ಪಿಂಕ್ ಕಫ್ತಾನ್ ಧರಿಸಿ ಪತಿ ಜೊತೆ ಸಿಂಪಲ್ ಪೋಸ್ ನೀಡಿದ ಗರ್ಭಿಣಿ ಅಲಿಯಾ; ಫೋಟೋ ವೈರಲ್
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್‌ನ ಸಂಭ್ರಮದಲ್ಲಿದ್ದಾರೆ. ಬ್ರಹ್ಮಾಸ್ತ್ರ ಬಾಯ್ಕಟ್ ಸಮಸ್ಯೆಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ. ಅಲಿಯಾ ಭಟ್, ರಣಬೀರ್ ಕಪೂರ್ ಮತ್ತು ಇಡೀ ತಂಡ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿತ್ತು. ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡಿದ್ದರು. ಅಂದಹಾಗೆ ಅಲಿಯಾ ಭಟ್ ಗರ್ಭಿಣಿ ಆದರೂ ಸಿನಿಮಾ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು.

ಚಿತ್ರತಂಡ ಶ್ರಮಕ್ಕೆ ಅಭಿಮಾನಿಗಳಿಂದ ತಕ್ಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಬಾಲಿವುಡ‌್ ಗೆ ಹೊಸ ಚೈತನ್ಯ ತುಂಬಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಸಿನಿಮಾ ದ ಸಕ್ಸಸ್ ಹೋದ ಜೀವ ಬಂದಂತೆ ಆಗಿದೆ. ಈ ನಡುವೆ ಅಲಿಯಾ ಮತ್ತು ರಣಬೀರ್ ದಂಪತಿ ಅನೇಕ ವಿಚಾರಗಳಿಗೆ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇತ್ತೀಚಿಗಷ್ಟೆ ಕ್ಯಾಮರಾ ಮುಂದೆ ಹಾಜರಾಗಿದ್ದರು. ಹ್ಯಾಪಿ ಕಪಲ್ ಪಾಪರಾಜಿಗಳಿಗೆ ಸೂಪರ್ ಪೋಸ್ ನೀಡಿದ್ದಾರೆ. ನಟಿ ಅಲಿಯಾ ಪಿಂಕ್ ಬಣ್ಣದ ಕಫ್ತಾನ್ ಧರಿಸಿದ್ದಾರೆ. ರಣಬೀರ್ ಕಪೂರ್ ಡೆನಿಮ್ ಪ್ಯಾಂಟ್ ಮತ್ತು ಲಾಂಗ್ ಸ್ವೀವ್ ಶರ್ಟ್ ಧಿರಿಸಿದ್ದಾರೆ. ಬಾಲಿವುಡ್ ಸ್ಟಾರ್ ದಂಪತಿಯ ಸಿಂಪಲ್ ಪೋಸ್ ಅಭಿಮಾನಿಗಳ ಹೃದಯ ಗೆದ್ದಿದೆ
ಗರ್ಭಿಣಿ ಆಲಿಯಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ರಹ್ಮಾಸ್ತ್ರ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದರೂ ಸಹ ಅಲಿಯಾ ಬ್ರಹ್ಮಾಸ್ತ್ರ ಸಿನಿಮಾದ ಕೆಲಸ ಮುಗಿಸಿಲ್ಲ. ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ. ಈ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾದ ಅಲಿಯಾ ದಂಪತಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.
ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿ ಜೊತೆ ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ಕೂಡ ಕಾಣಿಸಿಕೊಂಡಿದ್ದಾರೆ. ರಣಬೀರ್ ಮತ್ತು ಅಲಿಯಾ ಇಬ್ಬರು ಕೈ ಕೈ ಹಿಡುದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಆಲಿಯಾ ಧರಿಸಿದ್ದ ಬಟ್ಟೆಯ ಬೆಲೆ ಬರೋಬ್ಬರಿ 16.500 ರೂಪಾಯಿ. ಸ್ಟಾರ್ ನಟಿಯರಿಗೆ ಈ ಬೆಲ ಏನು ಹೆಚ್ಚಲ್ಲ. ಲಕ್ಷಗಟ್ಟಲೇ ಬೆಲೆಯ ಬಟ್ಟೆ ಧರಿಸುತ್ತಿದ್ದ ಅಲಿಯಾ ಗರ್ಭಿಣಿ ಆದ ಬಳಿಕ ಕಡಿಮೆ ಬೆಲೆಯ, ಸರಳ ಬಟ್ಟೆ ಧರಿಸುತ್ತಾರೆ.
ಗರ್ಭಿಣಿಯಾದ ಬಳಿಕ ಆಲಿಯಾ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಈ ಸಮಯಕ್ಕೆ ಸರಿಯಾದ ಬಟ್ಟೆ ಧರಿಸುತ್ತಿದ್ದಾರೆ. ಸಡಿಲವಾದ ಬಟ್ಟೆ ಹೆಚ್ಚು ತೊಡುತ್ತಿದ್ದಾರೆ. ಒಮ್ಮೊಮ್ಮೆ ಬಾಡಿ ಕಾನ್ ಧರಿಸಿ, ಹೈ ಹೀಲ್ಸ್ ಹಾಕುತ್ತಾರೆ. ನೆಟ್ಟಿಗರಿಂದ ಟ್ರೋಲ್ ಆಗುತ್ತಾರೆ. ಆದರೂ ಹೆಚ್ಚಾಗಿ ಸರಳ ಬಟ್ಟೆ ಧರಿಸುತ್ತಿದ್ದಾರೆ.