Ponniyin Selvan; ಹೈದರಾಬಾದ್ ಈವೆಂಟ್‌ನಲ್ಲಿ ಕೈ ಕೈ ಹಿಡಿದು ವೇದಿಕೆ ಏರಿದ ಐಶ್ವರ್ಯಾ-ತ್ರಿಷಾ, ಫೋಟೋ ವೈರಲ್
ಪೊನ್ನಿಯನ್ ಸೆಲ್ವನ್, ಬಹುನಿರೀಕ್ಷೆಯ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಟ್ರೈಲರ್ ಮತ್ತು ಪೋಸ್ಟರ್ ಗಳ ಮೂಲಕ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿದೆ.
ಪೊನ್ನಿಯನ್ ಸೆಲ್ವನ್, ಬಹುನಿರೀಕ್ಷೆಯ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಟ್ರೈಲರ್ ಮತ್ತು ಪೋಸ್ಟರ್ ಗಳ ಮೂಲಕ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿದೆ.
ಪೊನ್ನಿಯನ್ ಸಿನಿಮಾದ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಸಿನಿಮಾತಂಡ ದೇಶದಾದ್ಯಂತ ಸಂಚಾರ ಮಾಡುತ್ತಿದೆ. ಸಿನಿಮಾದ ಬಗ್ಗೆ ಪ್ರಚಾರ ಮಾಡುತ್ತಿದೆ. ಇಡೀ ಸಿನಿಮಾತಂಡ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದೆ.
ಪೊನ್ನಿಯನ್ ಸೆಲ್ವನ್, ಮುಖ್ಯ ಆಕರ್ಷಣೆ ಬಾಲಿವುಡ್ ಸ್ಟಾರ್, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತು ತ್ರಿಷಾ ಕೃಷ್ಣನ್. ಈ ಸಿನಿಮಾ ಬಳಿಕ ಇಬ್ಬರು ಈಗ ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸದ್ಯ ಪೊನ್ನಿಯನ್ ಸೆಲ್ವನ್ ತಂಡ ಹೈದರಾಬಾದ್ ನಲ್ಲಿದೆ. ಇಡೀ ತಂಡ ಹೈದಬಾದ್ ಗೆ ಎಂಟ್ರಿ ಕೊಟ್ಟಿದೆ. ಐಸ್ವರ್ಯಾ ರೈ, ತ್ರಿಷಾ ಸೇರಿದಂತೆ ವಿಕ್ರಮ್, ಕಾರ್ತಿ, ಜಯಂ ರವಿ, ಎ ಆರ್ ರೆಹಮಾನ್ ಸೇರಿದಂತೆ ಇಡೀ ತಂಡ ಹೈದರಾಬಾದ್ ಈವೆಂಟ್ ನಲ್ಲಿ ಭಾಗಿಯಾಗಿತ್ತು.
ಈವೆಂಟ್ ನಲ್ಲಿ ಐಶ್ವರ್ಯಾ ಮತ್ತು ತ್ರಿಷಾ ಿಬ್ಬರು ಕೈ ಕೈ ಹಿಡಿದು ವೇದಿಕೆ ಏರಿದ ಫೋಟೋಗಳು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿದೆ. ಇಬ್ಬರ ಸ್ನೇಹ ನೋಡಿ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ ಮಾಡುತ್ತಿದ್ದಾರೆ. ಅಂದಹಾಗೆ ಸ್ವತಃ ತ್ರಿಷಾ ಅವರೇ ಐಶ್ವರ್ಯ ಜೊತೆ ಇರುವ ಫೋಟೋ ಶೇರ್ ಮಾಡಿ 'ಐಶ್' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಹೈದರಾಬಾದ್ ಈವೆಂಟ್ ನಲ್ಲಿ ತ್ರಿಷಾ ಬ್ಲ್ಯಾಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ರೈ ಕೆಂಪು ಮತ್ತು ಗೋಲ್ಡ್ ಬಣ್ಣದ ಹೆವಿ ಡ್ರೆಸ್ ನಲ್ಲಿ ಮಿಂಚಿದ್ದರು. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು ತ್ರಿಷಾ ಮತ್ತು ಐಶ್ವರ್ಯಾ ಇಬ್ಬರು ಜೊತೆ ಜೊತೆಯಲ್ಲೇ ಮುಂಬೈನಿಂದ ಹೈದರಾಬಾದ್ ಗೆ ಪ್ಲೈಟ್ ನಲ್ಲಿ ಬಂದ ಫೋಟೋಗಳು ಸಹ ವೈರಲ್ ಆಗಿವೆ. ತ್ರಿಷಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಐಶ್ವರ್ಯಾ ಫೋಟೋವನ್ನು ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫ್ಲೈಟ್ ನಲ್ಲಿ ವಿಕ್ರಮ್ ಮತ್ತು ಎ ಆರ್ ರೆಹಮಾನ್ ಕೂಡ ಇದ್ದರು.
ಐಶ್ವರ್ಯಾ ರೈ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿನಿ ಮತ್ತು ಮಂದಾಕಿನಿ ಎನ್ನುವ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತ್ರಿಷಾ ಕುಂದವೈ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನೇಕ ವರ್ಷಗಳ ಬಳಿಕ ಐಶ್ವರ್ಯಾ ರೈ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಐಶ್ವರ್ಯಾ ಮತ್ತು ತ್ರಿಷಾ ಇಬ್ಬರನ್ನು ಕಣ್ತುಂಬಿ ಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ.