ಪ್ರಭಾಸ್ ಮದ್ವೆ ಆಗುವುದೇ ಬೇಡ: ವೇಣುಸ್ವಾಮಿ ಶಾಕಿಂಗ್ ಭವಿಷ್ಯ
ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಮದ್ವೆ ಆದ್ರೆ ಆ ನಟನ ಗತಿನೇ ಬರುತ್ತೆ ಅಂತಿದ್ದಾರೆ ಖ್ಯಾತ ಜ್ಯೋತಿಷಿ ವೇಣುಸ್ವಾಮಿ...

ದಕ್ಷಿಣ ಭಾರತ ಸಿನಿಮಾರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಗಿರುವ 42 ವರ್ಷದ ಪ್ರಭಾಸ್ ಯಾಕೆ ಮದುವೆ ಆಗಿಲ್ಲ ಅನ್ನೋದೆ ಅಭಿಮಾನಿಗಳ ಪ್ರಶ್ನೆ. ಏಕೆಂದರೆ ಹಣ ಇದೆ, ಕೈ ತುಂಬಾ ಸಿನಿಮಾವಿದೆ ಅಲ್ಲದೆ ಬೆಟ್ಟದಷ್ಟು ಪ್ರೀತಿ ಕೊಡುವ ಮನಸ್ಸಿಗೆ.
ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಅವರು ನಟ ಪ್ರಭಾಸ್ ಮದುವೆ ಅಗುವುದೇ ಬೇಡ ಎನ್ನುತ್ತಿದ್ದಾರೆ. ಅಲ್ಲದೆ ಪ್ರಭಾಸ್ ಜೀವನ ಈ ರೀತಿ ಆಗಬಹುದು ಎಂದು ಉದಾಹರಣೆ ಕೂಡ ಕೊಟ್ಟಿದ್ದಾರೆ.
'ಲಕ್ಷದಲ್ಲಿ ಒಬ್ಬರಿಗೆ ಇಂತಹ ಜಾತಕ ಇರುತ್ತದೆ. ಸೂರ್ಯ ಚಂದ್ರ ಶುಕ್ರ ಬುಧ ಗ್ರಹಗಳ ಕಾಂಬಿನೇಷನ್‌ನಿಂದ ಪ್ರಭಾಸ್‌ಗೆ ರಾಜಯೋಗವಿದೆ' ಎಂದು ವೇಣುಸ್ವಾಮಿ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.
'ಹಾಗಾಗಿ ಸಾಕಷ್ಟು ಖ್ಯಾತಿ ಗಳಿಸುತ್ತಾರೆ ಪ್ರಭಾಸ್. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರು ಬರುತ್ತದೆ ಆದರೆ ಮತ್ತೆರಡು ಗ್ರಹಗಳಿಂದ ಸಮಸ್ಯೆ ಎದುರಾಗುತ್ತದೆ' ಎಂದಿದ್ದಾರೆ.
'ನಾಲ್ಕು ಗ್ರಹದಿಂದ ರಾಜಯೋಗ ಸಿಕ್ಕರೂ ಗುರು-ಶನಿ ಗ್ರಹಗಳ ಕಾರಣದಿಂದ ಆ ರಾಜಯೋಗವನ್ನು ಅನುಭವಿಸಲು ಸಾಧ್ಯವಾಗದಂತೆ ಆಗುತ್ತದೆ. ಸಒಳ್ಳೆಯ ಯೋಗ ಬಂದಾಗಲೇ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ' ಎಂದು ವೇಣುಸ್ವಾಮಿ ಹೇಳಿದ್ದಾರೆ.
'ಕಿಡ್ನಿ, ಲಿವರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿ ಸಮಸ್ಯೆ ಪ್ರಭಾಸ್‌ಗೆ ಎದುರಾಗಲಿದೆ. ಪ್ರಭಾಸ್ ಜಾತಕದಲ್ಲಿ ಮದುವೆಗೆ ಸಂಬಂಧಿಸಿ ಸಮಸ್ಯೆ ಇದೆ.'
'ಮದುವೆ ಆಗದೇ ಇರುವುದು, ಮದುವೆ ತಡವಾಗುವುದು, ಅಥವಾ ಮದುವೆ ನಂತರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಮದುವೆ ನಂತರ ಗಂಡ-ಹೆಂಡತಿ ನಡುವೆ ಸಮಸ್ಯೆ ಶುರುವಾಗಬಹುದು. ಆರೋಗ್ಯ ಸಮಸ್ಯೆ ಮುಖ್ಯವಾಗಿ ಕಾಡಬಹುದು' ಎಂದು ಮಾತನಾಡಿದ್ದಾರೆ.
'ಅರವಿಂದ್ ಸ್ವಾಮಿ ಇರಬಹುದು, ಉದಯ್ ಕಿರಣ್ ಇರಬಹುದು ಹೀಗೆ ಬಹಳಷ್ಟು ಜನ ಇದ್ದಾರೆ. ಪ್ರಭಾಸ್ ಅಂದರೆ ಹುಡುಗರಿಗಿಂರ ಹುಡುಗಿಯರಿಗೆ ಹೆಚ್ಚು ಇಷ್ಟ. ಹಾಗಾಗಿ ಜಾತಕದಲ್ಲಿ ಈ ಸಮಸ್ಯೆ ಇರುತ್ತದೆ. ಪರಿಹಾರ ಮಾಡಿಸಿಕೊಂಡರೆ ಪ್ರಭಾಸ್‌ಗೆ ಒಳ್ಳೆಯದಾಗುತ್ತದೆ' ಎಂದು ತಿಳಿಸಿದ್ದಾರೆ.