ಐಶ್ವರ್ಯಾ ರೈ ಕಾಪಿಯಂತಿದ್ದಾಳೆ ಈ ಪಾಕ್ ಚೆಲುವೆ
ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಒಬ್ಬ ಐಶ್ವರ್ಯಾ ಇದ್ದಾಳೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಕಾರ್ಬನ್ ಕಾಪಿಯಂತಿರೋ ಈಕೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ.
ಬಾಲಿವುಡ್ ನಟ ಐಶ್ವರ್ಯಾ ರೈ ಬಚ್ಚನ್ ಅವರ ಕಾಪಿಯಂತಿರೋ ಸುಂದರಿಯರ ಪಟ್ಟಿಗೆ ಮತ್ತೊಂದು ಸೇರ್ಪಡೆ ಸಿಕ್ಕಿದೆ.
ಹಿಂದಿನ ಮಿಸ್ ವರ್ಲ್ಡ್‌ನ ಹೋಲಿಕೆ ಇರೋ ಮಾನಸಿ ನಾಯಕ್, ಅಮೃತ ಅಮ್ಮು ಮತ್ತು ಮಹ್ಲಘಾ ಜಬೆರಿ ನಂತರ ಇದೀಗ ನೆಟ್ಟಿಗರಯ ಜನರ ಗಮನ ಸೆಳೆದದ್ದು ಆಮ್ನಾ ಇಮ್ರಾನ್.
ಆಮ್ನಾ ಪಾಕಿಸ್ತಾನದ ಸೌಂದರ್ಯ ಬ್ಲಾಗರ್ ಆಗಿದ್ದು, ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಮ್ನಾ ತನ್ನ ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅದರಲ್ಲೂ ಐಶ್ ಅವರ ಲುಕ್‌ಗಳನ್ನೇ ಮರು ಸೃಷ್ಟಿಸಿದ್ದಾರೆ. ಕೆಲವು ವೀಡಿಯೊಗಳನ್ನು ಸಹ ಮಾಡಿದ್ದಾರೆ.
ಎ ದಿಲ್ ಹೈ ಮುಷ್ಕಿಲ್, ದೇವದಾಸ್ ಮತ್ತು ಮೊಹಬ್ಬಾತೇಂ ಸಿನಿಮಾಗಳ ದೃಶ್ಯಗಳನ್ನು ಅಭಿನಯಿಸಿದ್ದಾಳೆ.
ನೋಡೋಕೆ ಥೇಟ್ ಐಶ್ ಥರಾನೇ ಕಾಣಿಸೋ ಈಕೆ ಪಾಕಿಸ್ತಾನದಾಕೆ
ಇನ್‌ಸ್ಟಾಗ್ರಾಂ ಮೂಲಕ ಫೋಟೋ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವಾಕೆ ಸದ್ಯ ಐಶ್ ಕಾಪಿ ಅಂತಾನೇ ವೈರಲ್ ಆಗಿದ್ದಾರೆ