ಅಂಬರೀಶ್ 70ನೇ ಹುಟ್ಟುಹಬ್ಬ; ಕೇಕ್ ಕತ್ತರಿಸಿ ಭಾವುಕ ಸಾಲು ಬರೆದ ಪತ್ನಿ ಸುಮಲತಾ
ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ ಇಂದು (ಮೇ 29). ರಾಜ್ಯದಾದ್ಯಂತ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಕೂಡ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ ಇಂದು (ಮೇ 29). ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಆಚರಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಕೂಡ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸಂಪೂರ್ಣ ಮನೆಯನ್ನು ಹೂವಿನಿಂದ ಅಲಂಕಾರ ಮಾಡಿರುವ ಸುಮಲತಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಕೇಕ್ ಕತ್ತರಿಸಿ ಪತಿಯ ಹುಟ್ಟುಹಬ್ಬ ಆಚರಿಸಿದ ಸುಮಲತಾ ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಆಕಾಶಕ್ಕೆ ಯಾವುದೇ ಮಿತಿ ಇಲ್ಲ. ಅಂಬರೀಷ್ ಎಂದರೆ ಆಕಾಶದ ದೇವರು. ಹಾಗಾಗಿ ನಿಮ್ಮ ಪ್ರೀತಿಗೂ ಕೂಡ ಮಿತಿ ಇಲ್ಲ’ ಎಂದು ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
‘ಸಾಕಷ್ಟು ನೆನಪುಗಳು, ಜೀವಮಾನಕ್ಕಾಗುವಷ್ಟು ಖುಷಿ ಮತ್ತು ಅಪರಿಮಿತವಾದ ಪ್ರೀತಿಯನ್ನು ನೀಡಿ ನೀವು ನಮ್ಮನ್ನು ಬಿಟ್ಟು ಹೋದ್ರಿ’ ಎಂದು ಸುಮಲತಾ ಹೇಳಿದ್ದಾರೆ.
‘ವಿಶಾಲ ಹೃದಯದ ವ್ಯಕ್ತಿಗೆ 70 ವರ್ಷ ಎಂಬುದು ಸಣ್ಣ ಸಂಖ್ಯೆ. ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಅಂಬಿ ಫಾರೆವರ್. ಅಂಬಿ ಅಮರ’ ಎನ್ನುತಾ ಪ್ರೀತಿಯ ಪತಿಯ ಹುಟ್ಟುಹಬ್ಬವನ್ನು ಸುಮಲತಾ ಆಚರಿಸಿದ್ದಾರೆ.
ಇನ್ನು ಅಭಿಮಾನಿಗಳು ಸಹ ನೆಚ್ಚಿನ ನಟ, ಪ್ರೀತಿಯ ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇಂದು ಜನ್ಮದಿನದ ಪ್ರಯುಕ್ತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
70ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಕಂಠೀರವ ಸ್ಟುಡಿಯೋಗೆ ಕುಟುಂಬಸ್ಥರು ಆಗಮಿಸಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲ್ಲಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟನ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅಂಬಿ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.