ಆಮೀಷಾ ಪಟೇಲ್ ತಾಯಿಯಿಂದ ಒಮ್ಮೆ ಚಪ್ಪಲಿ ಏಟು ತಿಂದಿದ್ದರಂತೆ!
'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ 2000ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಮೀಷಾ ಪಟೇಲ್ ಅವರಿಗೆ ಈಗ 45 ವರ್ಷ. ಅಮೀಷಾ ಜೂನ್ 9, 1975 ರಂದು ಮುಂಬೈನಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದರು. 'ಕಹೋ ನಾ ಪ್ಯಾರ್ ಹೈ' ಯಶಸ್ಸು ತಲೆಗೇರಿದ ನಟಿ ಪೋಷಕರಿಂದ ದೂರವಾದರು. ಅವರು ತಮ್ಮ ಕುಟುಂಬ ಸದಸ್ಯರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದರು. ನಿರ್ದೇಶಕ ವಿಕ್ರಮ್ ಭಟ್ ಅವರ ಜೀವನದಲ್ಲಿ ಪ್ರವೇಶಿಸಿದಾಗ ಈ ಜಗಳ ಇನ್ನೂ ಹೆಚ್ಚಾಯಿತು. ಈ ಹಲವು ಕಾರಣಗಳಿಗಾಗಿ ಅಮೀಷರಾ ತಾಯಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದರು ಹಾಗೂ ಫ್ಯಾಮಿಲಿ ವಿರುದ್ಧ ಸುಳ್ಳು ದೂರು ನೀಡಿದ್ದರು? ಇಲ್ಲಿದೆ ವಿವರ.

ಅಮೀಷಾ ಪಟೇಲ್ ಅವರ ವೃತ್ತಿಪರ ಜೀವನಕ್ಕಿಂತ ವೈಯಕ್ತಿಕ ವಿಷಯಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದರು.

ನಿರ್ದೇಶಕ ವಿಕ್ರಮ್ ಭಟ್ ಅಮೀಷಾರ ಜೀವನದಲ್ಲಿ ಬಂದಾಗ ಕುಟುಂಬದೊಂದಿಗೆ ಅವರ ಜಗಳ ಮಿತಿ ಮೀರಿತು.

'ನಾನು ವಿಕ್ರಮ್ ಅವರನ್ನು ಭೇಟಿಯಾಗಲು ಅಥವಾ ಅವನನ್ನು ಮದುವೆಯಾವುದನ್ನು ನನ್ನ ಪೋಷಕರು ಇಷ್ಟ ಪಡಲಿಲ್ಲ. ನಾನು ಯಾರಾದರೂ ಹಣ ಇರುವವರನ್ನು ಮದುವೆಯಾಗಬೇಕೆಂದು ಬಯಸಿದ್ದರು. ನನ್ನ ಹಣದ ಬಗ್ಗೆ ಅವರನ್ನು ಕೇಳಿದಾಗ, ನನ್ನೊಂದಿಗೆ ಜಗಳವಾಡಿದರು,' ಎಂದು ಮಾಧ್ಯಮಕ್ಕೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು ನಟಿ.

'ಒಮ್ಮೆ ಬೆಳಿಗ್ಗೆ 4 ಗಂಟೆಗೆ ವಿಕ್ರಮ್ ಜೊತೆ ನನ್ನನ್ನು ನೋಡಿದಾಗ, ನನ್ನ ತಾಯಿ ನನ್ನನ್ನು ಚಪ್ಪಲಿಯಿಂದ ಹೊಡೆದರು. ಇದರ ನಂತರ, ಆಗಾಗ್ಗೆ ನನ್ನನ್ನು ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದರು. ಪ್ರತಿದಿನ ಹೊಡೆತ ತಿಂದು ಬೇಸತ್ತ ನಾನು ಮನೆಯಿಂದ ಹೊರಟೆ. ತಮ್ಮ ಕುಟುಂಬವು ನನ್ನ ಸಂಪಾದನೆಯನ್ನು ದುರುಪಯೋಗಪಡಿಸಿಕೊಂಡಿದೆ,' ಎಂದು ಅಮೀಷಾ ಅದೇ ಸಂದರ್ಶನದಲ್ಲಿ ಆರೋಪಿಸಿದ್ದರು.

