ಅಲ್ಲು ಅರ್ಜುನ್, ಪ್ರಭಾಸ್ ರಿಂದ ಸಮಂತಾವರೆಗೆ: ಈ ದಕ್ಷಿಣ ತಾರೆಯರ ಐಷಾರಾಮಿ ಮನೆಗಳ ಬೆಲೆ ಎಷ್ಟು ಗೊತ್ತಾ?
ಸೌತ್ ಸಿನಿಮಾದ ನಟರು ಭಾರೀ ಸ್ಟಾರ್‌ಡಮ್ ಜೊತೆಗೆ ಐಷರಾಮಿ ಜೀವನ ಶೈಲಿಯನ್ನು ಆನಂದಿಸುತ್ತಾರೆ. ಅಲ್ಲು ಅರ್ಜುನ್, ಪ್ರಭಾಸ್ ರಿಂದ ಸಮಂತಾ ರುತ್ ಪ್ರಭು ವರೆಗೆ ಈ ದಕ್ಷಿಣ ತಾರೆಯರು ಲಕ್ಷುರಿಯಸ್ ಬಂಗಲೆಗಳ ಮಾಲೀಕರು ಆಗಿದ್ದಾರೆ. ಇವರು ವಾಸಿಸುವ ಬಂಗಲೆಗಳು ಬೆಲೆ ಎಷ್ಷು ಗೊತ್ತಾ? ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ
ಪುಷ್ಪಾ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹೈದರಾಬಾದ್ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಅವರು ಇಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ ಮತ್ತು ವರದಿಗಳ ಪ್ರಕಾರ ಅದರ ಮೌಲ್ಯ 100 ಕೋಟಿ.
RRR ನಂತರ ಈಗ ರಾಮ್ ಚರಣ್ ಪ್ರಪಂಚದಾದ್ಯಂತ ಪ್ರಸಿದ್ಧ ಹೆಸರು ಮತ್ತು ಅವರು ಹೈದರಾಬಾದ್‌ನಲ್ಲಿ ಸುಮಾರು 30 ಕೋಟಿಗಳಷ್ಟು ಬೆಲೆಯ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಇತ್ತೀಚೆಗೆ ಸಮಂತಾ ರುತ್ ಪ್ರಭು ಹೈದರಾಬಾದ್‌ನಲ್ಲಿ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ ಅದರ ಮೌಲ್ಯ 7.8 ಕೋಟಿ ಎಂದು ವರದಿಗಳಲ್ಲಿ ಹೇಳಲಾಗಿದೆ
ಇತ್ತೀಚೆಗೆ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಆದಿ ಪುರುಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪ್ರಭಾಸ್ ಹೈದರಾಬಾದ್‌ನಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ ಮತ್ತು ಅದರ ಮೌಲ್ಯ 60 ಕೋಟಿ ಎಂದು ಅಂದಾಜಿಸಲಾಗಿದೆ.
ತಮಿಳು ಸೂಪರ್ ಸ್ಟಾರ್ ಧನುಷ್ ಚೆನ್ನೈನಲ್ಲಿ ನೆಲೆಸಿದ್ದಾರೆ. ಇಲ್ಲಿ ಅವರು ನಾಲ್ಕು ಅಂತಸ್ತಿನ ಮನೆ ಹೊಂದಿದ್ದು ಅದರ ಬೆಲೆ ಸುಮಾರು 150 ಕೋಟಿ ರೂಗಳು ಎಂದು ಹೇಳಲಾಗಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಸರಳ ಜೀವನವನ್ನು ಇಷ್ಟಪಡುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರು ಚೆನ್ನೈನಲ್ಲಿ ವಾಸಿಸುತ್ತಿರುವ ಮನೆಯ ಬೆಲೆ 35 ಕೋಟಿಗಳು.