ಹಳದಿ ಡ್ರೆಸ್‌ನಲ್ಲಿ ಬೇಬಿಬಂಪ್ ಮುಚ್ಚಿಟ್ಟ ಅಲಿಯಾ ಭಟ್; ಫೋಟೋ ವೈರಲ್
ಹಳದಿ ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಅಲಿಯಾ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ಬೇಬಿ ಬಂಪ್ ಕಾಣದ ಹಾಗೆ ಅಲಿಯಾ ಡ್ರೆಸ್ ಧರಿಸಿದ್ದರು.

ಬಾಲಿವುಡ್ ನಟಿ ಅಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲಿಯಾ ಭಟ್ ಗರ್ಭಿಣಿ ಆಗಿದ್ದರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ.
ಇತ್ತೀಚಿಗಷ್ಟೆ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಂದಹಾಗೆ ಅಲಿಯಾ ಭಟ್ ಹಾಲಿವುಡ್ ನ ಹಾರ್ಟ್ ಆಫ್ ಸ್ಟೋನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗರ್ಭಿಣಿ ಆಗಿದ್ದರೂ ಅಲಿಯಾ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿ ತನ್ನ ಭಾಗದ ಚಿತ್ರೀಕರಣ ಸಂಪೂರ್ಣ ಮಾಡಿದ್ದಾರೆ.
ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಾಸ್ ಆಗಿರುವ ನಟಿ ಅಲಿಯಾ ಭಟ್ ಇಲ್ಲಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಗರ್ಭಿಣಿ ಅಲಿಯಾ ತನ್ನ ಮುಂದಿನ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಳದಿ ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಅಲಿಯಾ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ಬೇಬಿ ಬಂಪ್ ಕಾಣದ ಹಾಗೆ ಅಲಿಯಾ ಡ್ರೆಸ್ ಧರಿಸಿದ್ದರು. ಅಂದಹಾಗೆ ಅಲಿಯಾ ಸದ್ಯ ಡಾರ್ಲಿಂಗ್ ಸಿನಿಮಾದ ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಟ್ರೈಲರ್ ಲಾಂಚ್‌ಗೆ ಅಲಿಯಾ ಭಟ್ ಹಾಜರಾಗಿದ್ದರು.
ಅಲಿಯಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಹಾಜರಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಡಾರ್ಲಿಂಗ್ ಡೇ ಎಂದು ಹೇಳಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್ ಆಗುತ್ತಿದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಡಾರ್ಲಿಂಗ್ ಸಿನಿಮಾ ಆಗಸ್ಟ್ 5ರಂದು ರಿಲೀಸ್ ಆಗುತ್ತಿದೆ. ಅಲಿಯಾ ಮೊದಲ ಬಾರಿಗೆ ಶಾರುಖ್ ನಿರ್ಮಾಣದ ರೆಡ್ ಚಿಲ್ಲಿಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಅಲಿಯಾ ಸಂತಸ ವ್ಯಕ್ತಪಡಿಸಿದ್ದಾರೆ.
Image: Virender Chawla
ಅಲಿಯಾ ಭಟ್ ಡಾರ್ಲಿಂಗ್ ಸಿನಿಮಾ ಜೊತೆಗೆ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಕಾಯುತ್ತಿದ್ದಾರೆ. ಇನ್ನು ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮಾಡಬೇಕಿದೆ.