ಫುಟ್‌ಪಾತ್‌ನಿಂದ ಫ್ಯಾಮಿಲಿಯ ಕಣ್ಮಣಿಯಾದ ಸಲ್ಮಾನ್‌ಖಾನ್ ತಂಗಿ
ಸಲ್ಮಾನ್ ಖಾನ್ (Salman Khan) ಅವರ ಸಹೋದರಿ ಅರ್ಪಿತಾ ಖಾನ್ (Arpita Khan) ಅವರಿಗೆ 33 ವರ್ಷ. ಆಗಸ್ಟ್ 3 ರಂದು. ಅವರು 1989 ರಲ್ಲಿ ಮುಂಬೈನಲ್ಲಿಯೇ ಜನಿಸಿದ ಅರ್ಪಿತಾರನ್ನು ಸಲ್ಮಾನ್ ತಂದೆ ಸಲೀಂ ಖಾನ್ ದತ್ತು ಪಡೆದಿದ್ದಾರೆ. ವಾಸ್ತವವಾಗಿ, ತನ್ನ ಸತ್ತ ತಾಯಿಯ ಮೃತದೇಹದ ಬಳಿ ರಸ್ತೆ ಬದಿಯ ಫುಟ್‌ಬಾಲ್‌ನಲ್ಲಿ ಅಳುತ್ತಿರುವ ಈ ಚಿಕ್ಕ ಹುಡುಗಿಯನ್ನು ನೋಡಿದ ಸಲೀಂ ಖಾನ್ ತಡೆಯಲಾರದೇ ಮನೆಗೆ ಕರೆತಂದಿದ್ದರು. ನಂತರ ಅವರು ಅವಳನ್ನು ಕಾನೂನುಬದ್ಧವಾಗಿ ದತ್ತು ಪಡೆದು, ಅರ್ಪಿತಾ ಎಂದು ಹೆಸರಿಸಿದರು. ಅಂದಿನಿಂದ ಅರ್ಪಿತಾ ಖಾನ್ ಕುಟುಂಬದ ಭಾಗವಾಗಿದ್ದಾರೆ ಮತ್ತು ಕುಟುಂಬದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅರ್ಪಿತಾ ಖಾನ್ ಅವರ ಜೀವನಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್ ವಿಷಯಗಳು.
ಸಲೀಂ ಖಾನ್ 1981 ರಲ್ಲಿ ಅರ್ಪಿತಾ ಅವರನ್ನು ದತ್ತು ಪಡೆದರು. ವರದಿಗಳ ಪ್ರಕಾರ ಸಲೀಂ ಖಾನ್ ಪ್ರತಿದಿನ ತನ್ನ ಹೆಂಡತಿಯೊಂದಿಗೆ ಬೆಳಿಗ್ಗೆ ವಾಕಿಂಗ್‌ಗೆ ಹೋಗುವಾಗ ಒಂದು ದಿನ ವಾಕಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ,ಫುಟ್ಪಾತ್ ಮೇಲೆ ಮಗು ಅಳುತ್ತಿತ್ತು. ಅದರ ತಾಯಿ ಸತ್ತಿದ್ದರು.
ದಾರಿ ಮೇಲೆ ಪುಟ್ಟ ಬಾಲಕಿ ಅಳುತ್ತಿರುವುದನ್ನು ನೋಡಿದ ಸಲೀಂ ಖಾನ್‌ಗೆ ತಡೆಯಲಾಗಲಿಲ್ಲ. ಹತ್ತಿರ ಹೋಗಿ ಆ ಹುಡುಗಿಯನ್ನು ಮಾತನಾಡಿಸಿ ಅವಳನ್ನು ತನ್ನೊಂದಿಗೆ ಮನೆಗೆ ಕರೆತಂದರು. ಇದಾದ ನಂತರ ಆ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ನಂತರ ಅವರು ತಮ್ಮ ಎರಡನೇ ಪತ್ನಿ ಹೆಲೆನ್ ಜೊತೆಗೆ ಅವಳನ್ನು ದತ್ತು ಪಡೆದರು ಮತ್ತು ಖಾನ್ ಕುಟುಂಬದ ಹೆಣ್ಣು ಮಗುವಾಗಿ ಅರ್ಪಿತಾ ಖಾನ್ ಆದರು.
