ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ಬೇಬಿ ಬಂಪ್ ಫೋಟೋ ವೈರಲ್!
ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ
ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾ ಬಸು ಮತ್ತು ಮಾಡಲ್ ಕರಣ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಗುಡ್ ನ್ಯೂಸ್ ರಿವೀಲ್ ಮಾಡಿದ್ದಾರೆ.
ಎರಡು ಫೋಟೋ ಅಪ್ಲೋಡ್ ಮಾಡಿರುವ ಬಿಪಾಶಾ ಒಂದರಲ್ಲಿ ಪತಿ ಜೊತೆ ಬೇಬಿ ಬಂಪ್ ಹಿಡಿದುಕೊಂದು ನಿಂತಿದ್ದಾರೆ, ಮತ್ತೊಂದರಲ್ಲಿ ಪತಿ ಬೇಬಿ ಬಂಪ್‌ಗೆ ಕಿಸ್ ಕೊಡುತ್ತಿದ್ದಾರೆ. ಈ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.
'ಹೊಸ ಸಮಯ, ನನ್ನ ಜೀವನದ ಹೊಸ ಫೇಸ್, ಈ ಹೊಸ ಬೆಳಕು ನಮ್ಮ ಜೀವನದಕ್ಕೆ ದೊಡ್ಡ ದಾರಿ ದೀಪವಾಗಲಿದೆ. ನಮ್ಮ ಕುಟುಂಬ ಶೀಘ್ರದಲ್ಲಿ ತುಂಬು ಕುಟುಂಬವಾಗಲಿದೆ' ಎಂದು ಬಿಪಾಶಾ ಬರೆದುಕೊಂಡಿದ್ದಾರೆ.
'ನಾವಿಬ್ಬರೂ individually ಜೀವನ ಆರಂಭಿಸಿದ್ದು, ಆನಂತರ ನಾವು ಭೇಟಿಯಾಗಿದ್ದು. ಅಲ್ಲಿಂದ ಇಲ್ಲಿವರೆಗೂ ಜೀವನದಲ್ಲಿ ಒಟ್ಟಿಗೆ ನಡೆದು ಬಂದಿದ್ದೀವಿ'
'ನಾವಿಬ್ಬರೇ ಪ್ರೀತಿ ಹಂಚಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ನಾವಿಬ್ಬರೇ ಪ್ರೀತಿ ಹಂಚಿಕೊಳ್ಳುವುದು ಮೋಸವಾಗುತ್ತದೆ. ಹೀಗಾಗಿ ನಮ್ಮಿಬ್ಬರ ಜೊತೆ ಮತ್ತೊಬ್ಬರು ಸೇರಿಕೊಳ್ಳಲಿದ್ದಾರೆ'
'ನಮ್ಮ ಕುಟುಂಬಕ್ಕೆ ಶೀಘ್ರದಲ್ಲಿ ಹೊಸ ಅತಿಥಿ ಪ್ರವೇಶಿಸಲಿದ್ದಾರೆ. ನಮ್ಮ ತುಂಟತನಕ್ಕೆ ನಮ್ಮ ಮಗು ಸೇರಿಕೊಳ್ಳಲಿದೆ. ನಮಗೆ ಶುಭ ಕೋರುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಬಿಪಾಶಾ ಬರೆದುಕೊಂಡಿದ್ದಾರೆ.
2014ರಲ್ಲಿ ಬಿಪಾಶಾ ಮತ್ತು ಕರಣ್ ಸಿಂಗ್ ಮೊದಲು ಭೇಟಿಯಾಗಿ ಪ್ರೀತಿಸಲು ಆರಂಭಿಸಿದ್ದರು. 2016, ಏಪ್ರಿಲ್ 30ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.