12 ಕೋಟಿ ನಷ್ಟಕ್ಕೆ ಸಂಬಂಧಿಸಿದಂತೆ ಅವರು ತಂದೆಯ ವಿರುದ್ಧ ಮೊಕದ್ದಮೆ ಹೂಡಿದ್ದರು.

ಅಮೀಷಾ ಪ್ರಸಿದ್ಧ ರಾಜಕಾರಣಿ ನ್ಯಾಯವಾದಿ ರಜನಿ ಪಟೇಲ್ ಅವರ ಮೊಮ್ಮಗಳು. ಅವರ ಅಜ್ಜ ಮುಂಬೈ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದರು. ತಂದೆ ಅಮಿತ್ ಮತ್ತು ತಾಯಿ ಆಶಾ ಅವರ ಹೆಸರನ್ನು ಸೇರಿಸಿ ಅಮೀಷಾ ಎಂದು ಹೆಸರನ್ನು ಇಡಲಾಯಿತು.

ಅಮೀಷಾ ತನ್ನ ಆರಂಭಿಕ ಶಿಕ್ಷಣವನ್ನು ಕ್ಯಾಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಯಲ್ಲಿ ಪಡೆದರು. ನಂತರ
ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು 1992 ರಲ್ಲಿ ಮ್ಯಾಸಚೂಸೆಟ್ಸ್‌ಗೆ ತೆರಳಿದರು. ಎಕನಾಮಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದರು.

ಅಮೀಷಾ ಪದವಿ ಮುಗಿದ ನಂತರ ಖಾಂಡ್ವಾಲಾ ಸೆಕ್ಯುರಿಟಿ ಲಿಮಿಟೆಡ್‌ನಲ್ಲಿ ಎಕನಾಮಿಸ್ಟ್ ಆನಾಲಿಸ್ಟ್ ಆಗಿ ಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ ಅದನ್ನು ತೊರೆದು ಭಾರತಕ್ಕೆ ಮರಳಿದ ಅವರು ಸತ್ಯದೇವ್ ದುಬೆ ಅವರ ನಾಟಕ ತಂಡಕ್ಕೆ ಸೇರಿದರು.

ಅಮೀಷಾ ತಮ್ಮ ವೃತ್ತಿ ಜೀವನದಲ್ಲಿ ಹೃತಿಕ್ ರೋಷನ್, ಸನ್ನಿ ಡಿಯೋಲ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ಸ್ ಜೊತೆ ಕೆಲಸ ಮಾಡಿದರೂ ಅಂತಹ ಯಶಸ್ಸು ಗಳಿಸಲಿಲ್ಲ. ಕೆಲವೇ ಸಿನಿಮಾಗಳನ್ನು ಹೊರತು ಪಡಿಸಿ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚೇನು ಸಾಧನೆ ಮಾಡಲಿಲ್ಲ.

ಅಮೀಷಾ ಯೆ ಹೈ ಜಲ್ವಾ, ಪರ್ವಾನಾ, ಇಲಾನ್, ಜಮೀರ್, ವಾಡಾ ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದರು. 2005ರಲ್ಲಿ ಅಮೀಶಾಗೆ ಅಮೀರ್ ಖಾನ್ ಅವರೊಂದಿಗೆ ಮಂಗಲ್ ಪಾಂಡೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು, ಆದರೆ ಹಿಟ್ ಆಗಲಿಲ್ಲ.

2007ರಲ್ಲಿ ಹನಿಮೂನ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್ ಅಮೀಷಾ ಅವರ ವೃತ್ತಿ ಜೀವನದ ಮತ್ತೊಂದು ಹಿಟ್ ಚಿತ್ರವೆಂದು ಸಾಬೀತಾಯಿತು. ನಂತರ ಅಮೀಷಾ ಭುಭೂಲೈಯಾ ಮತ್ತು ರೇಸ್ 2 ನಂತಹ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಹಿಂದಿ ಮಾತ್ರವಲ್ಲದೆ, ಅಮೀಷಾ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.