ಬಾಲಿವುಡ್‌ನ ಈ ಸ್ಟಾರ್ಸ್ ಬಂಗಲೆ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ
ರಣವೀರ್ ಸಿಂಗ್ ಇತ್ತೀಚೆಗಷ್ಟೇ ಐಷಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದು, ಇದರ ಬೆಲೆ ಸುಮಾರು 119 ಕೋಟಿ ರೂಪಾಯಿ. ಬಾಂದ್ರಾದಲ್ಲಿರುವ ಸಾಗರ್ ರೇಶಮ್‌ನಲ್ಲಿ ಅವರ ಅಪಾರ್ಟ್ಮೆಂಟ್ ಇದೆ. ಈ ಅಪಾರ್ಟ್‌ಮೆಂಟ್ ಖರೀದಿಸಿದ ಬಳಿಕ ಇದೀಗ ಶಾರುಖ್ ಖಾನ್ ಅವರ ನೆರೆಹೊರೆಯವರಾಗಿದ್ದಾರೆ. ಅಂದಹಾಗೆ, ಈ ಅಪಾರ್ಟ್‌ಮೆಂಟ್ ಖರೀದಿಸುವ ಮೂಲಕ ರಣವೀರ್ ಈಗಾಗಲೇ ಕೋಟ್ಯಂತರ ಮೌಲ್ಯದ ಐಷಾರಾಮಿ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್‌ನಿಂದ ಹಿಡಿದು ಅಜಯ್ ದೇವಗನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಖ್ಯಾತನಾಮರು ಸೇರಿದ್ದಾರೆ. ಕೋಟಿ ಮೌಲ್ಯದ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವ ಸೆಲೆಬ್ರಿಟಿಗಳ ವಿವರ ಇಲ್ಲಿದೆ.
ಮುಂಬೈನಲ್ಲಿ ಅಮಿತಾಬ್ ಬಚ್ಚನ್ 5 ಬಂಗಲೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ, ಅವರು ತಮ್ಮ ಕುಟುಂಬದೊಂದಿಗೆ ಜಲ್ಸಾ ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಂಗಲೆಯ ಬೆಲೆ 100 ರಿಂದ 150 ಕೋಟಿ ರೂ. ಬಿಗ್ ಬಿ ಬಂಗಲೆಯ ಒಳಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಾರುಖ್ ಖಾನ್ ಬಂಗಲೆ ಮನ್ನತ್ ಬಗ್ಗೆ ಯಾರಿಗೆ ಗೊತ್ತಿಲ್ಲ. 6ನೇ ಮಹಡಿಯ ಈ ಬಂಗಲೆಯಲ್ಲಿ ಶಾರುಖ್ ಪತ್ನಿ-ಮಕ್ಕಳು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಅವರ ಈ ಬಂಗಲೆಯ ಬೆಲೆ ಸುಮಾರು 200 ಕೋಟಿ. ಅದರ ಒಳಗಿನ ಫೋಟೋಗಳನ್ನು ಅವರ ಪತ್ನಿ ಗೌರಿ ಖಾನ್ ಆಗಾಗ್ಗೆ ಹಂಚಿಕೊಳ್ಳುತ್ತಾರೆ.
ಅಕ್ಷಯ್ ಕುಮಾರ್ ಅವರ ಬಂಗಲೆ ಜುಹುದಲ್ಲಿದೆ. ಎರಡು ಅಂತಸ್ತಿನ ಈ ಬಂಗಲೆಯ ಬೆಲೆ ಸುಮಾರು 80 ಕೋಟಿ. ಅವರ ಪತ್ನಿ ಟ್ವಿಂಕಲ್ ಖನ್ನಾ ಈ ಬಂಗಲೆಯನ್ನು ತುಂಬಾ ಸುಂದರವಾಗಿ ಅಲಂಕರಿಸಿದ್ದಾರೆ. ಅವರ ಬಂಗಲೆಯ ಗಾರ್ಡನ್ ತುಂಬಾ ಸುಂದರವಾಗಿದ್ದು ಟ್ವಿಂಕಲ್ ಆಗಾಗ್ಗೆ ತನ್ನ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಅಜಯ್ ದೇವಗನ್ ವಾಸಿಸುವ ಬಂಗಲೆಯ ಬೆಲೆ ಸುಮಾರು 60 ಕೋಟಿ ರೂ ಮೌಲ್ಯದಾಗಿದೆ. ಅವರ ಬಂಗಲೆಯು ಹಸಿರಿನಿಂದ ಆವೃತವಾಗಿದೆ. ಕಾಜೋಲ್ ಆಗಾಗ್ಗೆ ತನ್ನ ಮನೆಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.
ಜಾನ್ ಅಬ್ರಹಾಂನಮನೆ ಕೂಡ ಸಾಕಷ್ಟು ಅದ್ಭುತವಾಗಿದೆ. ಇದು 7 ಮತ್ತು 8 ನೇ ಮಹಡಿಯಲ್ಲಿದೆ. ಇದರ ಒಳಭಾಗವನ್ನು ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆ ಸುಮಾರು 60 ಕೋಟಿ.
ಪ್ರಿಯಾಂಕಾ ಚೋಪ್ರಾ ಅವರ ಬಂಗಲೆ ಕೂಡ ತುಂಬಾ ಐಷಾರಾಮಿಯಾಗಿದೆ. ಇದರ ಬೆಲೆ 150 ಕೋಟಿಗೂ ಹೆಚ್ಚು. ಆಕೆಯ ಪತಿ ನಿಕ್ ಜೋನಾಸ್ ಈ ಬಂಗಲೆಯನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ.
ಶಾಹಿದ್ ಕಪೂರ್ ಕೆಲ ವರ್ಷಗಳ ಹಿಂದೆ ವರ್ಲಿಯಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನು ಖರೀದಿಸಿದ್ದರು. ವರದಿಗಳ ಪ್ರಕಾರ, ಅವರ ಈ ಡ್ಯುಪ್ಲೆಕ್ಸ್ ಬೆಲೆ ಸುಮಾರು 57 ಕೋಟಿ ರೂ. ಅವರ ಈ ಮನೆ ಸಮುದ್ರಕ್ಕೆ ಮುಖಮಾಡಿದಿದೆ.
ಶಿಲ್ಪಾ ಶೆಟ್ಟಿ ಅವರ ಐಷಾರಾಮಿ ಸಮುದ್ರಕ್ಕೆ ಎದುರಾಗಿರುವ ಬಂಗಲೆ ಸಾಕಷ್ಟು ಆಕರ್ಷಕವಾಗಿದೆ. ಕಿನಾರಾ ಹೆಸರಿನ ಈ ಬಂಗಲೆಯ ಬೆಲೆ ಸುಮಾರು 100 ಕೋಟಿ. ಶಿಲ್ಪಾ ಆಗಾಗ್ಗೆ ತನ್ನ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದರೊಂದಿಗೆ, ಅವರು ತನ್ನ ಭವ್ಯವಾದ ಉದ್ಯಾನದ ನೋಟವನ್ನು ತೋರಿಸುತ್ತಲೇ ಇರುತ್ತಾರೆ.