- Home
- Entertainment
- Cine World
- ಎಲ್ಲರ ಮುಂದೆಯೇ ಪತ್ನಿಯಿಂದ ಜೀನ್ಸ್ ಪ್ಯಾಂಟ್ ಬಟನ್ ಬಿಚ್ಚಿಸಿಕೊಂಡಿದ್ರು ನಟ ಅಕ್ಷಯ್ ಕುಮಾರ್
ಎಲ್ಲರ ಮುಂದೆಯೇ ಪತ್ನಿಯಿಂದ ಜೀನ್ಸ್ ಪ್ಯಾಂಟ್ ಬಟನ್ ಬಿಚ್ಚಿಸಿಕೊಂಡಿದ್ರು ನಟ ಅಕ್ಷಯ್ ಕುಮಾರ್
57 ವರ್ಷದ ಅಕ್ಷಯ್ ಕುಮಾರ್ ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. 2009ರ4ರಲ್ಲಿ ನಟ ಅಕ್ಷಯ್ ಕುಮಾರ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಆ ವಿವಾದ ಏನು ಎಂಬುದರ ಮಾಹಿತಿ ಇಲ್ಲಿದೆ.

2009ರಲ್ಲಿ ಅಂದು ಅಕ್ಷಯ್ ಕುಮಾರ್ ಧರಿಸಿದ್ದ ಆ ಜೀನ್ಸ್ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಹಾಗಾದ್ರೆ ಆ ವಿವಾದ ಏನು? ಅಕ್ಷಯ್ ಕುಮಾರ್ ಧರಿಸಿದ್ದ ಜೀನ್ಸ್ ಈ ವಿವಾದಕ್ಕೆ ಕಾರಣವಾಯಿತೇ?
2009ರಲ್ಲಿ ನಟ ಅಕ್ಷಯ್ ಕುಮಾರ್ ಉತ್ಪನ್ನವೊಂದರ ಕಾರ್ಯಕ್ರಮದಲ್ಲಿ Ramp ವಾಕ್ ಮಾಡಿದ್ದರು. ಈ ವಾಕ್ ವೇಳೆ ಅಕ್ಷಯ್ ಕುಮಾರ್ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆ ಲಕ್ಮೆ ಫ್ಯಾಷನ್ ವೀಕ್ ಸಮಯದಲ್ಲಿ ನಡೆಯಿತು. ಅಕ್ಷಯ್ ಕುಮಾರ್ ಈ ಕಾರ್ಯಕ್ರಮದಲ್ಲಿ Ramp ವಾಕ್ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರಿಂದ ಎಲ್ಲರ ಮುಂದೆ ತಮ್ಮ ಜೀನ್ಸ್ ಬಟನ್ ಅನ್ನು ಬಿಚ್ಚಿಸಿಕೊಂಡಿದ್ದರು.
ವಿವಾದದ ಬಳಿಕ ಸ್ಕ್ರಿಪ್ಟ್ ಬೇಡಿಕೆಯಂತೆ ತನ್ನ ಜೀನ್ಸ್ ಬಟನ್ ಅನ್ನು ಬಿಚ್ಚಲು ಟ್ವಿಂಕಲ್‌ಗೆ ಹೇಳಿದ್ದಾಗಿ ಅಕ್ಷಯ್ ಹೇಳಿದ್ದರು. ಕಾರ್ಯಕ್ರಮದಲ್ಲಿದ್ದ ಜನರು ಸಹ ಬಟನ್ ಬಿಚ್ಚುವಂತೆ ಹುರಿದುಂಬಿಸಿದ್ದರು. ಆದರೆ ನಂತರ ಅದು ಅವರನ್ನು ಸಮಸ್ಯೆಗೆ ಸಿಲುಕಿಸಿತ್ತು.
2009 ರ ಮೇ 30 ರಂದು ಮುಂಬೈನ ವಾಕೋಲಾ ಪೊಲೀಸ್ ಠಾಣೆಯಲ್ಲಿ ಅಕ್ಷಯ್, ಟ್ವಿಂಕಲ್ ಖನ್ನಾ, ಕಾರ್ಯಕ್ರಮ ನಿರ್ವಹಣಾ ಕಂಪನಿಯ ಕಾರ್ಯದರ್ಶಿ ಅಬಿಗೈಲ್ ರೋಜಾ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದರು.
ತಮ್ಮ ದೂರಿನಲ್ಲಿ, ಸಾಮಾಜಿಕ ಕಾರ್ಯಕರ್ತರು, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ಮೇಲೆ ಅಶ್ಲೀಲತೆ ಹರಡಿದ ಆರೋಪ ಹೊರಿಸಿದರು. ಈ ಅಶ್ಲೀಲ ನಾಟಕಕ್ಕೆ ಸ್ಕ್ರಿಪ್ಟ್ ಬರೆದಿದ್ದಕ್ಕಾಗಿ ಅಬಿಗೈಲ್ ಮೇಲೆ ಆರೋಪ ಹೊರಿಸಲಾಯಿತು.
ಈ ಬಗ್ಗೆ 'ಕಾಫಿ ವಿತ್ ಕರಣ್ 5' ನಲ್ಲಿ ಟ್ವಿಂಕಲ್ ಮಾತನಾಡಿದ್ದರು. ಪೊಲೀಸರು ಅಕ್ಷಯ್ ಕುಮಾರ್ ಅವರನ್ನು ಹುಡುಕುತ್ತಿದ್ದಾರೆ ಎಂದು ತಾಯಿ ಹೇಳಿದ್ದರು. ನಂತರ ಪೊಲೀಸರು ಅಕ್ಷಯ್ ಅವರನ್ನು ಬಂಧಿಸಿ 500 ರೂ. ಬಾಂಡ್‌ನಲ್ಲಿ ಬಿಡುಗಡೆ ಮಾಡಿದ್ದರು. ನಂತರ ಕ್ಲೀನ್‌ಚಿಟ್ ಸಿಕ್ತು. ವಿವಾದ ತೀವ್ರಗೊಂಡ ನಂತರ, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದ್ದರು. ಟ್ವಿಂಕಲ್ ತಮ್ಮ 'ಮಿಸೆಸ್ ಫನ್ನಿಬೋನ್ಸ್' ಪುಸ್ತಕದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.