ಅರ್ಪಿತಾಗೆ ಈ ಹೆಸರು ಬಂದಿರುವುದರ ಹಿಂದೆ ಕುತೂಹಲಕಾರಿ ಕಥೆ ಇದೆ ಎನ್ನಲಾಗಿದೆ. ಸಲೀಂ ಅರ್ಪಿತಾ ಅವರನ್ನು ಮನೆಗೆ ಕರೆತಂದು ದತ್ತು ಪಡೆದಾಗ ಅವರ ಕಾಲೇಜು ಸ್ನೇಹಿತ ಶರದ್ ಜೋಶಿ ಕೂಡ ಇದ್ದರು. ಆಗ ಸಲೀಂ ಹೆಣ್ಣು ಮಗುವಿಗೆ ಹೆಸರಿಡುವ ಬಗ್ಗೆ ಶರದ್ ಜೊತೆ ಮಾತನಾಡಿದಾಗ ಈ ಹುಡುಗಿಯನ್ನು ನಿನಗೆ ಅರ್ಪಿಸಿದರೆ ಅರ್ಪಿತಾ ಆಗಿರಬೇಕು ಎಂದರು. ಸಲೀಂ ಮತ್ತು ಕುಟುಂಬದವರಿಗೂ ಈ ಹೆಸರು ಇಷ್ಟವಾಯಿತು.
ಸಲೀಂ ಖಾನ್ ಅವರ ಐದು ಮಕ್ಕಳಲ್ಲಿ ಅರ್ಪಿತಾ ಕಿರಿಯವರು. ಖಾನ್ ಕುಟುಂಬದಲ್ಲಿ ಸಲ್ಮಾನ್ ಖಾನ್ ಹಿರಿಯರು. ಇದರ ನಂತರ ಅರ್ಬಾಜ್ ಖಾನ್, ಅಲ್ವಿರಾ ಅಗ್ನಿಹೋತ್ರ ಮತ್ತು ಸೊಹೈಲ್ ಖಾನ್. ಅರ್ಪಿತಾ ಲಂಡನ್ ಕಾಲೇಜ್ ಆಫ್ ಫ್ಯಾಶನ್‌ನಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.
ಅರ್ಪಿತಾ ಖಾನ್ ಡಿಸೆಂಬರ್ 2014 ರಲ್ಲಿ ಆಯುಷ್ ಶರ್ಮಾ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮಗ ಅಹಿಲ್ ಮತ್ತು ಮಗಳು ಆಯತ್. ಆಯುಷ್ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಇಲ್ಲಿಯವರೆಗೆ 2 ಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಇವೆರಡೂ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿವೆ.
ಅರ್ಪಿತಾ ಮತ್ತು ಆಯುಷ್ ಮೊದಲು ಭೇಟಿಯಾದದ್ದು ಪಾರ್ಟಿಯೊಂದರಲ್ಲಿ. ಅರ್ಪಿತಾರನ್ನು ನೋಡಿದ ಆಯುಷ್ ಮನಸೋತರು ನಂತರ ಅವರ ಭೇಟಿ ಪ್ರೀತಿಗೆ ತಿರುಗಿತು ಮತ್ತು ಕೆಲವು ದಿನಗಳ ಡೇಟಿಂಗ್ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಸಲ್ಮಾನ್ ಖಾನ್ ಹೈದರಾಬಾದ್‌ನ ಫಲಕ್ನುಮಾ ಪ್ಯಾಲೇಸ್ ಹೋಟೆಲ್‌ನಲ್ಲಿ ತಮ್ಮ ಸಹೋದರಿಯ ವಿವಾಹ ಆಯೊಜಿಸಿದ್ದರು ಈ ಮದುವೆಯಲ್ಲಿ ಹಲವು ಬಾಲಿವುಡ್ ತಾರೆಯರು ಭಾಗಿಯಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದವು.