- Home
- Entertainment
- Cine World
- ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಬೆನ್ನಲ್ಲೇ ಒಟ್ಟಿಗೆ ಇಸ್ಕಾನ್ ಟೆಂಪಲ್‌ಗೆ ಬಂದ ದಂಪತಿ!
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಬೆನ್ನಲ್ಲೇ ಒಟ್ಟಿಗೆ ಇಸ್ಕಾನ್ ಟೆಂಪಲ್‌ಗೆ ಬಂದ ದಂಪತಿ!
ಅಭಿಷೇಕ್ ಮತ್ತು ಐಶ್ವರ್ಯಾ ವೃಂದಾವನದಿಂದ ಕೆಲವು ಫೋಟೋಗಳು ಹೊರಬಂದಿವೆ, ಇದರಿಂದ ಅವರ ಅಭಿಮಾನಿಗಳು ತುಂಬಾ ಸಂತೋಷವಾಗಿದ್ದಾರೆ. ಈ ಫೋಟೋಗಳು ವಿಚ್ಛೇದನದ ವದಂತಿಗಳಿಗೆ ತೆರೆ ಎಳೆಯುತ್ತವೆಯೇ? ಎಂಬುದನ್ನು ಕಾದು ನೊಡಬೇಕಿದೆ.

ಕಳೆದ ಕೆಲವು ಸಮಯದಿಂದ ವಿಚ್ಛೇದನದ ವದಂತಿಗಳಿಂದ ಸುದ್ದಿಯಲ್ಲಿದ್ದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರು ಇದೀಗ ಒಟ್ಟಿಗೆ ದೇವಾಲಯಕ್ಕೆ ಬಂದು ಆಶೀರ್ವಾದ ಪಡೆದಿದ್ದಾರೆ. ಇಸ್ಕಾನ್‌ನ ಹರಿನಾಮ ದಾಸ್ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ವೃಂದಾವನ ಧಾಮದ ಆಶೀರ್ವಾದ ಪಡೆಯಲು ಸಂತೋಷವಾಗುತ್ತಿದೆ ಎಂದು ಹರಿನಾಮ ದಾಸ್ ಬರೆದಿದ್ದಾರೆ. ಅಶುತೋಷ್ ಗೋವಾರಿಕರ್ ಅವರ ಮಗನ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಲು ಬಂದಾಗ ಈ ಫೋಟೋಗಳನ್ನು ತೆಗೆಯಲಾಗಿದೆ.
ವಿಚ್ಛೇದನದ ವದಂತಿಗಳನ್ನು ಎದುರಿಸುತ್ತಿದ್ದ ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅನಂತ್ ಅಂಬಾನಿ ಮದುವೆಯಲ್ಲಿ ಪ್ರತ್ಯೇಕವಾಗಿ ಭಾಗವಹಿಸಿದಾಗ ವಿಚ್ಛೇದನದ ಸುದ್ದಿಗಳು ಹಬ್ಬಿದ್ದವು.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 20 ಏಪ್ರಿಲ್ 2007 ರಂದು ಮುಂಬೈನಲ್ಲಿ ವಿವಾಹವಾದರು. ಆದರೆ, ಇತ್ತೀಚೆಗೆ ಎಲ್ಲಿಯೇ ಹೋದರೂ ಇಬ್ಬರೂ ಬೇರೆ ಬೇರೆಯಾಗಿ ಹೋಗುತ್ತಿದ್ದರಿಂದ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಹೆಚ್ಚಾಗಿತ್ತು.