ಆಲಿಯಾಗೆ ಇನ್ನೊಂದು ಗರಿ: 2023ರ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳಾ ಪಟ್ಟಿಯಲ್ಲಿ ಏಕೈಕ ಭಾರತೀಯ ನಾರಿ
ಆರ್‌ಆರ್‌ಆರ್, ಗಂಗೂಬಾಯಿ ಕಥಿವಾಡಿ ಮತ್ತು ಬ್ರಹ್ಮಾಸ್ತ್ರದಂತಹ ಚಲನಚಿತ್ರಗಳ ನಂತರ ಆಲಿಯಾ ಭಟ್ (Alia Bhatt) 2023ರ ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳೆಯರಲ್ಲಿ (Impactfull International Women of 2023) ಒಬ್ಬರಾಗಿದ್ದಾರೆ. ಇಷ್ಟೇ ಅಲ್ಲ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ನಟಿ ಆಲಿಯಾ ಭಟ್.
Alia Bhatt
ಕಳೆದ ವರ್ಷದಿಂದ, ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.
OTT ಬಿಡುಗಡೆ ಡಾರ್ಲಿಂಗ್ ಮೂಲಕ ಆಲಿಯಾ ಚಲನಚಿತ್ರ ನಿರ್ಮಾಪಕರಾಗಿ ಅದ್ಭುತವಾದ ಚೊಚ್ಚಲ ಪ್ರವೇಶ ಮಾಡಿದರು. ಗಂಗೂಬಾಯಿ ಕಥಿಯಾವಾಡಿ ಕೂಡ ಬಾಕ್ಸ್ ಆಫೀಸ್ ಉತ್ತಮ ಗಳಿಕೆ ಮಾಡಿತು.
Alia Bhatt
ಆಲಿಯಾ ಭಟ್ ಪ್ಯಾನ್-ಇಂಡಿಯಾ ಚಲನಚಿತ್ರ RRR ನಲ್ಲಿ ಕಾಣಿಸಿಕೊಂಡರು, ಇದು ಪ್ರಸ್ತುತ ಆಸ್ಕರ್ ನಾಮನಿರ್ದೇಶನದಿಂದಾಗಿ ಪ್ರಪಂಚದಾದ್ಯಂತ ನ್ಯೂಸ್‌ನಲ್ಲಿದೆ. ಬ್ರಹ್ಮಾಸ್ತ್ರ ಕೂಡ ಸಖತ್ ಹಿಟ್ ಎಂದು ಸಾಬೀತಾಗಿದೆ.
alia bhatt
ಇನ್ನೂ ನಟಿಯ ಪರ್ಸನಲ್ ಲೈಫ್ ಕೂಡ ಸಂತೋಷದಿಂದ ಕೂಡಿದೆ. ಕಳೆದ ವರ್ಷತಮ್ಮ ಬಹುಕಾಲದ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಅವರನ್ನು ವಿವಾಹವಾದ ಆಲಿಯಾ ಮಗಳನ್ನು ಸ್ವಾಗತಿಸಿದ್ದಾರೆ
ವೆರೈಟಿಯ 2023 ರ ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ನಟಿ ತಮ್ಮ ಸಾಧನೆಗೆ ಮತ್ತೊಂದು ಗರಿಯನ್ನು ಸೇರಿಸಿದರು.
alia bhatt
ನಿಯತಕಾಲಿಕವು ರಿಸರ್ಚ್ ಕ್ರಿಯೇಟರ್, ನಿರ್ಮಾಪಕ, ಬರಹಗಾರ ಅಬ್ಬಿ ಅಜಯ್ ಮತ್ತು ಬ್ರೆಜಿಲಿಯನ್ ಗಾಯಕ ಅನಿತ್ತಾ ಜೊತೆ ಆಲಿಯಾ ಅವರನ್ನು ಪ್ರದರ್ಶನ ಉದ್ಯಮದಲ್ಲಿ ಅತ್ಯಂತ ಯಶಸ್ವಿ ಮಹಿಳೆ ಎಂದು ಹೆಸರಿಸಿದೆ.
ಆರ್‌ಆರ್‌ಆರ್ ಮತ್ತು ಗಂಗೂಬಾಯಿ ಕಥಿಯಾವಾಡಿಯಲ್ಲಿನ ಪ್ರಯತ್ನದಿಂದ ಆಲಿಯಾ ಅವರನ್ನು ಆಯ್ಕೆ ಮಾಡಲಾಗಿದೆ. '2022 ಅವರ ಗಂಗೂಭಾಯ್ ಕಥಿವಾಡಿಗಾಗಿ ಬರ್ಲಿನ್ ಪ್ರೀಮಿಯರ್‌ನೊಂದಿಗೆ ಭಟ್‌ಗೆ ಉತ್ತಮವಾಗಿ ಪ್ರಾರಂಭವಾಯಿತು ಮತ್ತು ಬೃಹತ್ ಸಿಂಗಲ್ RRR ಮತ್ತು ಬ್ರಹ್ಮಾಸ್ತ್ರ : ಭಾಗ ಒಂದು - ಶಿವ ಕೂಡ ಒಳಗೊಂಡಿದೆ' ಎಂದು ಮ್ಯಾಗಜೀನ್ ಹೇಳಿದೆ.
'ಭಾಷೆಯನ್ನು ಮೀರಿದ ಮತ್ತು ಜನರ ಹೃದಯದಲ್ಲಿ ಅದರ ಛಾಪು ಮೂಡಿಸುವ ಒಂದು ಚಿತ್ರ ಯಾವಾಗಲೂ ಇರುತ್ತದೆ' ಎಂದೂ ನಿಯತಕಾಲಿಕದಲ್ಲಿ ಹೇಳಲಾಗಿದೆ.
Alia Bhatt
ಆಲಿಯಾ ರಣವೀರ್ ಜೋಡಿಯು ರಾಹಾ ಎಂಬ ಮಗಳನ್ನು ಸಹ ಸ್ವಾಗತಿಸಿದರು. ಅವರು ನೆಟ್‌ಫ್ಲಿಕ್ಸ್‌ನ ಹಾರ್ಟ್ ಆಫ್ ಸ್ಟೋನ್‌ನಲ್ಲಿ ಗಾಲ್ ಗಡೋಟ್ ಜೊತೆಗೂ ನಟಿಸಿದರು.
Alia Bhatt
ಮುಂಬರುವ ಜುಲೈನಲ್ಲಿ ಅವರು ನಿರ್ದೇಶಕ ಕರಣ್ ಜೋಹರ್ ಅವರೊಂದಿಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್ ಅವರೊಂದಿಗೆ ನಟಿಸುತ್ತಾರೆ.
ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ RRR ತಂಡವು ಸ್ಪಾಟ್‌ಲೈಟ್ ಪ್ರಶಸ್ತಿಯನ್ನು ಸ್ವೀಕರಿಸಿದೆ. ಆಲಿಯಾ ಮತ್ತು ಜೂನಿಯರ್ ಎನ್‌ಟಿಆರ್ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಪ್ರಶಸ್ತಿಯನ್ನು ನಂತರ ಅವರಿಗೆ ನೀಡಲಾಗುವುದು. ಮುಂದಿನ ವಾರ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆ ಶುಕ್ರವಾರ ತಿಳಿಸಿದೆ