಖಾನ್ ಅವರ ಮೂರನೇ ಪತ್ನಿ ಗೌರಿ ಸ್ಪ್ರ್ಯಾಟ್ ಸಿನಿಮಾ ಇಂಡಸ್ಟ್ರಿಗೆ ಸೇರಿದವರಲ್ಲ. ಅವರು ಒಬ್ಬ ಫ್ಯಾಷನ್ ಡಿಸೈನರ್ ಮತ್ತು ಕ್ರಿಯೇಟಿವ್ ಕ್ಷೇತ್ರದಲ್ಲಿರುವ ಪ್ರಮುಖ ವ್ಯಕ್ತಿ. ಆಮೀರ್ ಖಾನ್ ಜೊತೆ ಅವರಿಗೆ ಕೆಲವು ಸಮಯದಿಂದ ಉತ್ತಮ ಪರಿಚಯವಿದೆ. ಅವರು ಸದ್ಯ ಮುಂಬೈ ಮತ್ತು ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಆಮೀರ್ ಖಾನ್ ಪ್ರೊಡಕ್ಷನ್ಸ್‌ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
ಹಿಟ್ ಸಿನಿಮಾ ನೀಡಿರುವ ಆಮಿರ್ ಖಾನ್
ಆಮೀರ್ ಖಾನ್ ಮದುವೆ ದಿನಾಂಕ ಘೋಷಿಸುವಾಗ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಪಕ್ಕದಲ್ಲೇ ಇದ್ದರು. ಅವರು ತಕ್ಷಣವೇ ಆಮೀರ್ ಖಾನ್‌ಗೆ ಶುಭಾಶಯ ತಿಳಿಸಿದರು. ಇವರಿಬ್ಬರ ಕಾಂಬೊದಲ್ಲಿ ಬಂದ '3 ಈಡಿಯಟ್ಸ್' ಮತ್ತು 'ಪಿಕೆ' ಸಿನಿಮಾಗಳು ಬ್ಲಾಕ್‌ಬಸ್ಟರ್ ಆಗಿದ್ದವು. ಆಮೀರ್ ಖಾನ್ ಹೊಸ ಜೀವನ ಆರಂಭಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
'ದಂಗಲ್' ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದ ಫಾತಿಮಾ ಸನಾ ಶೇಖ್ ಅವರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಒಟ್ಟಿನಲ್ಲಿ, ಎರಡು ಮದುವೆಗಳ ನಂತರ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

