ರಣಬೀರ್ ವಾಸಿಸುವ ಬಿಲ್ಡಿಂಗ್‌ನಲ್ಲೇ ಹೊಸ ಅಪಾರ್ಟೆಂಟ್ ಕೊಂಡ ಆಲಿಯಾ!
ಬಾಲಿವುಡ್‌ನ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಹಳ ಸಮಯದಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರ ಮದುವೆಯ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತವೆ. ಕೆಲವು ದಿನಗಳ ಹಿಂದೆ ಆಲಿಯಾ ಮತ್ತು ರಣಬೀರ್ ಈ ವರ್ಷದ ಅಂತ್ಯದ ವೇಳೆಗೆ ವಿವಾಹವಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ನಡುವೆ ಆಲಿಯಾ ರಣಬೀರ್ ಕಪೂರ್ ಬಿಲ್ಡಿಂಗ್‌ನಲ್ಲಿ ತಮಗಾಗಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಅಲಿಯಾ ಭಟ್ ಬಾಂದ್ರಾದ ಪಾಲಿ ಹಿಲ್ ಕಟ್ಟಡದಲ್ಲಿ 2460 ಚದರ ಅಡಿಯ ಹೊಸ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ, ಇದೇ ಅಪಾರ್ಟ್‌ಮೆಂಟ್‌ನಲ್ಲಿಯೇ ರಣಬೀರ್ ಕಪೂರ್ ವಾಸವಿದ್ದಾರೆ.
ರಣಬೀರ್ ಅಪಾರ್ಟ್ಮೆಂಟ್ ಈ ಕಟ್ಟಡದ 7ನೇ ಮಹಡಿಯಲ್ಲಿದ್ದರೆ. ಆಲಿಯಾ ಅಪಾರ್ಟ್ಮೆಂಟ್ ಖರೀದಿಸಿರುವುದು 5ನೇ ಮಹಡಿಯಲ್ಲಿ. ವರದಿಗಳ ಪ್ರಕಾರ, ಆಲಿಯಾ ಅವರ ಈ ಹೊಸ ಮನೆಯ ಬೆಲೆ 32 ಕೋಟಿಗಳು.
ಪ್ರಸ್ತುತ, ಆಲಿಯಾ ತನ್ನ ಸಹೋದರಿ ಶಾಹೀನ್ ಭಟ್ ಜೊತೆ ಜುಹುವಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ ಆಕೆ ತನ್ನ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಲಿದ್ದಾರೆ.
ಆಲಿಯಾ ತನ್ನ ಹೊಸ ಅಪಾರ್ಟ್‌ಮೆಂಟ್‌ನ ಒಳಾಂಗಣ ವಿನ್ಯಾಸಕ್ಕಾಗಿ ಶಾರುಖ್ ಖಾನ್ ಅವರ ಪತ್ನಿ ಗೌರಿಯೊಂದಿಗೆ ಮಾತನಾಡಿದ್ದಾರೆ ಎಂಬ ವರದಿಗಳಿವೆ. ಗೌರಿ ಸ್ವತಃ ಇಂಟೀರಿಯರ್ ಡಿಸೈನರ್ ಆಗಿದ್ದು, ದೆಹಲಿಯ ಐಷಾರಾಮಿ ಬಂಗಲೆಯ ಇಂಟಿರೀಯರ್ ಸ್ವತಃ ಅವರೇ ಡಿಸೈನ್ ಮಾಡಿದ್ದಾರೆ.
ಆಲಿಯಾ ಭಟ್ ಪ್ರಸ್ತುತ ಜುಹುನಲ್ಲಿ ವಾಸಿಸುವ ಮನೆಯ ಮೌಲ್ಯ ಸುಮಾರು 13 ಕೋಟಿ ರೂ. ಆಲಿಯಾದ ಈ ಮನೆ 2300 ಚದರ ಅಡಿ ವಿಸ್ತೀರ್ಣದಲ್ಲಿದೆ. ಆಲಿಯಾ ಅವರ ಮನೆಯನ್ನು ಇಂಟೀರಿಯರ್ ಡಿಸೈನರ್ ರಿಚಾ ಬಹ್ಲ್ ವಿನ್ಯಾಸಗೊಳಿಸಿದ್ದಾರೆ.
ಬಹಳ ಸಮಯದಿಂದ ರೆಇಲೆಷನ್‌ಶಿಪ್‌ನಲ್ಲಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷದ ಡಿಸೆಂಬರ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಲಿದ್ದಾರೆ ಮತ್ತು ವಿವಾಹ ಕಾರ್ಯಗಳು ಡಿಸೆಂಬರ್ 21 ರಂದು ಪ್ರಾರಂಭವಾಗಲಿದ್ದು, ಮುಂದಿನ 4 ದಿನಗಳವರೆಗೆ ನಡೆಯಲಿದೆ ಎಂದು ವರದಿಯಾಗಿದೆ . ಬ್ರಹ್ಮಾಸ್ತ್ರ ಬಿಡುಗಡೆಯಾದ ನಂತರ ಇಬ್ಬರೂ ಮದುವೆಯಾಗಬಹುದು ಎಂದು ಈಗ ಹೇಳಲಾಗುತ್ತಿದೆ.
ಈ ವರ್ಷ ಏಪ್ರಿಲ್ 30 ರಂದು ರಿಷಿ ಕಪೂರ್ ನಿಧನರಾದ ನಂತರ ಕಪೂರ್ ಕುಟುಂಬ ಮದುವೆಯನ್ನು ಮುಂದೂಡಲು ನಿರ್ಧರಿಸಿತು. ನಂತರ ಕೊರೋನಾ ವೈರಸ್ ಮತ್ತು ಇತರ ಕಾರಣಗಳಿಂದಾಗಿ ಮದುವೆಯನ್ನು ಮತ್ತೆ ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ಕಪೂರ್ ಕುಟುಂಬದಿಂದ ಇನ್ನೂ ಯಾವುದೇ ಹೇಳಿಕೆ ಬಂದಿಲ್ಲ.
ಮೇ, 2018 ರಲ್ಲಿ ನಡೆದ ಸೋನಮ್ ಕಪೂರ್ ಅವರ ಮದುವೆಗೆ ಆಲಿಯಾ-ರಣಬೀರ್ ಒಟ್ಟಿಗೆ ಹೋಗುವ ಮೂಲಕ ತಮ್ಮ ಸಂಬಂಧವನ್ನು ಜಗಜ್ಜಾಹೀರಗೊಳಿಸಿದರು.
ಕೆಲಸದ ಬಗ್ಗೆ ಮಾತನಾಡುತ್ತಾ, ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಅವರ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ ಮೌನಿ ರಾಯ್ ಮತ್ತು ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೋಡೆಕ್ಷನ್ ನಿರ್ಮಿಸಿದೆ.