- Home
- Entertainment
- Cine World
- ಅಲ್ಲು ಅರ್ಜುನ್ - ರಾಮ್‌ಚರಣ್ ಬ್ಯುಸಿನೆಸ್ ಕುಟುಂಬದ ಸುಂದರಿಯರ ವರಿಸಿದ ದಕ್ಷಿಣದ ನಟರು
ಅಲ್ಲು ಅರ್ಜುನ್ - ರಾಮ್‌ಚರಣ್ ಬ್ಯುಸಿನೆಸ್ ಕುಟುಂಬದ ಸುಂದರಿಯರ ವರಿಸಿದ ದಕ್ಷಿಣದ ನಟರು
ಸಿನಿಮಾ ನಟನನಟಿಯರು ಸಾಮಾನ್ಯವಾಗಿ ಅವರದೇ ಕ್ಷೇತ್ರದವರನ್ನು ಜೀವನಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಸೌತ್‌ನ ಈ ಸ್ಟಾರ್ ನಟರು ಸಿನಿಮಾರಂಗದಿಂದ ಹೊರಗಿನವರನ್ನು ವಿವಾಹವಾಗಿದ್ದಾರೆ. ಅಲ್ಲು ಅರ್ಜುನ್‌ನಿಂದ ಹಿಡಿದು ಸೂರ್ಯವರಗೆ ಈ ನಟರು ಬ್ಯುಸಿನೆಸ್ ಕುಟುಂಬದವರನ್ನು ಮದುವೆಯಾಗಿದ್ದಾರೆ.

ಅಲ್ಲು ಅರ್ಜುನ್:
ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ. ಸ್ನೇಹಾ ಅವರು SCIENT ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರ ಮಗಳು ಮತ್ತು ಸ್ವತಃ ವೃತ್ತಿಯಲ್ಲಿ ಉದ್ಯಮಿ.
ಸೂರ್ಯ:
ಸೂರ್ಯ ಮತ್ತು ಜ್ಯೋತಿಕಾ ದಕ್ಷಿಣದ ಫೇಮಸ್ ಕಪಲ್‌ಗಳಲ್ಲಿ ಒಬ್ಬರು. ಅವರನ್ನು ವಿವಾಹವಾಗಿದ್ದಾರೆ, ನಟಿ ಜ್ಯೋತಿಕಾ ಅವರ ತಂದೆ ಚಲನಚಿತ್ರ ನಿರ್ಮಾಪಕರು.
ಜೂನಿಯರ್ ಎನ್.ಟಿ.ಆರ್:
ಜೂನಿಯರ್ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಅವರು ತೆಲುಗು ನ್ಯೂಸ್ ಚಾನೆಲ್‌ನ ಮಾಲೀಕರ ಮಗಳು.
ದುಲ್ಖರ್ ಸಲ್ಮಾನ್:
ಸೂಪರ್ ಸ್ಟಾರ್ ಮುಮ್ಮುಟ್ಟಿ ಅವರ ಪುತ್ರ ನಟ ದುಲ್ಖರ್ ಸಲ್ಮಾನ್ ಫ್ಯಾನ್‌ಗಳ ಹಾರ್ಟ್ ಥ್ರೋಬ್. ದುಲ್ಖರ್ ಅವರು ಚೆನ್ನೈ ಉದ್ಯಮಿ ಸೈಯದ್ ನಿಜಾಮುದ್ದೀನ್ ಅವರ ಪುತ್ರಿ ಅಮಲ್ ಅವರನ್ನು ವಿವಾಹವಾಗಿದ್ದಾರೆ.
ರಾಣಾ ದಗ್ಗುಭಟ್ಟಿ:
ಬಾಹುಬಲಿ ಸಿನಿಮಾದಿಂದ ಖ್ಯಾತಿ ಪಡೆದಿರುವ ನಟ ರಾಣಾ ದುಗ್ಗುಬಾಟಿ ಅವರು ಉದ್ಯಮಿ ಮತ್ತು ಕ್ರಿಸ್ಲಾ ಜ್ಯುವೆಲ್ಸ್ ನಿರ್ದೇಶಕರ ಪುತ್ರಿ ಮಿಹೀಕಾ ಬಜಾಜ್ ಅವರನ್ನು ವಿವಾಹವಾಗಿದ್ದಾರೆ.
ತಲಪತಿ ವಿಜಯ್:
ತಮಿಳು ಸೂಪರ್‌ಸ್ಟಾರ್ ತಳಪತಿ ವಿಜಯ್ ಅವರು ಶ್ರೀಲಂಕಾದ ತಮಿಳು ಕೈಗಾರಿಕೋದ್ಯಮಿ ಮಗಳು ಸಂಗೀತಾ ಸೊರ್ನಲಿಂಗಂ ಅವರನ್ನು ವಿವಾಹವಾಗಿದ್ದಾರೆ.
ರಾಮ್ ಚರಣ್:
ತೆಲಗು ಸೂಪರ್ ಸ್ಟಾರ್ ಚಿರಂಜೀವಿಯ ಅವರ ಪುತ್ರ ನಟ ರಾಮ್ ಚರಣ್ ಅವರು ಅಪೋಲೋ ಫೌಂಡೇಶನ್‌ನ ಉಪಾಧ್ಯಕ್ಷರಾದ ಉಪಾಸನಾ ಕುಮ್ನೇನಿ ಅವರನ್ನು ವಿವಾಹವಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.