Bigg Boss Kannada 10: 'ಜೊತೆ ಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ ದೊಡ್ಮನೆಗೆ ಹೋಗ್ತಾರ?
ಕನ್ನಡದ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡದ 10ನೇ ಆವೃತ್ತಿಯ ಅಕ್ಟೋಬರ್ 8ರಿಂದ ಆರಂಭವಾಗಲಿದೆ. ಈ ಬಾರಿ ಸ್ಫರ್ಧಿಗಳಾಗಿರ್ತಾರೆ ಅನ್ನೋದು ಈಗಾಗ್ಲೇ ಕುತೂಹಲ ಮೂಡಿಸಿದೆ. ಅದರಲ್ಲೂ ಜೊತೆ ಜೊತೆಯಲಿ ಸೀರಿಯಲ್ನ ಮೇಘಾ ಶೆಟ್ಟಿ ಬಿಗ್ ಬಾಸ್ಗೆ ಬರ್ತಾರೆ ಅನ್ನೋ ವಿಚಾರ ಹೆಚ್ಚು ಸುದ್ದಿಯಲ್ಲಿದೆ.
ಕನ್ನಡದ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡದ 10ನೇ ಆವೃತ್ತಿಯ ಅಕ್ಟೋಬರ್ 8ರಿಂದ ಆರಂಭವಾಗಲಿದೆ. ಈ ಬಾರಿ ಸ್ಫರ್ಧಿಗಳಾಗಿರ್ತಾರೆ ಅನ್ನೋದು ಈಗಾಗ್ಲೇ ಕುತೂಹಲ ಮೂಡಿಸಿದೆ. ಅದರಲ್ಲೂ ಜೊತೆ ಜೊತೆಯಲಿ ಸೀರಿಯಲ್ನ ಮೇಘಾ ಶೆಟ್ಟಿ ಬಿಗ್ ಬಾಸ್ಗೆ ಬರ್ತಾರೆ ಅನ್ನೋ ವಿಚಾರ ಹೆಚ್ಚು ಸುದ್ದಿಯಲ್ಲಿದೆ.
ಕಲರ್ಸ್ ಕನ್ನಡ ತನ್ನ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಬಿಗ್ ಅಪ್ಡೇಟ್ ನೀಡಿದ್ದು, ಇಂದಿನಿಂದ ಸರಿಯಾಗಿ 10 ದಿನಕ್ಕೆ 10 ನೇ ಆವೃತ್ತಿ ಆರಂಭವಾಗಲಿದೆ. ಅಕ್ಟೋಬರ್ 8ರಂದು ಸಂಜೆ 6 ಗಂಟೆಗೆ ಗ್ರಾಂಡ್ ಪ್ರೀಮಿಯರ್ ನಡೆಯಲಿದೆ. ಜೊತೆಗೆ ಪ್ರತೀ ದಿನ ರಾತ್ರಿ 9.30 ರಿಂದ ಸಂಚಿಕೆ ಪ್ರಸಾರ ಆಗಲಿದೆ.
ಬಿಗ್ಬಾಸ್ ಪ್ರಸಾರಕ್ಕೆ ದಿನಾಂಕ ಆಗ್ತಿರೋ ಹಾಗೆಯೇ ಈ ಬಾರಿ ಸ್ಪರ್ಧಿಗಳಾಗಿ ಯಾರೆಲ್ಲಾ ಇರ್ತಾರೆ ಅನ್ನೋ ಕುತೂಹಲ ಹೆಚ್ಚಿದೆ. ಈ ವರ್ಷ ಹೆಚ್ಚು ಸದ್ದು ಮಾಡಿದ ಕೆಲವೊಬ್ಬರ ಹೆಸರುಗಳು ಈಗಾಗ್ಲೇ ಕೇಳಿ ಬರ್ತಿದೆ. ಅದರಲ್ಲೊಬ್ಬರು ನಟಿ ಮೇಘಾ ಶೆಟ್ಟಿ. ಈ ಬಾರಿ ಕೂಡ ದೊಡ್ಮನೆ ಆಟಕ್ಕೆ ಮೇಘಾ ಜೊತೆಯಾಗುತ್ತಾರೆ ಎಂದೇ ಹೇಳಲಾಗ್ತಿದೆ.
ಪ್ರತಿ ಬಾರಿ ಬಿಗ್ಬಾಸ್ ಆರಂಭ ಆಗೋ ಮುನ್ನ ಸೀರಿಯಲ್ ನಟಿ ಮೇಘಾ ಶೆಟ್ಟಿ ಈ ಬಾರಿಯ ಸೀಸನ್ನಲ್ಲಿರ್ತಾರೆ ಅನ್ನೋ ಮಾತು ಕೇಳಿ ಬರ್ತಿತ್ತು.. ಅದರಂತೆಯೇ ಈ ಬಾರಿ ಕೂಡ ದೊಡ್ಮನೆ ಆಟಕ್ಕೆ ಮೇಘಾ ಜೊತೆಯಾಗುತ್ತಾರೆ ಎಂದೇ ಹೇಳಲಾಗ್ತಿದೆ. ಇನ್ನೊಂದೆಡೆ ಈ ವಿಚಾರ ಜಸ್ಟ್ ಗಾಸಿಪ್ ಅಷ್ಟೇ ನಿಜವಲ್ಲ ಎಂದು ಸಹ ಹೇಳ್ತಿದ್ದಾರೆ.
ಹಲವು ಮಾಹಿತಿಗಳ ಪ್ರಕಾರ, ಜೊತೆ ಜೊತೆಯಲಿ ಫೇಮ್ನ ಮೇಘಾ ಶೆಟ್ಟಿ ಬಿಗ್ಬಾಸ್ಗೆ ಹೋಗ್ತಿಲ್ಲ. ಯಾಕಂದ್ರೆ ಮೇಘಾ ಶೆಟ್ಟಿ, ಈಗಾಗಲೇ ಸಿನಿಮಾ ರಂಗದಲ್ಲಿ ಬಿಝಿಯಾಗಿದ್ದಾರೆ. ಹಲವು ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ 4ರಿಂದ ವಿನಯ್ ರಾಜ್ಕುಮಾರ್ ಜೊತೆಗಿನ 'ಗ್ರಾಮಾಯಣ' ಶೂಟಿಂಗ್ ಶುರುವಾಗುತ್ತಿದೆ. ಇದಕ್ಕಾಗಿ ನಟಿ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗ್ತಿದೆ.
ಗ್ರಾಮಾಯಣ ಚಿತ್ರದಲ್ಲಿ ಮೇಘಾ ಶೆಟ್ಟಿ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸ್ತಿರೋ ಕಾರಣ ಹಲವಾರು ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಈಗಾಗ್ಲೇ ಚಿತ್ರಕ್ಕಾಗಿ ಮೂಗು ಚುಚ್ಚಿಸಿಕೊಂಡಿದ್ದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಇದಲ್ಲದೆ ಚಿತ್ರದ ಶೂಟಿಂಗ್ಗಾಗಿ ಮೇಘಾ ಬೆಂಗಳೂರು ಬಿಟ್ಟು ಬೇರೆ ಕಡೆ ತೆರಳುತ್ತಿದ್ದಾರೆ. ಒಂದು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ.
ಇದಲ್ಲದೆ, ಗ್ರಾಮಾಯಣ ಸಿನಿಮಾ ಜೊತೆಗೆ ಬೇರೆ ಬೇರೆ ಸಿನಿಮಾಗಳನ್ನ ಕೂಡ ನಟಿ ಮೇಘಾ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಧನ್ವೀರ್ ಗೌಡ ಜೊತೆಗಿನ 'ಕೈವ' ಚಿತ್ರ ಕೂಡಾ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಕೂಡ ಸದ್ಯದಲ್ಲೇ ಶುರುವಾಗಲಿದೆ. ಹಾಗಾಗಿ ಬಿಗ್ ಬಾಸ್ಗೆ ಮೇಘಾ ಎಂಟ್ರಿ ಕೊಡೋ ಸಾಧ್ಯತೆ ಕಡಿಮೆ ಎಂದೇ ಹೇಳಲಾಗ್ತಿದೆ.
ಅಕ್ಟೋಬರ್ 8ರಿಂದ ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಕಾರ್ಯಕ್ರಮ ಸಂಜೆ 6ಕ್ಕೆ ಅದ್ದೂರಿಯಾಗಿ ಓಪನಿಂಗ್ ಪಡೆಯಲಿದೆ. ಪ್ರತಿದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ಯಾರೆಲ್ಲಾ ಸ್ಪರ್ಧಿಗಳಾಗಿ ಎಂಟ್ರಿ ಕೊಡುತ್ತಾರೆ ಕಾದುನೋಡಬೇಕಿದೆ.