Ananya Panday ಕಿಲ್ಲರ್ ಲುಕ್ ; ಸ್ವೀಮ್‌ಸೂಟ್‌ನ ಫೋಟೋ ವೈರಲ್!
ಜನಪ್ರಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾದ ಅನನ್ಯಾ ಪಾಂಡೆ (Ananya Panday) ಸಿನಿಮಾಗಳಿಂದ ಹೆಸರು ಮಾಡದಿರು ಸಹ ತನ್ನ ಬೋಲ್ಡ್ ಆವಾತರದಿಂದ ಆಗಾಗ ಸುದ್ದಿ ಮಾಡುತ್ತಾರೆ. ಇತ್ತೀಚೆಗೆ ಅನನ್ಯಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಬಿಕಿನಿ ತೊಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಫೋಟೋ ಸಖತ್ ವೈರಲ್ ಆಗಿವೆ. ಅನನ್ಯಾರ ಬಿಎಫ್ಎಫ್ ಸುಹಾನಾ ಖಾನ್ ಶನಯಾ ಕಪೂರ್ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ, ಅನನ್ಯಾ ಪಾಂಡೆ ಅವರು ಬಿಕಿನಿ ಧರಿಸಿರುವ ಕೆಲವು ಥ್ರೋಬ್ಯಾಕ್ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅನನ್ಯಾ ಪಾಂಡೆ ಸ್ವೀಮ್‌ಸೂಟ್ ಫೋಟೋಗಳಲ್ಲಿ ತನ್ನ ಕಿಲ್ಲರ್ ಲುಕ್ ಅನ್ನು ತೋರಿಸಿದ್ದಾರೆ.
ಇದು ಅವರ ಥ್ರೋಬ್ಯಾಕ್ ಫೋಟೋಗಳಾಗಿವೆ. ಇವು ಗೆಹ್ರಾಯಿಯಾ ಸಿನಿಮಾದ ಸಮಯದ ಥ್ರೋಬ್ಯಾಕ್ ಫೋಟೋಗಳು ಎಂದು ನಟಿ ಕ್ಯಾಪ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ. ಅವರು ಆಕಾಶ-ಬಣ್ಣದ ಟೂ ಪೀಸ್ ಸ್ವೀಮ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಕಿನಿ ಮೇಲೆ ಆರೆಂಜ್ ಬಣ್ಣದ ಶ್ರಗ್ ಧರಿಸಿದ್ದಾರೆ. ತೆರೆದ ಕೂದಲಿನಲ್ಲಿ ಮತ್ತು ಮೇಕ್ಅಪ್ ಇಲ್ಲದೆಯೂ ಅನನ್ಯಾ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಅನನ್ಯಾ ಪಾಂಡೆಯ ಕಿಲ್ಲರ್ ಲುಕ್ ನೋಡಿ ಆಕೆಯ ಇಬ್ಬರು ಸ್ನೇಹಿತೆಯರಾದ ಸುಹಾನಾ ಖಾನ್ ಮತ್ತು ಶನಯಾ ಕಪೂರ್ ಫಿದಾ ಆಗಿದ್ದಾರೆ ಮತ್ತು ಫೋಟೋಗೆ ಕಮೆಂಟ್ ಮಾಡಿದ್ದಾರೆ
ಇಷ್ಟೇ ಅಲ್ಲ, ಶನಾಯಾ ಅವರ ತಾಯಿ ಮಹೀಪ್ ಕಪೂರ್ ಕಾಮೆಂಟ್‌ನಲ್ಲಿ ಬೆಂಕಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅನನ್ಯಾ ಅವರ ದೊಡ್ಡಮ್ಮ ಡೀನ್ ಪಾಂಡೆ, ಸೀಮಾ ಖಾನ್, ಪುನೀತ್ ಮಲ್ಹೋತ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ. ಇದಲ್ಲದೆ, ಅಭಿಮಾನಿಗಳು ಅವಳನ್ನು ಸೂಪರ್ ಹಾಟ್, ಸೆಕ್ಸಿ, ಫ್ಯಾಬುಲಸ್, ಗಾರ್ಜಿಯಸ್, ಕ್ಯೂಟ್ ಎಂದೂ ಕರೆದಿದ್ದಾರೆ.
ಅನನ್ಯಾ ಇತ್ತೀಚೆಗೆ ಗೆಹ್ರಾಯಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಯಾಗಿದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಅನನ್ಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ.
ಅನನ್ಯಾ ಪಾಂಡೆ ಅವರ ವೃತ್ತಿಜೀವನವು ಇಲ್ಲಿಯವರೆಗೆ ವಿಶೇಷವಾದದ್ದೇನೂ ಆಗಿಲ್ಲ. ಅವರು ಧರ್ಮ ಪ್ರೊಡಕ್ಷನ್‌ನ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು, ಆದರೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಇದಾದ ನಂತರ ಪತಿ,ಪತ್ನಿ ಔರ್ ವೋ ಮತ್ತು ಖಾಲಿ ಪೀಲಿಯಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಯಶಸ್ಸು ಗಳಿಸಲಿಲ್ಲ
ಕೆಲಸದ ಮುಂಭಾಗದಲ್ಲಿ, ಅವರು ದಕ್ಷಿಣ ನಟ ವಿಜಯ್ ದೇವರಕೊಂಡ ಅವರೊಂದಿಗೆ ಲಿಗರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ಇದರ ಹೊರತಾಗಿ, ಅವರು ಅರ್ಜುನ್ ವರೆನ್ ಸಿಂಗ್ ಅವರ ಸಿನಿಮಾ ಖೋ ಗಯೇ ಹಮ್ ಕಹಾನಲ್ಲಿ ಸಿದ್ಧಾಂತ್ ಚತುರ್ವೇದಿ ಎದುರು ಕಾಣಿಸಿಕೊಳ್ಳಲಿದ್ದಾರೆ.