ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲೇ ದುಬಾರಿ ಕಾರು ಖರೀದಿಸಿದ Shanaya Kapoor
ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಅವರ ತಮ್ಮನ್ನ ಮಗಳು ಶನಯಾ ಕಪೂರ್ (Shanaya Kapoor) ಹೊಸ ಕಾರು ಖರೀದಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಶನಯಾ ತಮ್ಮ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಕಾರಿನೊಂದಿಗೆ ಪೋಸ್ ನೀಡುತ್ತಿದ್ದಾರೆ ಮತ್ತು ಇತರ ಫೋಟೋಗಳಲ್ಲಿ ಆಕೆಯ ಪೋಷಕರು ಮಹೀಪ್ ಕಪೂರ್ ಮತ್ತು ಸಂಜಯ್ ಕಪೂರ್ (Sanjay Kpaoor) ಜೊತೆ ಕಾಣಿಸಿಕೊಂಡಿದ್ದಾರೆ.
ಶನಾಯಾ ತನ್ನ ಹೊಸ ಕಾರಿನ ಬಗ್ಗೆ ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದಾರೆ ಎಂಬುದು ಫೋಟೋಗಳಿಂದ ಸ್ಪಷ್ಟವಾಗಿದೆ. ಶನಾಯಾ ಅವರು ಐಷಾರಾಮಿ ಆಡಿ ಕ್ಯೂ 7 ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 80 ಲಕ್ಷ ರೂ.
ಶನಯಾ ಕಪೂರ್ ತಮ್ಮ ಕಪ್ಪು ಬಣ್ಣದ ಕಾರಿನ ಫೋಟೋಗಳನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ. ಶನಾಯಾ ಕಾರಿನ ಜೊತೆ ಬಿಳಿ ಡ್ರೆಸ್‌ನಲ್ಲಿ ಪೋಸ್ ನೀಡಿರುವುದು ಫೋಟೋಗಳಲ್ಲಿ ಕಂಡುಬರುತ್ತದೆ.ಅವರ ಕೂದಲು ತೆರೆದಿದೆ ಮತ್ತು ಅವರು ಮೇಕ್ಅಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ.ಈ ಸಮಯದಲ್ಲಿ, ಅವರ ತಂದೆ ಸಂಜಯ್ ಕಪೂರ್ ಅವರು ಕ್ಯಾಪ್ ಮತ್ತು ಕನ್ನಡಕಗಳನ್ನು ಧರಿಸಿ ಕಾರಿನಲ್ಲಿ ನಿಂತು ಪೋಸ್ ನೀಡುತ್ತಿದ್ದಾರೆ.
ಶನಯಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಬಹಳ ಸಮಯದಿಂದ ತಯಾರಿ ನಡೆಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡುವುದನ್ನು ಅಥವಾ ನೃತ್ಯವನ್ನು ಅಭ್ಯಾಸ ಮಾಡುವುದನ್ನು ಕಾಣಬಹುದು.ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಸಹ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದು ಮಾತ್ರವಲ್ಲದೆ, ಅವರು ತಮ್ಮ ಡೆಬ್ಯೂ ಎಂಟ್ರಿಗೂ ಮುನ್ನ ಅನೇಕ ಬೋಲ್ಡ್ ಫೋಟೋಶೂಟ್‌ಗಳನ್ನು ಸಹ ಮಾಡಿದ್ದಾರೆ ಮತ್ತು ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Image: Karan Johar/Instagram
ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ತಮ್ಮ ಚಲನಚಿತ್ರಗಳ ಮೂಲಕ ಅನೇಕ ಸ್ಟಾರ್ ಕಿಡ್ಸ್ ಅನ್ನು ಲಾಂಚ್ ಕೂಡ ಮಾಡಿದ್ದಾರೆ ಮತ್ತು ಈಗ ಅವರು ತಮ್ಮ ಬೇಧಡಕ್ ಚಿತ್ರದಲ್ಲಿ ಶನಯಾ ಕಪೂರ್ ಅವರನ್ನು ಪರಿಚಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಕರಣ್ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಚಿತ್ರವನ್ನು ಘೋಷಿಸಿ ಅನೇಕ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿದ್ದಾರೆ.
Image: Karan Johar/Instagram
ಇದೇ ವೇಳೆ ಶನಯಾ ಪೋಸ್ಟರ್ ಶೇರ್ ಮಾಡಿ 'ನಿರ್ದೇಶಕ ಶಶಾಂಕ್ ಖೇತಾನ್ ನಿರ್ದೇಶನದ ಬೇಧಡಕ್ ಚಿತ್ರದೊಂದಿಗೆ ಧರ್ಮ ಕುಟುಂಬವನ್ನು ಸೇರಲು ನಾನು ಕೃತಜ್ಞನಾಗಿದ್ದೇನೆ ಮತ್ತು ಉತ್ಸುಕಳಾಗಿದ್ದೇನೆ. ನನ್ನ ಈ ಪ್ರಯಾಣವನ್ನು ಪ್ರಾರಂಭಿಸಲು ಕಾಯಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದರು.