ಅನುಷ್ಕಾ ಶರ್ಮಾ- ಆಲಿಯಾ ಭಟ್: ಈ ನಟಿಯರು ಯಶಸ್ವೀ ಉದ್ಯಮಿಗಳು ಕೂಡ!
ಬಾಲಿವುಡ್ನ ಹಲವು ನಟಿಯರು ನಟನೆ ಮತ್ತು ಸಿನಿಮಾ ಜೊತೆ ತಮ್ಮನ್ನು ಬೇರೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ಬ್ಯುಸಿನೆಸ್ ಒಂದು. ಇವರುಗಳು ಫೇಮಸ್ ಸ್ಟಾರ್ಸ್ ಜೊತೆ ಉದ್ಯಮಿಗಳು ಕೂಡ ಹೌದು ಈ ಪಟ್ಟಿಯಲ್ಲಿ ಯಾರಾರು ಇದ್ದಾರೆ ನೋಡೋಣ.
ಬಾಲಿವುಡ್ ನಟಿಯರಲ್ಲಿ ಅನೇಕರು ತಮ್ಮದೇ ಆದ ಸ್ವಂತ ವ್ಯಾಪಾರಗಳನ್ನು ಸ್ಥಾಪಿಸಿದ್ದಾರೆ ಮತ್ತು ಅವರು ಸಿನಿಮಾರಂಗದ ಜೊತೆಗೆ ಬ್ಯುಸಿನೆಸ್ ವರ್ಲ್ಡ್ನಲ್ಲೂ ತಮ್ಮ ಹೆಸರನ್ನು ಸ್ಥಾಪಿಸಿದ್ದಾರೆ. ಯಶಸ್ವಿ ಉದ್ಯಮಿಗಳಾದ ಬಾಲಿವುಡ್ನ ಪ್ರಸಿದ್ಧ ಮಹಿಳೆಯರು ಇಲ್ಲಿದ್ದಾರೆ.
ಆಲಿಯಾ ಭಟ್: ಆಲಿಯಾ ಭಟ್ ತನ್ನದೇ ಬಟ್ಟೆಯ ಬ್ರಾಂಢ್ ಅನ್ನು ಮಕ್ಕಳಿಗಾಗಿ ಆರಂಭಿಸಿದ್ದಾರೆ. ಆಲಿಯಾರ 'ಎಡ್-ಎ-ಮಮ್ಮಾ' (Ed-a-Mamma) ಬ್ರಾಂಡ್ ಅಡಿಯಲ್ಲಿ 2-14 ವರ್ಷ ವಯಸ್ಸಿನ ಮಕ್ಕಳ ಬಟ್ಟೆ ಪೂರೈಸುತ್ತಾರೆ. ಅವರು ಸ್ಟೈಲ್ ಕ್ರ್ಯಾಕರ್ ಮತ್ತು ನೈಕಾ ಮುಂತಾದ ಕಂಪನಿಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.
ಅನುಷ್ಕಾ ಶರ್ಮಾ: ಅನುಷ್ಕಾ ಶರ್ಮಾ ತಮ್ಮದೇ ಆದ ಕ್ಲೀನ್ ಸ್ಲೇಟ್ ಫಿಲ್ಮ್ಜ್ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದರಡಿಯಲ್ಲಿ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡಿದ್ದಾರೆ ನಟಿ. ಜೊತೆಗೆ ನಟಿ 2017 ರಲ್ಲಿ ನುಶ್ ಎಂಬ ಬಟ್ಟೆಯ ಬ್ರಾಂಡ್ ಅನ್ನು ಪ್ರಾರಂಭಿಸಿದರು.
ಪ್ರಿಯಾಂಕಾ ಚೋಪ್ರಾ: ಬಾಲಿವುಡ್ ಜೊತೆ ಹಾಲಿವುಡ್ನಲ್ಲೂ ಸಾಕಷ್ಟು ಜನಪ್ರಿಯವಾಗಿದ್ದಾರೆ ಈ ನಟಿ . ಈ ವರ್ಷ ಮಾರ್ಚ್ನಲ್ಲಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್ನಲ್ಲಿ ಸೋನಾ ಎಂಬ ಹೆಸರಿನ ತಮ್ಮ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಅವರು ಅನೋಮಲಿ ಹೆಸರಿನ ಹೇರ್ಕೇರ್ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ. ಇದರ ಜೊತೆಗೆ ನಟಿ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ.
ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ, 2017 ರಲ್ಲಿ 'ಕೆಎ ಎಂಟರ್ಪ್ರೈಸಸ್' ಅನ್ನು ಸ್ಥಾಪಿಸಿದರು. ಇದು ಎಪಿಗಾಮಿಯಾ, ಹಾಬಿ ಬೇಸ್ಡ್ ಸ್ಟಾರ್ಟ್ಅಪ್ಗಳು ಮತ್ತು ಹೆಚ್ಚಿನ ಬ್ರಾಂಡ್ಗಳಲ್ಲಿ ಹೂಡಿಕೆ ಮಾಡಿದೆ. ಈಗ ದೀಪಿಕಾ ಭಾರತದಲ್ಲಿ ಬೇರೂರಿರುವ ಒಂದು ಗ್ಲೋಬಲ್ ಲೈಫ್ಸ್ಟೈಲ್ ಬ್ರಾಂಡ್ ಅನ್ನು ಪ್ರಾರಂಭಿಸಿಲಿದ್ದಾರೆ.
ಕತ್ರಿನಾ ಕೈಫ್: ಕತ್ರಿನಾ ಕೈಫ್ ಕೇ ಬ್ಯೂಟಿ ಮೂಲಕ ಬ್ಯುಸಿನೆಸ್ ವರ್ಲ್ಡ್ಗೆ ಕಾಲಿಟ್ಟು ಉದ್ಯಮಿಯಾಗಿದ್ದಾರೆ. ಇದು ಅವರ ಕಾಸ್ಮೆಟಿಕ್ ಕಂಪೆನಿಯಾಗಿದೆ. ಕತ್ರೀನಾ ತಮ್ಮ ಈ ಬ್ರಾಂಡ್ ಅನ್ನು. ನೈಕಾದಲ್ಲಿ ಲಾಂಚ್ ಮಾಡಿದ್ದರು.