ಮೊದಲ ಬಾರಿಗೆ 'ಕಾನ್' ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ರಿಯಾಕ್ಷನ್ ಹೀಗಿತ್ತು
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೊದಲ ಬಾರಿಗೆ ಪ್ರತಿಷ್ಠಿತ ಕಾನ್ ಫೆಸ್ಟಿವಲ್‍ನಲ್ಲಿ ಹೆಜ್ಜೆ ಹಾಕಿದ್ದಾರೆ. ಬಿಳಿ ಗೌನ್‌ನಲ್ಲಿ ಮಿಂಚಿದ ಅನುಷ್ಕಾ ಫೋಟೋಗಳು ವೈರಲ್ ಆಗಿವೆ.
76ನೇ ಕಾನ್ ಫಿಲ್ಮ್ ಫೆಸ್ಟಿವಲ್ ಅದ್ದೂರಿಯಾಗಿ ನಡೆಯುತ್ತಿದೆ. ಚಿತ್ರೋತ್ಸವದಲ್ಲಿ ಜಗತ್ತಿನ ಸಿನಿಮಾ ತಾರೆಯರು ಗಮನ ಸೆಳೆಯುತ್ತಿದ್ದಾರೆ. ಅನೇಕ ದೇಶದ ಸಿನಿ ಗಣ್ಯರು ಕಾನ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಅನೇಕ ಗಣ್ಯರು ಸಹ ಕಾನ್ ರರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ಕೂಡ ಕಾನ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿಗೆ ಅನುಷ್ಕಾ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದು ರೆಡ್ ಕಾರ್ಪೆಟ್ ವಾಕ್ ಮಾಡಿದ್ದಾರೆ.
ಅನುಷ್ಕಾ ಮೊದಲ ಬಾರಿಗೆ ಕಾನ್‌ನಲ್ಲಿ ಹೆಜ್ಜೆ ಹಾಕಿದ್ದು ಬಳಿ ರಿಚರ್ಡ್ ಕ್ವಿನ್‌ಗೆಫ್ಲೋರಲ್ ಗೌನ್‌ನಲ್ಲಿ ಮಿಂಚಿದರು. ಅನುಷ್ಕಾ ಧರಿಸಿದ್ದ ಗೌನ್ ಅನ್ನು ಖ್ಯಾತ ಫ್ಯಾಷನ್ ಡಿಸೈನರ್ ರಿಚರ್ಡ್ ಕ್ವಿನ್ ಡಿಸೈನ್ ಮಾಡಿದ್ದಾರೆ.
ಆಫ್ ಶೋಲ್ಡರ್ ನೆಕ್‌ಲೈನ್ ಹೊಂದಿದ್ದ ಅನುಷ್ಕಾ ಬಿಳಿ ಗೌನ್ ಅಭಿಮಾನಿಗಳ ಗಮನ ಸೆಳೆದಿದೆ. ಅನುಷ್ಕಾ ಕ್ಯಾಮರಾಗೆ ಮಸ್ತ್ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅನುಷ್ಕಾ ಸುಂದರ ಫೋಟೋಗಳಿಗೆ ತರಹೇವಾರಿ ಕಾಮೆಂಟ್ ಹರಿದು ಬಂದಿವೆ. ಅನೇಕ ಸೆಲೆಬ್ರಿಟಿಗಳು ಪ್ರಿತಿಕ್ರಿಯೆ ನೀಡಿದ್ದಾರೆ. ಹಾರ್ಟ್ ಇಮೋಜಿ ಹಾಕಿದ್ದಾರೆ. ಪ್ರೀತಿ ಜಿಂಟಾ, ಜೋಯಾ ಅಖ್ತರ್ ಸೇರಿದಂತೆ ಪ್ರತಿಕ್ರಿಯೆ ನೀಡಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.
ಇನ್ನು ಅನುಷ್ಕಾ ಶರ್ಮಾ ಪತಿ, ಖ್ಯಾತ ಕ್ರಿಕೆಟಿಗ ನಿರಟ್ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿಯ ಸುಂದರ ಫೋಟೋಗಳನ್ನು ನೋಡಿ ವಿರಾಟ್ ಹಾರ್ಟ್ ಇಮೋಜಿ ಹಾಕಿದ್ದಾರೆ.
ಅನುಷ್ಕಾ ಶರ್ಮಾ ಸಿನಿಮಾ ವಿಚಾರಕ್ಕೆ ಬರುವುದಾದರೆ ತೆರೆಮೇಲೆ ಬರದೇ ಅನೇಕ ವರ್ಷಗಳೇ ಆಗಿದೆ. ಕೊನೆಯದಾಗಿ ಅನುಷ್ಕಾ ಶಾರುಖ್ ಖಾನ್ ಜೊತೆ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಚಕ್ದಾ ಎಕ್ಸ್ ಪ್ರೆಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.