Nysa Devgan: ಅಜಯ್ ದೇವಗನ್ - ಕಾಜೋಲ್ ಪುತ್ರಿ ನ್ಯಾಸಾಳ ಪಾರ್ಟಿ ಫೋಟೋಸ್ ವೈರಲ್
ನವೆಂಬರ್ 24 ರಂದು ಪ್ರಪಂಚದಾದ್ಯಂತ ಥ್ಯಾಂಕ್ಸ್ ಗೀವಿಂಗ್ (Thanks Giving) ದಿನವನ್ನು ಆಚರಿಸಲಾಯಿತು. ಪರಸ್ಪರ ಧನ್ಯವಾದ ಹೇಳಲು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅಜಯ್ ದೇವಗನ್ (Ajay Devgn) ಮತ್ತು ಕಾಜೋಲ್ (Kajol) ಪುತ್ರಿ ನ್ಯಾಸಾ ದೇವಗನ್ (Nysa Devgn) ಆಪ್ತ ಸ್ನೇಹಿತರೊಂದಿಗೆ ಈ ಸಂದರ್ಭವನ್ನು ಆಚರಿಸಿದರು. ಅವರ ಪಾರ್ಟಿಯ ಕೆಲವು ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಓರ್ಹಾನ್ ಅವತಾರಮಣಿ, ಅರ್ಜುನ್ ರಾಂಪಾಲ್ ಅವರ ಮೊದಲ ಪತ್ನಿ ಮೆಹರ್ ಜೆಸಿಯಾ ಅವರ ಮಗಳು ಮಹಿಕಾ ರಾಂಪಾಲ್, ಸುನೀಲ್ ಶೆಟ್ಟಿ ಅವರ ಮಗ ಅರ್ಹಾನ್ ಅವರ ಗೆಳತಿ ತಾನಿಯಾ ಶ್ರಾಫ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.
ಪಾರ್ಟಿಯ ಫೋಟೋಗಳನ್ನು ಓರ್ಹಾನ್ ಅವತಾರಮಣಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಇದನ್ನು ನೋಡಿದ ನಂತರ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಪುತ್ರಿಯರಾದ ನಟಿ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಪ್ರತಿಕ್ರಿಯಿಸಿದ್ದಾರೆ
ಫೋಟೋಗಳಿಗೆ ಪ್ರತಿಕ್ರಿಯಿಸಿದ ಖುಷಿ ಕಪೂರ್, 'ಮಿಸ್ ಯು ಮೈ ಫೇವ್ ಐಕಾನ್' ಎಂದು ಬರೆದರೆ, ಜಾಹ್ನವಿ ಕಪೂರ್ 'ಮಿಸ್ ಯು ಬೇಬಿ' ಎಂದು ಕಾಮೆಂಟ್ ಮಾಡಿದ್ದಾರೆ.
ವೀರ್ ಪಹಾಡಿಯಾ ಮತ್ತು ಡಿಜೆ ಗಣೇಶ್, ಭೂಮಿ ಪೆಡ್ನೇಕರ್, ಅವರ ಸಹೋದರಿ ಸಮೀಕ್ಷಾ ಪೆಡ್ನೇಕರ್ ಮತ್ತು ಸೆಲೆಬ್ರಿಟಿಗಳು ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.
19 ವರ್ಷದ ನ್ಯಾಸಾ ದೇವಗನ್, ಸಿಂಗಾಪುರದ ಯುನೈಟೆಡ್ ವರ್ಲ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷ್ಯಾದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈಗ ಸ್ವಿಟ್ಜರ್ಲೆಂಡ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ನೈಸಾ ದೇವಗನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಖಾಸಗಿಯಾಗಿ ಇರಿಸಿದ್ದರು, ಕೂಡದರೆ ಅವರ ಹಾಲಿಡೇ ಮತ್ತು ಸ್ನೇಹಿತರೊಂದಿಗೆ ಪಾರ್ಟಿಗಳ ಪೋಟೋಗಳು ಆಗಾಗ್ಗೆ ವೈರಲ್ ಆಗುತ್ತವೆ.
'ನನ್ನ ಮಗಳು ನನಗೆ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಇದುವರೆಗೂ ಹೇಳಿಲ್ಲ. ಹಾಗಾಗಿ ಅವಳ ಬಗ್ಗೆ ನಾವು ಹೇಳುತ್ತಿರುವುದು ಕಾಲ್ಪನಿಕ.' ಎಂದು ನ್ಯಾಸಾ ಅವರ ವೃತ್ತಿಜೀವನದ ಬಗ್ಗೆ, ಅಜಯ್ ದೇವಗನ್ ಒಮ್ಮೆ ಹೇಳಿದ್ದರು.
Nysa Devgn
ಅವಳು ಇನ್ನೂ ಹದಿಹರೆಯದವಳು, ಅವಳು ಇನ್ನೂ ಕಾಜೋಲ್ ಅಥವಾ ನನಗೆ ಏನು ವೃತ್ತಿಜೀವನವನ್ನು ಮಾಡಲು ಬಯಸುತ್ತಾಳೆ ಎಂದು ಹೇಳಿಲ್ಲ. ಪ್ರಸ್ತುತ, ಅವಳು ವಿದೇಶದಲ್ಲಿ ಓದುತ್ತಿದ್ದಾಳೆ. ಅವಳು ಚಲನಚಿತ್ರಗಳಲ್ಲಿ ವೃತ್ತಿಜೀವನವನ್ನು ಮಾಡಲು ನಿರ್ಧರಿಸಿದರೆ, ಅದು ಅವಳದೇ ಆಯ್ಕೆ ಆಗಿರುತ್ತದೆ. ಪೋಷಕರಾಗಿ, ನಾವು ಯಾವಾಗಲೂ ಅವಳನ್ನು ಬೆಂಬಲಿಸುತ್ತೇವೆ' ಎಂದು ಅಜಯ್ ಇನ್ನಷ್ಷೂ ಹೇಳಿದ್ಗರು.