New Mumbai Flat: ಹೂಡಿಕೆಗಾಗಿ ಲಕ್ಷುರಿ ಫ್ಲಾಟ್ ಖರೀದಿಸಿದ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿ ಹೊಸ ಫ್ಲಾಟ್ ಖರೀದಿಸಿದ್ದಾರೆ. ಕೋಟಿಗಳ ವೆಚ್ಚದಲ್ಲಿ ಖರೀದಿಸಿರುವ ಮನೆಗೆ ಶಿಫ್ಟ್ ಆಗ್ತಾರಾ ನಟ ?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ 7.8 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈನ ಖಾರ್‌ನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
ನಟ ಮನೆ ಖರೀದಿಸಿರೋ ವಿಚಾರ ತಿಳಿದು ನಟ ಮನೆ ಬದಲಾಯಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹೌದಾ ? ಹೊಸ ಮನೆಗೆ ಶಿಫ್ಟ್ ಆಗ್ತಾರಾ ಅಕ್ಷಯ್ ?
ಆದರೆ ಜಾಯ್ ಲೆಜೆಂಡ್ ಎಂಬ ಕಟ್ಟಡದ 19 ನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್ ಅನ್ನು ನಟ ಅಕ್ಷಯ್ ಕುಮಾರ್ ಕೇವಲ ಹೂಡಿಕೆಗಾಗಿ ಖರೀದಿಸಿದ್ದಾರೆ ಎಂದು ಬಿಲ್ಡರ್ ಸ್ಪಷ್ಟಪಡಿಸಿದ್ದಾರೆ.
ಈ ಖರೀದಿಯು ಹೂಡಿಕೆ ಉದ್ದೇಶಕ್ಕಾಗಿ ಮಾತ್ರ. ಮಾಧ್ಯಮ ವರದಿಗಳಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಫ್ಲಾಟ್ ಅಲ್ಲ, ಇದು ಕೇವಲ 1800 ಚದರ ಅಡಿ ಇದೆ. ಅಕ್ಷಯ್ ಕುಮಾರ್ ಇಲ್ಲಿ ವಾಸಿಸುತ್ತಾರೆ ಎಂಬ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಬಿಲ್ಡರ್ ಭವೆನ್ ಜೆ ಸೋನಿ ಹೇಳಿದ್ದಾರೆ.
ಇದು ಖಾಲಿ ಫ್ಲಾಟ್ ಆಗಿದೆ. ಯಾವುದೇ ಇಂಟೀರಿಯರ್ ಅಥವಾ ಪೀಠೋಪಕರಣಗಳನ್ನು ಜೋಡಿಸಿಲ್ಲ. ಇದನ್ನು ಒಪ್ಪಂದದಲ್ಲಿ ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ.