ರಶ್ಮಿಕಾ ಮಂದಣ್ಣ ಆಯ್ತು, ಸಂಭಾವನೆ ಹೆಚ್ಚಿಸಿಕೊಂಡ ವಿಜಯ್ ದೇವರಕೊಂಡ!
ತೆಲುಗು ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅವರು ಅನನ್ಯಾ ಪಾಂಡೆ (Ananya Panday) ಅವರ ಜೊತೆ ತಮ್ಮ ಮುಂಬರುವ ಸಿನಿಮಾ ಲಿಗರ್‌ಗೆ (Liger) ಸಿದ್ಧರಾಗಿದ್ದಾರೆ. ಇದು ಅವರ ಬಾಲಿವುಡ್ (Bollywood) ಚೊಚ್ಚಲ (Debut) ಸಿನಿಮಾವಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ (Puri Jagannath) ನಿರ್ಮಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಲಿಗರ್‌ಗಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಡಿಯರ್ ಕಾಮ್ರೇಡ್‌ಗೆ ಪಡೆದ ಶುಲ್ಕಕ್ಕಿಂತ ದುಪ್ಪಟ್ಟು. ವಿಜಯ್ ಅವರ ರೂಮರ್ಡ್ ಗರ್ಲ್‌ಫ್ರೆಂಡ್ ರಶ್ಮಿಕಾ ಮಂದಣ್ಣ ( Rashmika Mandanna) ನಂತರ, ಈಗ ವಿಜಯ್ ದೇವರಕೊಂಡ ಲಿಗರ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ.
ಲಿಗರ್ ಸ್ಪೋರ್ಟ್ಸ್ ಡ್ರಾಮಾ ಆಗಿದ್ದು, ವಿಜಯ್ ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಜಂಟಿಯಾಗಿ ಹಣ ಹೂಡಿದ್ದಾರೆ. ವಿಜಯ್ ಮತ್ತು ಅನನ್ಯಾ ಜೊತೆಗೆ ಲಿಗರ್ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ವಿಶ್ವ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವು ಹಿಂದಿ (Hindi) ಮತ್ತು ತೆಲುಗು (Telagu) ಮುಂತಾದ ಹಲವು ಭಾರತೀಯ ಭಾಷೆಗಳಲ್ಲಿ (Indian Languages) ತಯಾರಾಗುತ್ತಿದೆ.
ತಮಿಳು, ಕನ್ನಡ (Kannada) ಮತ್ತು ಮಲಯಾಳಂ ಡಬ್ಬಿಂಗ್ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಆಗಸ್ಟ್ 25 ರಂದು ಲಿಗರ್ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಲಿಗರ್ ಸಿನಿಮಾಕ್ಕಾಗಿ 20 ಕೋಟಿ ರೂ ಚಾರ್ಜ್ ಮಾಡಿದ್ದಾರೆ .
ಇದು ಅವರು ಡಿಯರ್ ಕಾಮ್ರೇಡ್ (Dear Comrade) ಸಿನಿಮಾಕ್ಕೆ ಪಡೆದ ಮೊತ್ತದ ಡಬಲ್ ಆಗಿದೆ. ಅವರ ಡಿಯರ್ ಕಾಮ್ರೇಡ್ ಸಹನಟಿ ರಶ್ಮಿಕಾ ಮಂದಣ್ಣ ಪುಷ್ಪಾ ಸಿನಿಮಾದ ಎರಡನೇ ಭಾಗ ಮಾಡುತ್ತಿದ್ದಾರಂತೆ. ರಶ್ಮಿಕಾ ಮಂದಣ್ಣ ಅವರು ಚಿತ್ರದ ಎರಡನೇ ಭಾಗವಾದ ಪುಷ್ಪ: ದಿ ರೂಲ್‌ಗಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.
ಮೊದಲ ಭಾಗ, ಪುಷ್ಪ: ದಿ ರೈಸ್, ರಶ್ಮಿಕಾ 2 ಕೋಟಿ ನೀಡಿದ್ದರು ಎಂದು ವರದಿಯಾಗಿದೆ. ಪುಷ್ಪಾ -ದಿ ರೂಲ್‌ಗೆ 3 ಕೋಟಿ ರೂ ಸಂಭಾವನೆಯ ಬೇಡಿಕೆಯನ್ನು ರಶ್ಮಿಕಾ ಇಟ್ಟಿದ್ದಾರೆ ಎನ್ನಲಾಗಿದೆ.
ನಿರ್ಮಾಪಕರು ರಶ್ಮಿಕಾ ಮಂದಣ್ಣಗೆ ಡಿಮ್ಯಾಂಡ್ ಮಾಡಿದಷ್ಟು ಹಣವನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಈ ಸುದ್ದಿ ನಿಜವಾಗಿದ್ದರೆ, ರಶ್ಮಿಕಾ ಅವರು ತಮ್ಮ ವೃತ್ತಿಜೀವನದಲ್ಲಿ ಅತ್ಯಧಿಕ ಶುಲ್ಕವನ್ನು ಪಡೆಯುತ್ತಾರೆ.
ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ರಶ್ಮಿಕಾ ಮತ್ತು ವಿಜಯ್ ಗೋವಾದಲ್ಲಿ ಹೊಸ ವರ್ಷವನ್ನು ಒಟ್ಟಾಗಿ ಆಚರಣೆ ಮಾಡಿಕೊಂಡಿದ್ದಾರೆ, ಎನ್ನಲಾಗಿದೆ ಹಾಗೂ ನಂತರ ಇಬ್ಬರು ಒಟ್ಟಿಗೆ ಸಂಕ್ರಾತಿ ಸೆಲೆಬ್ರೆಟ್ ಮಾಡಿರುವ ಸುದ್ದಿ ಇದೆ.
ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಯುವ ನಟನಾಗಿ ಹೊರಹೊಮ್ಮಿದ್ದಾರೆ. ಅವರು Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಜೀವನವನ್ನು ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ, ವಿಜಯ್ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಮುದ್ದಿನ ನಾಯಿ ಸ್ಟಾರ್ಮ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಈ ಜಂಟಲ್‌ಮ್ಯಾನ್‌ನ ಮೊದಲ ವಿಮಾನ ಸವಾರಿ' ಎಂದು ವಿಜಯ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುವ ಸಮಯದಲ್ಲಿ ಅವರ ನಾಯಿ ಸ್ಟಾರ್ಮ್ ಒತ್ತಡದಲ್ಲಿ ಕಾಣಿಸಿಕೊಂಡಿದ್ದರಿಂದ ವಿಜಯ್ ಅದನ್ನು ಕಂಫರ್ಟಬಲ್ ಫೀಲ್ ಮಾಡಿಸುತ್ತಿರುವುದು ಕಂಡುಬಂದಿದೆ.