ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾದ ಅರುಂಧತಿ ಸಿನಿಮಾದ ಪುಟ್ಟ ಜೇಜಮ್ಮ
2009ರ ಸೂಪರ್ ಹಿಟ್ ಸಿನಿಮಾ ಅರುಂಧತಿಯಲ್ಲಿ ಬಾಲ ಜೇಜಮ್ಮನಾಗಿ ನಟಿಸಿದ ಬಾಲ ನಟಿ ದಿವ್ಯ ನಾಗೇಶ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಅನುಷ್ಕಾ ಶೆಟ್ಟಿ (Anushka Shetty) ಟೈಟಲ್ ರೋಲ್ ನಲ್ಲಿ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾ ಅರುಂಧತಿ ನೆನಪಿದೆ ಅಲ್ವಾ? ಈ ಸಿನಿಮಾದಲ್ಲಿ ಅನುಷ್ಕಾ ಜೇಜಮ್ಮನ ಪಾತ್ರದಲ್ಲಿ ನಟಿಸಿದ್ದು, ಅವರ ಬಾಲ್ಯದ ಪಾತ್ರದಲ್ಲಿ ಅಂದ್ರೆ ಪುಟ್ಟ ಜೇಜಮ್ಮನಾಗಿ ಬಾಲ ನಟಿಯೊಬ್ಬರು ಅದ್ಭುತವಾಗಿ ನಟಿಸಿ ಜನಮನ ಗೆದ್ದಿರೋದು ನೆನಪಿದೆ ಅಲ್ವಾ?
ಅರುಂಧತಿ ಸಿನಿಮಾ (Arundhati Film) 2009 ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾದಲ್ಲಿ ಬಾಲ ಜೇಜಮ್ಮನಾಗಿ ನಟಿ ಎಷ್ಟೊಂದು ಗಂಭೀರವಾದ ಪಾತ್ರವನ್ನು ನಿರ್ವಹಿಸಿದ್ದನ್ನು ನೋಡಿ, ವೀಕ್ಷಕರು ಅಚ್ಚರಿಗೊಂಡಿದ್ದರು. ಆ ದೈವೀಕ ಕಳೆಯುಳ್ಳ ಮುಖ, ದೊಡ್ಡದಾದ ಬೊಟ್ಟು, ಧರಿಸಿದ್ದ ಆ ಪುಟ್ಟ ಜೇಜಮ್ಮ ಈಗ ಬೆಳೆದು ದೊಡ್ಡ ಹುಡುಗಿಯಾಗಿದ್ದಾಳೆ. ಅಷ್ಟೇ ಅಲ್ಲ ಮದುವೆಯಾಗೋದಕ್ಕೂ ಸಿದ್ಧವಾಗಿ ನಿಂತಿದ್ದಾರೆ.
ಅರುಂಧತಿ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದ ನಟಿಯ ಹೆಸರು ದಿವ್ಯ ನಾಗೇಶ್ (Divya Nagesh). ಇದೀಗ ಬೆಳೆದು ದೊಡ್ಡವರಾಗಿರುವ ಈ ನಟಿ, ಶೀಘ್ರದಲ್ಲೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ದಿವ್ಯ ಬಾಲನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2004 ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಶೈವಂ' ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ದಿವ್ಯ, ನಂತರ ತೆಲುಗಿನಲ್ಲಿ 'ಅರುಂಧತಿ' ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಆ ನಂತರ ಹಲವಾರು ಸಿನಿಮಾ ಮತ್ತು ಜಾಹೀರಾತುಗಳಲ್ಲಿ (advertisement) ಕಾಣಿಸಿಕೊಂಡರು.
ಇವುಗಳಲ್ಲಿ ದಿವ್ಯ ಅವರಿಗೆ ಹೆಚ್ಚು ಜನಪ್ರಿಯತೆ, ನೇಮ್,ಫೇಮ್ ಕೊಟ್ಟಿದ್ದು ಅರುಂಧತಿ ಸಿನಿಮಾ. ಆದರೆ ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಕೆಲವು ತಿಂಗಳ ಹಿಂದೆ ದಿವ್ಯಾ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅವರು ಮಲಯಾಲಂ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ವಿಷಯವು ತಿಳಿದು ಬಂದಿತ್ತು.
ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಫೋಟೊಗಳನ್ನು (engagement photos) ಶೇರ್ ಮಾಡಿದ್ದು, ನಟಿ ಶೀಘ್ರದಲ್ಲೇ ಮದುವೆಯಾಗಲಿರೋದಾಗಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
ಇನ್ನು ಜನರು ಅನುಷ್ಕಾ ಶೆಟ್ಟಿ ಹೆಸರು ಹೇಳಿ ಟ್ರೋಲ್ ಮಾಡುತ್ತಿದ್ದು, ಅರುಂಧತಿ ಸಿನಿಮಾದಲ್ಲಿ ಬಾಲನಟಿಯಾಗಿದ್ದ ನಟಿನೇ ಮದುವೆ ಆಗ್ತಿದ್ದಾರೆ, ಆದರೆ ನಾಯಕಿ ಮಾತ್ರ ಇನ್ನೂ ಸಿಂಗಲ್ ಎಂದು ತಮಾಷೆ ಮಾಡ್ತಿದ್ದಾರೆ.