Tadap screening: ಅಥಿಯಾ ಜೊತೆ ಕಾಣಸಿಕೊಂಡ KL ರಾಹುಲ್!
ಮುಂಬೈನ Jio PVR ನಲ್ಲಿ ತಡಪ್ (Tadap ) ಚಿತ್ರದ ವಿಶೇಷ ಪ್ರದರ್ಶನವನ್ನು (screening) ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅಹಾನ್ ಶೆಟ್ಟಿ (Ahan Shetty) ಸಹೋದರಿ ಅಥಿಯಾ ಶೆಟ್ಟಿ (Athiya Shetty) ತನ್ನ ಬಾಯ್ ಫ್ರೆಂಡ್ ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಜೊತೆ ಆಗಮಿಸಿದ್ದಾರೆ. ಅದೇ ಸಮಯದಲ್ಲಿ, ಅಹಾನ್ ಶೆಟ್ಟಿ ಅವರ ಗರ್ಲ್‌ಫ್ರೆಂಡ್ ತಾನಿಯಾ ಶ್ರಾಫ್ (Tania Shroff) ಕೂಡ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಚಿತ್ರದ ಪ್ರಚಾರದಲ್ಲಿ ಸಹೋದರ ಮತ್ತು ಸಹೋದರಿ ಇಬ್ಬರೂ ತಮ್ಮ ಲವ್ ಜೊತೆ ಕಾಣಿಸಿಕೊಂಡರು. ಸುನೀಲ್ ಶೆಟ್ಟಿ ಕೂಡ ಮಗನ ಮೊದಲ ಸಿನಿಮಾ ನೋಡಲು ಬಂದಿದ್ದರು.
ಅಹಾನ್ ಶೆಟ್ಟಿ ಅವರು ತಮ್ಮ ಮೊದಲ ತಡಪ್ ಚಿತ್ರದ ಪ್ರೀಮಿಯರ್ ಶೋನಲ್ಲಿ ಕಾಣಿಸಿಕೊಂಡಿದ್ದು ಅವರ ಸಹ-ನಟಿ ತಾರಾ ಸುತಾರಿಯಾ (Tara Sutaria) ಜೊತೆ ಅಲ್ಲ. ಅವರ ಗರ್ಲ್‌ಫ್ರೆಂಡ್ ತಾನಿಯಾ ಶ್ರಾಫ್ ಅವರೊಂದಿಗೆ. ಅಹಾನ್ ಮತ್ತು ತಾನಿಯಾ ಶ್ರಾಫ್ ಕೈ ಕೈ ಹಿಡಿದು ನಡೆಯುತ್ತಿರುವುದು ಕಾಣಿಸಿತು.
ಫಾರ್ಮಲ್ಸ್ ಮತ್ತು ಲೆದರ್ ಜಾಕೆಟ್‌ನಲ್ಲಿ ಅಹಾನ್ ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ, ತಾನಿಯಾ ಶ್ರಾಫ್ ಕೂಡ ಗುಲಾಬಿ - ಕಪ್ಪು ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಅಹಾನ್ ಸಹೋದರಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟರ್ ಕೆ ಎಲ್ ರಾಹುಲ್ ಒಟ್ಟಿಗೆ ಕಾಣಿಸಿಕೊಂಡರು. ಸಹೋದರನ ಚಿತ್ರದ ಪ್ರದರ್ಶನಕ್ಕೆ ಅಥಿಯಾ ತಮ್ಮ ಬಾಯ್‌ಫ್ರೆಂಡ್ ಜೊತೆ ಆಗಮಿಸಿ ಎಲ್ಲರ ಗಮನ ಸೆಳೆದರು. ಅವರು ಕಪ್ಪು ಔಟ್ ಫಿಟ್ ಮತ್ತು ತೆರೆದ ಕೂದಲಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಇಬ್ಬರೂ ತಮ್ಮ ರಿಲೆಷನ್‌ಶಿಪ್ ಕಾರಣದಿಂದ ನ್ಯೂಸ್‌ನಲ್ಲಿದ್ದಾರೆ. ಹೀಗಿರುವಾಗ ಇವರಿಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇವರಿಬ್ಬರು ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ
ಸುನೀಲ್ ಶೆಟ್ಟಿ ಕೂಡ ತಮ್ಮ ಮಗ ಅಹಾನ್‌ನ ನಟನೆಯನ್ನು ತೆರೆಯ ಮೇಲೆ ನೋಡಲು ಬಂದರು. ಅವರು ತಮ್ಮ ಮಗನೊಂದಿಗೆ ಪಾಪರಾಜಿಗಳಿಗೆ ಪೋಸ್ ನೀಡಿದರು. ಈ ಸಮಯದಲ್ಲಿ ತಂದೆ ಮತ್ತು ಮಗ ಇಬ್ಬರೂ ತುಂಬಾ ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದರು.
ತಡಪ್ ಸಿನಿಮಾದ ನಟಿ ತಾರಾ ಸುತಾರಿಯಾ ಕೂಡ ಚಿತ್ರದ ಪ್ರದರ್ಶನಕ್ಕೆ ಆಗಮಿಸಿದ್ದರು. ಅಹಾನ್ ಶೆಟ್ಟಿ ಮತ್ತು ತಾರಾ ಸುತಾರಿಯಾ ಜೋಡಿಯನ್ನು ತೆರೆಯ ಮೇಲೆ ಜನರು ತುಂಬಾ ಇಷ್ಟಪಡುತ್ತಾರೆ. ಚಿತ್ರದ ಟ್ರೇಲರ್‌ನಲ್ಲಿ ಇಬ್ಬರ ಜೋಡಿ ಅದ್ಭುತವಾಗಿ ಕಾಣಿಸಿಕೊಂಡಿದೆ. ಟ್ರೇಲರ್ ಹೆಚ್ಚಿನ ಆಕ್ಷನ್ ಸೀಕ್ವೆನ್ಸ್ ಮತ್ತು ಸುಂದರವಾದ ಪ್ರೇಮಕಥೆಯನ್ನು ಸಹ ಒಳಗೊಂಡಿದೆ.
ಇನ್ನೂ ಈ ಸಿನಿಮಾದ ಬಗ್ಗೆ ಹೇಳುವುದಾದರೆ, ಅಹಾನ್ ಶೆಟ್ಟಿ ಮತ್ತು ತಾರಾ ಸುತರಿಯಾ ಅವರ ತಡಪ್ ಸಿನಿಮಾವನ್ನು ಮಿಲನ್ ಲುಥ್ರಿಯಾ ನಿರ್ದೇಶಿಸಿದ್ದಾರೆ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ. ಅಹಾನ್ ಸಾಜಿದ್ ನಾಡಿಯಾಡ್ವಾಲಾ ಅವರನ್ನು ಬಾಲಿವುಡ್‌ನಲ್ಲಿ ಲಾಂಚ್ ಮಾಡುತ್ತಿದ್ದಾರೆ.