- Home
- Entertainment
- Cine World
- ಜೊತೆಯಾಗಿ ಕಾಣಿಸಿಕೊಂಡು ವಿಚ್ಚೇದನ ಸುದ್ದಿಗೆ ಅಂತ್ಯ ಹಾಡಿದ ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್
ಜೊತೆಯಾಗಿ ಕಾಣಿಸಿಕೊಂಡು ವಿಚ್ಚೇದನ ಸುದ್ದಿಗೆ ಅಂತ್ಯ ಹಾಡಿದ ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅವರಿಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಐಶ್ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ ಎಂಬ ಗಾಸಿಪ್ ಸುದ್ದಿಗಳಿಗೆ ಸ್ಟಾರ್ ದಂಪತಿ ಫುಲ್‌ಸ್ಟಾಪ್ ಇಟ್ಟಿದ್ದಾರೆ.

ಡಿ.15ರಂದು ಐಶ್ವರ್ಯಾ ಅವರು ಮುನಿಸಿಕೊಂಡು ಬಚ್ಚನ್ ಮನೆ ಜಲ್ಸಾದಿಂದ ಹೊರಗೆ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದೇ ದಿನ ಸಂಜೆ ತಮ್ಮ ಮಗಳು ಆರಾಧ್ಯ ಓದುತ್ತಿರುವ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸಂಜೆ ನಡೆದ ಈ ಕಾರ್ಯಕ್ರಮಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಅಗಸ್ತ್ಯಾ ನಂದಾ, ಐಶ್ವರ್ಯ ತಾಯಿ ವೃಂದಾ ರೈ ಕೂಡ ಬಂದಿದ್ದರು. ಅದಲ್ಲದೆ ಬಿಗ್ ಬಿ ಈ ವೇಳೆ ವೃಂದಾ ರೈ ಅವರ ಜೊತೆಗೆ ಮಾತನಾಡಿದರು.
ಕಾರ್ಯಕ್ರಮಕ್ಕೆ ಐಶ್ವರ್ಯಾ ತನ್ನ ತಾಯಿ ವೃಂದಾ ರೈ ರೈ ಜೊತೆ ಕಾರಿನಲ್ಲಿ ಆಗಮಿಸಿದ್ದರು. ಅಭಿಷೇಕ್ ಬಚ್ಚನ್ ತಮ್ಮ ತಂದೆ-ನಟ ಅಮಿತಾಬ್ ಬಚ್ಚನ್ ಮತ್ತು ಸೋದರಳಿಯ ಅಗಸ್ತ್ಯ ನಂದಾ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಐಶ್ವರ್ಯಾ ಅವರನ್ನು ಸೇರಿಕೊಂಡರು. ಬಳಿಕ ಐಶ್ವರ್ಯಾ ಅವರ ಹೆಗಲ ಮೇಲೆ ಕೈ ಹಾಕಿ ಹೋಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ಅತ್ತೆ ವೃಂದಾ ರೈ ಅವರನ್ನು ಕಾರಿನ ತನಕ ಬಂದು ಅಭಿಷೇಕ್ ಮತ್ತು ಐಶ್ವರ್ಯಾ ಮನೆಗೆ ಕಳುಹಿಸಿಕೊಟ್ಟರು. ಬಳಿಕ ತಮ್ಮ ಮಗಳು ಆರಾಧ್ಯ ಮತ್ತು ಪತ್ನಿ ಐಶ್ವರ್ಯಾ ಜೊತೆಗೆ ಒಂದೇ ಕಾರಿನಲ್ಲಿ ಮನೆಗೆ ಹೋದರು. ಬಿಗ್ ಬಿ ಮತ್ತು ಅಗಸ್ತ್ಯಾ ಒಂದೇ ಕಾರಿನಲ್ಲಿ ತೆರಳಿದರು.
