ಆಲಿಯಾ- ಭೂಮಿ: ತೂಕ ಇಳಿಸಿಕೊಂಡು ಸ್ಲೀಮ್ ಆ್ಯಂಡ್ ಫಿಟ್ ಆದ ನಟಿಯರು!
ತೂಕ ಇಳಿಸಿಕೊಂಡು ಸ್ಲಿಮ್ ಆ್ಯಂಡ್ ಫಿಟ್ ಆಗಲು ಮೊಟಿವೇಷನ್ ಬೇಕಾ? ಹಾಗಿದ್ದಲ್ಲಿ ಈ ಬಾಲಿವುಡ್ ತಾರೆಯರನ್ನು ನೋಡಿ ಹೇಗಿದ್ದವರು ಹೇಗಿದ್ದಾರೆ. ಹಿಂದೊಮ್ಮೆ ಹೆಚ್ಚು ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್ ಹಾಗೂ ಫಿಟ್ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ
ಆಲಿಯಾ ಭಟ್ನಿಂದ ಭೂಮಿ ಪೆಡ್ನೇಕರ್ವರಗೆ ಹಲವು ಬಾಲಿವುಡ್ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್ ಹಾಗೂ ಫಿಟ್ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.
ಸೋನಮ್ ಕಪೂರ್:
ಹಿಂದೊಮ್ಮೆ ಸೋನಮ್ ಕಪೂರ್ 86 ಕೆಜಿ ತೂಕ ಹೊಂದಿದ್ದರು. ನಂತರ ಸಿನಿಮಾಕ್ಕಾಗಿ ಸ್ಲಿಮ್ ಆದ ಸೋನಮ್ ಈಗ 56 ಕೆಜಿ ಇದ್ದಾರೆ.
ಆಲಿಯಾ ಭಟ್:
ತನ್ನ ಚೊಚ್ಚಲ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ ಗಾಗಿ ಕೇವಲ 3 ತಿಂಗಳಲ್ಲಿ 16 ಕೆ.ಜಿ ಇಳಿಸಿಕೊಂಡರು ಆಲಿಯಾ ಭಟ್ .
ಸಾರಾ ಅಲಿ ಖಾನ್:
ಬಾಲಿವುಡ್ನ ಫಿಟ್ ನಟಿಯರಲ್ಲಿ ಒಬ್ಬರಾಗಿರುವ ಸಾರಾ ಅಲಿ ಖಾನ್ ಹಿಂದೊಮ್ಮೆ 96 ಕಿಲೋ ಇದ್ದು ಪಿಸಿಓಎಸ್ ಮತ್ತು ಇತರ ಹಾರ್ಮೋನುಗಳ ಸಮಸ್ಯೆಗಳಿಂದ ಬಳಲುತ್ತಿದ್ದರು.
ಸೋನಾಕ್ಷಿ ಸಿನ್ಹಾ:
ಬಾಲಿವುಡ್ಗೆ ಕಾಲಿಡುವ ಮೊದಲು ಸೋನಾಕ್ಷಿ ಸಿನ್ಹಾ ಓವರ್ ವೈಯಟ್ ಆಗಿದ್ದರು. ನಂತರ ಅವರು ಗಣನೀಯ ಪ್ರಮಾಣದ ತೂಕವನ್ನು ಕಳೆದುಕೊಂಡರು ಸೋನಾಕ್ಷಿ.
ಭೂಮಿ ಪೆಡ್ನೇಕರ್:
ದಮ್ ಲಗಾ ಕೆ ಹೈಶಾ ಎಂಬ ಹಿಟ್ ಚಿತ್ರಕ್ಕಾಗಿ ಕೆಲಸ ಮಾಡುವಾಗ ಭೂಮಿ 89 ಕೆ.ಜಿ ಇದ್ದರು. ನಂತರ ಅವರು ಶೇಪ್ಗೆ ಬರಲು 32 ಕಿಲೋಗಳನ್ನು ಇಳಿಸಿಕೊಂಡರು.
ಕರೀನಾ ಕಪೂರ್:
ಜೀರೋ ಫಿಗರ್ ಟ್ರೆಂಡ್ ಹುಟ್ಟು ಹಾಕಿದ ಬಾಲಿವುಡ್ನ ಸೂಪರ್ ಸ್ಟಾರ್ ಕರೀನಾ ಕಪೂರ್ ಸಹ ಒಂದು ಕಾಲದಲ್ಲಿ ದಪ್ಪ ಇದ್ದರು. ನಿರಂತರ ವರ್ಕೌಟ್ ಮತ್ತು ಸರಿಯಾದ ಡಯಟ್ ಮೂಲಕ 40ನೇ ವಯಸ್ಸಿನಲ್ಲೂ ಫಿಟ್ ಆಂಡ್ ಸ್ಲಿಮ್ ಆಗಿರುವಂತೆ ನೋಡಿಕೊಂಡಿದ್ದಾರೆ ಬೇಬೊ.