- Home
- Entertainment
- Cine World
- 'ಆಂಧ್ರ ಕಿಂಗ್ ತಾಲೂಕ' ಚಿತ್ರದಲ್ಲಿ ನಾನು ಸೂಪರ್ ಸ್ಟಾರ್ ಪಾತ್ರ ಮಾಡಿದ್ದೇನೆ: ಉಪೇಂದ್ರ ಹೇಳಿದ್ದೇನು?
'ಆಂಧ್ರ ಕಿಂಗ್ ತಾಲೂಕ' ಚಿತ್ರದಲ್ಲಿ ನಾನು ಸೂಪರ್ ಸ್ಟಾರ್ ಪಾತ್ರ ಮಾಡಿದ್ದೇನೆ: ಉಪೇಂದ್ರ ಹೇಳಿದ್ದೇನು?
ನಾನು ಬೇರೆ ಭಾಷೆಗಳಲ್ಲಿ ತುಂಬಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಆಂಧ್ರ ಕಿಂಗ್ ತಾಲೂಕ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣ ಸೂರ್ಯ ಕುಮಾರ್ ಎನ್ನುವ ಪಾತ್ರ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಪ್ರಮುಖ ಪಾತ್ರದಲ್ಲಿ ಉಪೇಂದ್ರ
ತೆಲುಗಿನ ರಾಮ್ ಪೋತಿನೇನಿ ನಾಯಕನಾಗಿ, ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನ.27ಕ್ಕೆ ಸಿನಿಮಾ ತೆರೆಗೆ ಬರಲಿದೆ.
ಸೂರ್ಯ ಕುಮಾರ್ ಪಾತ್ರದಲ್ಲಿ ಉಪ್ಪಿ
ಈ ಚಿತ್ರದ ಕುರಿತು ಉಪೇಂದ್ರ, ನಾನು ಬೇರೆ ಭಾಷೆಗಳಲ್ಲಿ ತುಂಬಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಆಂಧ್ರ ಕಿಂಗ್ ತಾಲೂಕ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣ ಸೂರ್ಯ ಕುಮಾರ್ ಎನ್ನುವ ಪಾತ್ರ.
ತುಂಬಾ ಹತ್ತಿರವಾದ ಪಾತ್ರ
ಅಭಿಮಾನಿಗಳೇ ಹೀರೋಗಳು, ಲೀಡರ್‌ಗಳು ಅಂತ ನಾನು ಹೇಳುತ್ತಿದ್ದೆ ಅಲ್ವಾ ಅದೇ ರೀತಿಯ ಪಾತ್ರ ಆಗಿರುವ ಕಾರಣಕ್ಕೆ ಈ ಚಿತ್ರ ಒಪ್ಪಿಕೊಂಡೆ. ನನ್ನ ವೈಯಕ್ತಿಕ ನಿಲುವುಗಳಿಗೆ ತುಂಬಾ ಹತ್ತಿರವಾದ ಪಾತ್ರ ಇದು. ಅಭಿಮಾನಿ ಮತ್ತು ಸೂಪರ್ ಸ್ಟಾರ್ ನಡುವೆ ಸಾಗುವ ಕತೆ ಇದು’ ಎಂದು ಹೇಳಿದರು.
ತೆಲುಗಿನಲ್ಲಿ 9ನೇ ಸಿನಿಮಾ
ಇನ್ನು ಉಪೇಂದ್ರ ಅವರಿಗೆ ತೆಲುಗಿನಲ್ಲಿ ಇದು 9ನೇ ಸಿನಿಮಾ. ತೆಲುಗು ಚಿತ್ರಂಗದಲ್ಲಿಯೂ ಸಹ ಉಪ್ಪಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಬಾರಿ ಸ್ಟಾರ್ ಹೀರೋ ಆಗಿಯೇ ಉಪ್ಪಿ ನಟಿಸಿದ್ದು ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ಇದೆ.
ಈ ಚಿತ್ರದಲ್ಲಿ ನಾನು ಉಪೇಂದ್ರ ಅಭಿಮಾನಿ
ರಾಮ್ ಪೋತಿನೇನಿ, ನಾನು ಈ ಚಿತ್ರದಲ್ಲಿ ಉಪೇಂದ್ರ ಅಭಿಮಾನಿಯಾಗಿ ನಟಿಸಿದ್ದೇನೆ ಎಂದರು. ಮಹೇಶ್ ಬಾಬು ನಿರ್ದೇಶನದ ಚಿತ್ರವನ್ನು ನವೀನ್ ಯೆರ್ನೇನಿ, ವೈ. ರವಿಶಂಕರ್ ನಿರ್ಮಿಸಿದ್ದಾರೆ. ಭಾಗ್ಯಶ್ರೀ ಬೋರ್ಸೆ ನಾಯಕಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