ಈ ಹಿಂದೆ ಸ್ಟಾರ್ ದಂಪತಿ ಬೇರೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಅವರಿಬ್ಬರೂ ಮಗಳಿಗೋಸ್ಕರ ವಿಚ್ಚೇಧನ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ಅಮಿತಾಭ್ ಬಚ್ಚನ್ ಅವರು ಐಶ್ವರ್ಯಾ ಅವರ ಇನ್‌ಸ್ಟಾ ಅನ್ ಫಾಲೋ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಕೆಲವರು ಅವರು ಮೊದಲಿನಿಂದಲೂ ಫಾಲೋ ಮಾಡುತ್ತಿಲ್ಲ ಎಂದಿದ್ದರು.
ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಶ್ವೇತಾ ಬಚ್ಚನ್ ಜೊತೆಗೂ ಐಶ್ವರ್ಯಾ ಮಾತನಾಡುತ್ತಿಲ್ಲ. ಶ್ವೇತಾ ಬಚ್ಚನ್ ಗಂಡನಿಂದ ದೂರವಾಗಿ ಇದೀಗ ಅಮಿತಾಬ್ ಬಚ್ಚನ್ ಮನೆಗೆ ಬಂದಿದ್ದು, ಈ ಗಲಾಟೆ ಮತ್ತಷ್ಟು ಹೆಚ್ಚಾಗಲು ಕಾರಣ ಎಂದು ಹೇಳಲಾಗಿತ್ತು. ಆದರೆ ದಂಪತಿ ಆರಾಮವಾಗಿ ಮಾತನಾಡುತ್ತಾ ಒಟ್ಟಿಗೆ ಕಾಣಿಸಿಕೊಂಡು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ನಡುವೆ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ಟಾರ್ ದಂಪತಿ ಪುತ್ರಿ ಆರಾಧ್ಯ ಬಚ್ಚನ್ ನೀಡಿರುವ ಇಂಗ್ಲಿಷ್ ಡ್ರಾಮಾ ಮೆಚ್ಚುಗೆ ಪಡೆದಿದ್ದು, ಇಂಟೆರ್‌ನೆಟ್ ನಲ್ಲಿ ವೈರಲ್ ಆಗಿದೆ. ಆರಾಧ್ಯ ನೆಗೆಟಿವ್ ರೋಲ್ ಮಾಡಿದ್ದು ಈಕೆಯ ನಟನೆ ನೋಡಿರುವ ಅಭಿಮಾನಿಗಳು ಈಕೆ ಪ್ರಬುದ್ಧ ನಟಿಯಾಗಲಿದ್ದಾಳೆ ಎಂದು ಕೊಂಡಾಡಿದ್ದಾರೆ. ಅಭಿಮಾನಿಗಳು ಆರಾಧ್ಯ ಅವರ ಡೈಲಾಗ್ ಡೆಲಿವರಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ. ಐಶ್ವರ್ಯಾ-ಅಭಿಷೇಕ್ ಅವರ ಪ್ರೀತಿಯ ಮಗಳ ನಟನೆ ಕುರಿತು ತುಂಬಾ ಖುಷಿ ಪಟ್ಟಿದ್ದಾರೆ. ಐಶ್ವರ್ಯಾ ತಮ್ಮ ಮಗಳ ಅಭಿನಯವನ್ನು ತನ್ನ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡು ಖುಷಿಪಡುತ್ತಿರುವುದು ಕಂಡುಬಂದಿದೆ.
ಇತ್ತೀಚೆಗೆ ಅಗಸ್ತ್ಯ ನಂದಾ ಅವರ ಡಿಬಟ್ ಸಿನಿಮಾ ‘ದಿ ಆರ್ಚೀಸ್’ ನ ಪ್ರಥಮ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿತ್ತು. ಅತ್ತೆ ಐಶ್ವರ್ಯಾ ಮತ್ತು ಮಾವ ಅಭಿಷೇಕ್ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಿನ್ನೆ ಕೂಡ ಐಶ್ವರ್ಯಾ ಅವರು ಮಗಳ ಶಾಲೆಗೆ ಬಂದ ಅಗಸ್ತ್ಯ ನಂದಾ ಕೆನ್ನೆ ಹಿಡಿದು ಮುದ್ದಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.