ಗಂಗುಬಾಯಿ ಕಥಿಯಾವಾಡಿ - ಸೆಲಬ್ರೆಟಿಗಳಿಂದ ಆಲಿಯಾಗೆ ಮೆಚ್ಚುಗೆ ಸುರಿಮಳೆ!
ಆಲಿಯಾ ಭಟ್ ಅಭಿನಯದ ಸಂಜಯ್ ಲೀಲಾ ಭನ್ಸಾಲಿಯ ಗಂಗುಬಾಯಿ ಕಥಿಯಾವಾಡಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಹಿಡಿದು ಅನೇಕ ಸೆಲೆಬ್ರೆಟಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ, ಆಲಿಯಾ ಭಟ್ ಕಾಮತಿಪುರದ ರಾಣಿಯಾದ ಗಂಗುಬಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಗ್ರ, ಫವರ್‌ಫುಲ್ ಮಹಿಳೆಯಾಗಿ ಆಲಿಯಾರ ಅದ್ಭುತ ಅಭಿನಯಕ್ಕೆ ಅಭಿಮಾನಿಗಳು, ಸೆಲೆಬ್ರೆಟಿಗಳ ಜೊತೆ ಮತ್ತು ನೆಟಿಜನ್ಸ್ ಸಹ ಹೊಗಳುತ್ತಿದ್ದಾರೆ. ಆಲಿಯಾರ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಆಲಿಯಾ ಭಟ್ ಅವರ ಹೊಸ ಪ್ರಾಜೆಕ್ಟ್ ಗಂಗುಬಾಯಿ ಕಥಿಯಾವಾಡಿ ಸಿನಿಮಾದ ಟೀಸರ್ ಬುಧವಾರ ಬಿಡುಗಡೆಯಾಗಿದೆ.
ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಆಲಿಯಾರ ಅದ್ಭುತ ಅಭಿನಯಕ್ಕೆ ಅಭಿಮಾನಿಗಳು, ಸೆಲೆಬ್ರೆಟಿಗಳ ಜೊತೆ ನೆಟಿಜನ್ಸ್‌ನಿಂದ ಕೂಡ ಮೆಚ್ಚುಗೆ ಮಹಾಪೂರ ಹರಿದು ಬರುತ್ತಿದೆ.
ಸೆಲೆಬ್ರಿಟಿಗಳಾದ ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಶಾರುಖ್ ಖಾನ್, ದಿಯಾ ಮಿರ್ಜಾ, ವರುಣ್ ಧವನ್ ಮತ್ತು ಅಕ್ಷಯ್ ಕುಮಾರ್ ಕೂಡ ಟೀಸರ್ ಹಂಚಿಕೊಂಡಿದ್ದು ಆಲಿಯಾರ ಅಭಿನಯಕ್ಕಾಗಿ ಹೊಗಳಿದ್ದಾರೆ .
ಆಲಿಯಾರ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ತಾಯಿ ನೀತು ಕಪೂರ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟೀಸರ್ ಶೇರ್ ಮಾಡಿ ಅತ್ಯುತ್ತಮ, ಅದ್ಭುತ ಎಂದು ಬರೆದಿದ್ದಾರೆ, ಜೊತೆಗೆ ಥಂಬ್ಸ್- ಅಪ್ ಎಮೋಜಿ ನೀಡಿದ್ದಾರೆ.
ಆಲಿಯಾ ನೀತು ಕಪೂರ್ ಅವರ ಇನ್ಸ್ಟಾ ಸ್ಟೋರಿ ಹಂಚಿಕೊಂಡು ಅದಕ್ಕೆ ಲವ್ ಯು ಎಂದು ರಿಪ್ಲೇ ಮಾಡಿದ್ದಾರೆ.
ರಣಬೀರ್ ಕಪೂರ್ ಅವರ ಸಹೋದರಿ ರಿಧಿಮಾ ಕಪೂರ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡು ಬೆಂಕಿಯ ಎಮೋಜಿಯ ಜೊತೆ 'ಕಾಯಲು ಸಾಧ್ಯವಿಲ್ಲ' ಎಂದು ಕ್ಯಾಪ್ಷನ್ ನೀಡಿದ್ದಾರೆ
ಶಾರುಖ್ ಖಾನ್ ಟ್ವೀಟ್ ಮಾಡಿ ತಮ್ಮ ಲವ್ ಯು ಜೀಂದಗಿ ಸಿನಿಮಾದ ಕೋ ಸ್ಟಾರ್ ಆಲಿಯಾರಿಗೆ ವಿಶ್ ಮಾಡಿ ಆದ್ಭುತ್ ಅಭಿಯಕ್ಕಾಗಿ ಪ್ರಶಂಸಿದ್ದಾರೆ.
ಬಾಲಿವುಡ್‌ನ ಫೇಮಸ್ ಫಿಲ್ಮಂ ಮೇಕರ್ ಆಲಿಯಾರ ಮೆಂಟರ್ ಕರಣ್ ಜೋಹರ್ ಕೂಡ ಈ ಸಿನಿಮಾದ ಟೀಸರ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಹಾಗೇ ಅಕ್ಷಯ್ ಕುಮಾರ್ ಸಹ ಆಲಿಯಾರ ಆಭಿನಯ ಮೆಚ್ಚಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್‌ನ ಇನ್ನೊಬ್ಬ ನಟಿ ಪ್ರಿಯಾಂಕ ಚೋಪ್ರಾ ಟ್ವೀಟರ್‌ನಲ್ಲಿ ಆಲಿಯಾರಿಗೆ ಅಭಿನಂದನೆ ಸಲ್ಲಿಸಿ ಟೀಸರ್ ಪೋಸ್ಟ್ ಮಾಡಿದ್ದಾರೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅವರ ಸಿನಿಮಾ ರಾಧೆ ಶ್ಯಾಮ್ ಜೊತೆ ಗಂಗುಬಾಯಿ ಕಥಿಯಾವಾಡಿ ಜುಲೈ 30 ರಂದು ಚಿತ್ರಮಂದಿರಗಳಲ್ಲಿ ಬರಲಿದೆ .