ಒಟಿಟಿಯಲ್ಲಿವೆ ಕಲ್ಕಿಯ ನಾಗ್ ಅಶ್ವಿನ್ ನಿರ್ದೇಶನದ ನೋಡಲೇಬೇಕಾದ ಚಿತ್ರಗಳು..
ನಾಗ್ ಅಶ್ವಿನ್ ನಿರ್ದೇಶಕರ ಟೋಪಿ ಧರಿಸಿದಾಗಿನಿಂದ ಹಲವು ವಿಭಿನ್ನ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಕೆಲವು ಉತ್ತಮ ಚಿತ್ರಗಳು ಒಟಿಟಿಯಲ್ಲಿ ಲಭ್ಯವಿವೆ. ಮಿಸ್ ಮಾಡ್ದೇ ನೋಡಿ..
nag ashwin
ಕಲ್ಕಿ ಚಿತ್ರ ಚಿತ್ರಮಂದಿರಗಳಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಅದರ ಕತೆ, ಮೇಕಿಂಗ್ ಕೂಡಾ ಭಾರತೀಯ ಚಿತ್ರರಂಗಕ್ಕೆ ಹೊಸತು ಎಂಬ ಹೆಗ್ಗಳಿಕೆ ಪಡೆದಿದೆ.
ಇದರ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಕರ ಟೋಪಿ ಧರಿಸಿದಾಗಿನಿಂದ ಹಲವು ವಿಭಿನ್ನ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ಈ ಕೆಲವು ಉತ್ತಮ ಚಿತ್ರಗಳು ಒಟಿಟಿಯಲ್ಲಿ ಲಭ್ಯವಿವೆ. ಮಿಸ್ ಮಾಡ್ದೇ ನೋಡಿ..
ಮಹಾನಟಿ(2018) - ಅಮೇಜಾನ್ ಪ್ರೈಮ್ ವಿಡಿಯೋ
ಅದ್ಭುತ ತೆಲುಗು ಕಲಾವಿದೆ ಸಾವಿತ್ರಿಯ ಕತೆ ಹೇಳುವ ಮಹಾನಟಿ ನಾಗ್ ಅಶ್ವಿನ್ ನಿರ್ದೇಶನಗಳಲ್ಲೇ ಅತ್ಯುತ್ತಮ ಎನಿಸಿಕೊಂಡಿದೆ. ಇದರಲ್ಲಿ ಕೀರ್ತಿ ಸುರೇಶ್ ನಟನೆ ಮತ್ತು ಚಿತ್ರಕ್ಕೆ ಬಹಳ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಎವಡೆ ಸುಬ್ರಹ್ಮಣ್ಯಂ(2015) - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್
ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಶೂಟ್ ಮಾಡಲಾಗಿರುವ ಚಿತ್ರದಲ್ಲಿ ನಾನಿ ಸಾಫ್ಟ್‌ವೇರ್ ಎಂಜಿನಿಯರ್ ಪಾತ್ರದಲ್ಲಿ ನಟಿಸಿದ್ದಾರೆ. ಚಾರಣವು ಅವರ ಬದುಕಿನೆಡೆಗಿನ ನೋಟವನ್ನು ಹೇಗೆ ಬದಲಿಸುತ್ತದೆ ಎಂಬ ಕತೆ ಇದೆ.
ಪಿತ್ತ ಕಥಾಲು(2021) ನೆಟ್‌ಫ್ಲಿಕ್ಸ್
ಈ ಎಲ್ಲ ಚಿತ್ರಗಳು ನಾಗ್ ಅಶ್ವಿನ್ ಬಹುಮುಖತೆ ಹೇಳುತ್ತವೆ. ಒಂದು ಚಿತ್ರಕ್ಕಿಂತ ಮತ್ತೊಂದು ಚಿತ್ರದ ಜಾನರ್ ಬೇರೆಯೇ ಇದೆ. ಈ ಪಿತ್ತ ಕಥಾಲು ಹಲವು ಒಂದಕ್ಕೊಂದು ಹೆಣೆದುಕೊಂಡ ಕತೆಗಳನ್ನು ಹೊಂದಿದೆ.
ಕಲ್ಕಿ 2898 ಎಡಿ(2024)
ಕಲ್ಕಿಯು ಹಿಂದೂ ದೇವರಾದ ವಿಷ್ಣುವಿನ ಆಧುನಿಕ ಅವತಾರ, ದುಷ್ಟ ಶಕ್ತಿಗಳಿಂದ ಜಗತ್ತನ್ನು ರಕ್ಷಿಸಲು ಭೂಮಿಗೆ ಇಳಿದಿದ್ದಾನೆ ಎಂದು ನಂಬಲಾಗಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ವೈಜ್ಞಾನಿಕ ಆಕ್ಷನ್ ಭಾರತ ಮತ್ತು ವಿಶ್ವಾದ್ಯಂತ ಟಿಕೆಟ್ ಕೌಂಟರ್‌ಗಳಲ್ಲಿ ಜಾಕ್‌ಪಾಟ್ ಹೊಡೆಯುತ್ತಾ ಸಾಗಿದೆ.