- Home
- Entertainment
- Cine World
- ಆ ಸಿನಿಮಾದಲ್ಲಿ ನಾನು ಶಿವಣ್ಣ ಅವರ ಮಫ್ತಿ ಚಿತ್ರದ ಲುಕ್ಕು ಕಾಪಿ ಮಾಡಿದ್ದೇನೆ: ಬಾಲಯ್ಯ ಹೇಳಿದ್ದೇನು?
ಆ ಸಿನಿಮಾದಲ್ಲಿ ನಾನು ಶಿವಣ್ಣ ಅವರ ಮಫ್ತಿ ಚಿತ್ರದ ಲುಕ್ಕು ಕಾಪಿ ಮಾಡಿದ್ದೇನೆ: ಬಾಲಯ್ಯ ಹೇಳಿದ್ದೇನು?
ಶಿವಣ್ಣ ನನ್ನ ಸೋದರನಂತೆ. ಅವರಿಂದ ನನ್ನ ‘ಅಖಂಡ 2’ ಚಿತ್ರದ ಟ್ರೇಲರ್ ಬಿಡುಗಡೆ ಆಗಿರುವುದು ಖುಷಿ ಕೊಟ್ಟಿದೆ. ಈ ಬಾರಿ ಕನ್ನಡಕ್ಕೂ ನನ್ನ ಸಿನಿಮಾ ಡಬ್ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದರು ಬಾಲಕೃಷ್ಣ.

ಅಖಂಡ 2 ಟ್ರೇಲರ್ ಅನಾವರಣ
ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ತೆರೆಗೆ ಬರುತ್ತಿರುವ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಚಿತ್ರದ ಟ್ರೇಲರನ್ನು ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದರು. ಚಿಂತಾಮಣಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಟ್ರೇಲರ್ ಅನಾವರಣ ಆಯಿತು.
ಶಿವಣ್ಣ ನನ್ನ ಸೋದರ
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ, ‘ಶಿವಣ್ಣ ನನ್ನ ಸೋದರನಂತೆ. ಅವರಿಂದ ನನ್ನ ‘ಅಖಂಡ 2’ ಚಿತ್ರದ ಟ್ರೇಲರ್ ಬಿಡುಗಡೆ ಆಗಿರುವುದು ಖುಷಿ ಕೊಟ್ಟಿದೆ. ಈ ಬಾರಿ ಕನ್ನಡಕ್ಕೂ ನನ್ನ ಸಿನಿಮಾ ಡಬ್ ಆಗಿದೆ.
ಮಫ್ತಿ ಚಿತ್ರದಿಂದ ಕಾಪಿ
ಇದು ಪ್ಯಾನ್ ಇಂಡಿಯಾ ಸಿನಿಮಾ. ನಾನೂ ಶಿವಣ್ಣ ಅವರಿಂದ ಸ್ಫೂರ್ತಿ ಪಡೆದುಕೊಂಡಿದ್ದೇನೆ. ನನ್ನ ನಟನೆಯ ‘ವೀರ ನರಸಿಂಹರೆಡ್ಡಿ’ ಚಿತ್ರದಲ್ಲಿ ನನ್ನ ಲುಕ್ಕು ಶಿವಣ್ಣ ಅವರ ‘ಮಫ್ತಿ’ ಚಿತ್ರದಿಂದ ಕಾಪಿ ಮಾಡಿದ್ದು. ಈ ಲುಕ್ಕು ನಮ್ಮಿಬ್ಬರಿಗೆ ಚೆನ್ನಾಗಿ ಕುದುರಿದೆ’ ಎಂದರು.
ನನ್ನ ಅಣ್ಣ ಬಾಲಯ್ಯ
ಶಿವಣ್ಣ, ‘ಬಾಲಯ್ಯ ಅವರು ನನ್ನ ಅಣ್ಣನಂತೆ. ಅಣ್ಣನ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಅವಕಾಶ ತಮ್ಮನಾದ ನನಗೆ ಸಿಕ್ಕಿದೆ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಂತೆ’ ಎಂದರು. ಸಂಯುಕ್ತಾ ಚಿತ್ರದ ನಾಯಕಿ. ಸಾಹಸ ನಿರ್ದೇಶಕ ರವಿವರ್ಮಾ, ನಟರಾದ ಅಯ್ಯಪ್ಪ, ಶರತ್ ಲೋಹಿತಾಶ್ವ ಇದ್ದರು.
ಬೋಯಪಾಟಿ ಶ್ರೀನು ನಿರ್ದೇಶನ
ಅಖಂಡ 2 ಸಿನಿಮಾಗೆ ಬೋಯಪಾಟಿ ಶ್ರೀನು ನಿರ್ದೇಶನವಿದೆ. ಇದು ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ. ತಮನ್ ಮ್ಯೂಸಿಕ್ ನೀಡಿದ್ದಾರೆ. ಅಖಂಡ 2 ಸಿನಿಮಾ ಪ್ರತಿಷ್ಠಿತ ‘14 ರೀಲ್ಸ್ ಪ್ಲಸ್’ ಬ್ಯಾನರ್ ಮೂಲಕ ನಿರ್ಮಾಣವಾಗಿದೆ. ರಾಮ್ ಅಚಂತ, ಗೋಪಿಚಂದ್ ಅಚಂತ ಅವರು ನಿರ್ಮಾಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

