ಹೆಂಡ್ತಿಯದ್ದು ಬಿಟ್ಟು, ಇವರ ಫೋಟೋ ಪರ್ಸಲ್ಲಿ ಇಟ್ಕೊಂಡಿದ್ದಾರಂತೆ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಇತ್ತೀಚೆಗೆ ಮಾಧ್ಯಮಗಳಿಗೆ ತಮ್ಮ ಪರ್ಸ್ ನಲ್ಲಿ ಇರುವ ಫೋಟೋ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಖಂಡಿತವಾಗಿಯೂ ಹೆಂಡ್ತಿ ಫೋಟೊ ಅಲ್ಲ, ಮತ್ಯಾರ ಫೋಟೊ ಇಲ್ಲಿದೆ ನೋಡಿ.

ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಜಾಕ್ವೆಲಿನ್ ಫರ್ನಾಂಡಿಸ್, ಸೋನಮ್ ಬಜ್ವಾ, ನರ್ಗಿಸ್ ಫಕ್ರಿ, ಜಾಕಿ ಶ್ರಾಫ್, ನಾನಾ ಪಾಟೇಕರ್, ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಮತ್ತು ನಿರ್ದೇಶಕ ತರುಣ್ ಮನ್ಸುಖಾನಿ ಅವರು ಮುಂಬೈನ ಮಲ್ಟಿಪ್ಲೆಕ್ಸ್‌ನಲ್ಲಿ ತಮ್ಮ ಹೌಸ್‌ಫುಲ್ 5 (Housefull 5) ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಅಲ್ಲಿ ಅಕ್ಷಯ್ ಜನರಿಗೆ ತಮ್ಮ ಪರ್ಸ್ ನಲ್ಲಿದ್ದ ಫೋಟೊ ತೋರಿಸಿದರು. ಆದರೆ ಅಲ್ಲಿದ್ದ ಫೋಟೊ ಹೆಂಡ್ತಿಯದ್ದಾಗಿರಲಿಲ್ಲ.
ಅಕ್ಷಯ್ ಕುಮಾರ್ (Akshay Kumar) ಪರ್ಸ್ ನಲ್ಲಿ ಇದ್ದದ್ದು ಚಾರ್ಲಿ ಚಾಪ್ಲಿನ್ ಫೋಟೊ. ಇದರ ಬಗ್ಗೆ ಮಾತನಾಡುತ್ತಾ, ಅಕ್ಷಯ್ ಕುಮಾರ್, ನಾನು ಚಾರ್ಲಿ ಚಾಪ್ಲಿನ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದರು. ನನ್ನ ಪರ್ಸ್ ನಲ್ಲಿ ಚಾರ್ಲಿ ಚಾಪ್ಲಿನ್ ಫೋಟೊವಿದೆ. ನೀವು ಅದನ್ನು ನೋಡಲು ಬಯಸಿದರೆ, ನಾನು ಅದನ್ನು ನಿಮಗೆ ತೋರಿಸಬಲ್ಲೆ ಎನ್ನುತ್ತಾ ತನ್ನ ಪರ್ಸ್ ನಲ್ಲಿರುವ ಚಾರ್ಲಿ ಚಾಪ್ಲಿನ್ ಫೋಟೊವನ್ನು ತೋರಿಸಿದರು.
ಚಾರ್ಲಿ ಚಾಪ್ಲಿನ್ ಬಗ್ಗೆ ಹೇಳುತ್ತಾ, ನಾನು ಚಾರ್ಲಿ ಚಾಪ್ಲಿನ್ (Charlie Chaplin) ಅವರ ದೊಡ್ಡ ಅಭಿಮಾನಿ ಏಕೆಂದರೆ ಅವರು ಒಂದೇ ಒಂದು ಪದವನ್ನು ಹೇಳದೆ ಹಾಸ್ಯ ಮಾಡುವ ರೀತಿ ಅದ್ಭುತವಾಗಿದೆ. ಈ ಚಿತ್ರದಲ್ಲಿನ ಹಾಸ್ಯವೂ ಸಹ ಅದೇ ರೀತಿಯದ್ದಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಕ್ಷಯ್ ಕುಮಾರ್, 'ಚಾರ್ಲಿ ಚಾಪ್ಲಿನ್ ಮಾತನಾಡದೆ ಮಾಡುತ್ತಿದ್ದ ಹಾಸ್ಯ ಅಷ್ಟು ಸುಲಭವಲ್ಲ. ಭಾವಗಳಿಂದ ಯಾರನ್ನಾದರೂ ನಗಿಸುವುದು ದೊಡ್ಡ ವಿಷಯ. ನಾನು ಅವರನ್ನು ಇಷ್ಟಪಡಲು ಇದೇ ಕಾರಣ. ದುರದೃಷ್ಟವಶಾತ್, ಈ ರೀತಿಯ ಹಾಸ್ಯಕ್ಕೆ ಅದಕ್ಕೆ ಅರ್ಹವಾದ ಗೌರವ, ಪ್ರಶಂಸೆ ಅಥವಾ ಮನ್ನಣೆ ಸಿಗುವುದಿಲ್ಲ ಎಂದಿದ್ದಾರೆ.
'ಸ್ಲ್ಯಾಪ್‌ಸ್ಟಿಕ್ ಹಾಸ್ಯ' (slapstick comedy) ಎಂದು ಕರೆಯಲ್ಪಡುವ ಚಾರ್ಲಿ ಚಾಪ್ಲಿನ್ ಅವರ ಹಾಸ್ಯ ಚಿತ್ರಗಳು ಅದ್ಭುತವಾಗಿವೆ. ಅದೇ ರೀತಿ ಹೌಸ್‌ಫುಲ್ ಕೂಡ ಒಂದು ಸ್ಲ್ಯಾಪ್‌ಸ್ಟಿಕ್ ಹಾಸ್ಯ ಚಿತ್ರವಾಗಿದೆ. ತುಂಬಾನೆ ಮನರಂಜನೆ ನೀಡುತ್ತದೆ ಎಂದು ಹೇಳಿದ್ದಾರೆ.
ಹೌಸ್‌ಫುಲ್ 5 ಬಗ್ಗೆ ಹೇಳುವುದಾದರೆ, ಈ ಚಿತ್ರ ಮುಂದಿನ ತಿಂಗಳು ಅಂದರೆ ಜೂನ್ 6 ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಅನ್ನು ಮೇ 27 ರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ (Housefull 5 trailer) ನೋಡಿದ ನಂತರ, ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.