ಗಂಡನೊಂದಿಗೆ ಗುಟ್ಟಾಗಿ ಮಾಡೋದನ್ನು ಎಲ್ಲರ ಮುಂದೆ ಹೇಳಿದ ನಟಿ ಅನುಸೂಯ!
ಟಾಲಿವುಡ್ ನಟಿ ಮತ್ತು ನಿರೂಪಕಿ ಅನಸೂಯಾ ಬಗ್ಗೆ ಯಾರಿಗೆ ಪರಿಚಯವಿಲ್ಲ ಹೇಳಿ. ತನ್ನ ನಟನೆಗಿಂತ ದೊಡ್ಡವರ ಬಗ್ಗೆ ಟೀಕೆ ಮಾಡಿಯೇ ವಿವಾದದ ಮೂಲಕ ಖ್ಯಾತಿಯಲ್ಲಿದ್ದಾರೆ. ಇದೀಗ ಅನಸೂಯಾ ತಮ್ಮ ಸಂಸಾರದ ಬಗ್ಗೆ ಬೋಲ್ಡ್ ಆಗಿ ಅಭಿಪ್ರಾಯಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ.

ಕನ್ನಡದಲ್ಲಿ ನಿರೂಪಣೆಯಲ್ಲಿ ಅನುಶ್ರಿ ಹೇಗೋ ಅದೇ ರೀತಿ ತೆಲುಗುನಲ್ಲಿ ಅನುಸೂಯಾ ದೊಡ್ಡ ನಿರೂಪಕಿ ಹಾಗೂ ನಟಿ ಆಗಿದ್ದಾರೆ. ಆದರೆ, ನಮ್ಮ ಅನುಶ್ರಿ ನಿರೂಪಣೆ ಮುಗಿದ ನಂತರ ತಾನಾಯ್ತು, ತನ್ನ ಕೆಲಸವಾಯ್ತು ಎಂದಿರುತ್ತಾರೆ. ತೆಲುಗು ನಿರೂಪಕಿ ಅನುಸೂಯಾ ಹಾಗಲ್ಲ. ಯಾವ ನಟರು ಇರಲಿ, ನಿರ್ದೇಶಕ ಇರಲಿ ಅಥವಾ ಸಂಸಾರದ ವಿಷಯವಾಗಿರಲಿ ಬಾಯಿಗೆ ಫೀಲ್ಟರ್ ಇಲ್ಲದೆ ಮಾತನಾಡುತ್ತಾರೆ. ಇದೀಗ ತಮ್ಮದೇ ಸಂಸಾರದ ಬಗ್ಗೆ ಮಾತನಾಡಿದ್ದಾರೆ.
ಅನಸೂಯ ಭಾರದ್ವಾಜ್
ಟಿವಿ ಕಾರ್ಯಕ್ರಮದಲ್ಲಿ ಅನಸೂಯಾ ಮಾಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಪತಿ-ಪತ್ನಿಯರ ಸಂಬಂಧದ ಬಗ್ಗೆ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ಅನಸೂಯಾ ಪತಿ ಸುಶಾಂತ್ ಭಾರದ್ವಾಜ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಅನಸೂಯಾ ಮತ್ತು ಅವರ ಪತಿ ಇನ್ನೂ ಜಗಳವಾಡುತ್ತಾರೆ. ಗಂಡ ಹೆಂಡತಿಯರು ಸಂಬಂಧದಲ್ಲಿರುವಾಗ ಜಗಳವಾಡುವುದು ಸಹಜ. ಜಗಳಗಳಿಲ್ಲದಿದ್ದರೆ ಅದು ನಿಜವಾದ ಸಂಬಂಧವಲ್ಲ ಎಂದು ಹೇಳಿದರು.
ಈಗಲೂ ನಾನು ಅವನ ಜೊತೆ ವಾದ ಮಾಡುತ್ತೇನೆ ಮತ್ತು ಸಾಂದರ್ಭಿಕವಾಗಿ ನನ್ನ ಊರಿಗೆ ಹೋಗುತ್ತೇನೆ. ಅದು ನನಗೆ ಖುಷಿ ಕೊಡುತ್ತದೆ. ನಮ್ಮಿಬ್ಬರ ನಡುವೆ ಜಗಳವಾದಾಗ ಮಾತ್ರವಲ್ಲ, ಸಂತೋಷವಾಗಿದ್ದಾಗಲೂ ನನ್ನ ಊರಿಗೆ ಹೋಗು ಎನ್ನುತ್ತಾರೆ. ನಾನು ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ತಾಯಿಯ ಮನೆಯ ಫೋಟೋವನ್ನು ಹಂಚಿಕೊಂಡರೆ, ನಾನು ಅವನೊಂದಿಗೆ ಜಗಳವಾಡುತ್ತಿದ್ದೇನೆ ಎಂದು ನೀವು ತಿಳಿದುಕೊಳ್ಳಬಹುದು ಎಂದು ಅನುಸೂಯ ಹೇಳಿದ್ದಾರೆ.
ಪ್ರೀತಿ ವಾತ್ಸಲ್ಯ ಇದೆ. ಡೇಟ್‌ಗೆ ಹೋಗುತ್ತೇವೆ. ಮದುವೆ ವಾರ್ಷಿಕೋತ್ಸವಕ್ಕೆ ಮಕ್ಕಳನ್ನು ದೂರವಿಡುತ್ತೇನೆ. ಆ ದಿನ ನಾವಿಬ್ಬರೂ ಆತ್ಮೀಯವಾಗಿರುತ್ತೇವೆ.
ಅದೇ ಸಮಯದಲ್ಲಿ, ನಮ್ಮಿಬ್ಬರ ನಡುವೆ ಪ್ರೀತಿ ಮತ್ತು ವಾತ್ಸಲ್ಯವೂ ಇದೆ. ಒಟ್ಟಿಗೆ ಡೇಟಿಂಗ್‌ಗೆ ಹೋಗುತ್ತೇವೆ. ಮದುವೆ ದಿನಾಚರಣೆ ಬಂದಾಗ, ನಾನು ನಮ್ಮ ಮಕ್ಕಳನ್ನೂ ದೂರವಿಡುತ್ತೇನೆ. ನನ್ನ ತಾಯಿ ಅವರನ್ನು ಮನೆಗೆ ಕಳುಹಿಸುತ್ತಾರೆ. ನನ್ನ ಮದುವೆಯ ದಿನವು ನನ್ನ ಮತ್ತು ನನ್ನ ಗಂಡನಿಗೆ ಸೀಮಿತ. ಆ ದಿನ ನಾವಿಬ್ಬರೂ ಆತ್ಮೀಯರಾಗಿರುವುದು ಬಹಳ ಮುಖ್ಯವಾಗಿತ್ತು. ಆ ದಿನ ನಾನು ಮತ್ತು ನನ್ನ ಪತಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹತ್ತಿರವಾಗುತ್ತೇವೆ ಎಂದು ಅನಸೂಯಾ ಹೇಳಿದರು.