- Home
- Entertainment
- Cine World
- 5 ವರ್ಷಗಳ ಬಳಿಕ ಪುಷ್ಪ ಗೆಟಪ್‌ನಿಂದ ಹೊರಬಂದ ಅಲ್ಲು ಅರ್ಜುನ್: ಹಾಗಿದ್ರೆ ಪುಷ್ಪ 3 ಕತೆಯೇನು?
5 ವರ್ಷಗಳ ಬಳಿಕ ಪುಷ್ಪ ಗೆಟಪ್‌ನಿಂದ ಹೊರಬಂದ ಅಲ್ಲು ಅರ್ಜುನ್: ಹಾಗಿದ್ರೆ ಪುಷ್ಪ 3 ಕತೆಯೇನು?
ಐದು ವರ್ಷಗಳ ಪುಷ್ಪ ಗೆಟಪ್‌ನಿಂದ ಹೊರಬಂದ ಅಲ್ಲು ಅರ್ಜುನ್ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇದರಿಂದ ಪುಷ್ಪ 3 ಸದ್ಯಕ್ಕೆ ಶುರುವಾಗೋದಿಲ್ಲ ಅನ್ನೋ ಸುಳಿವು ಸಿಕ್ಕಿದೆಯಾ?

ಪುಷ್ಪ 2 ರಿಲೀಸ್, ಥಿಯೇಟರ್‌ನಲ್ಲಿ ನೂಕುನುಗ್ಗಲು, ಕೋರ್ಟ್ ಕೇಸ್‌ಗಳು, ಸರ್ಕಾರದ ಕ್ರಮಗಳು... ಹೀಗೆ ಸಾಕಷ್ಟು ಸಮಸ್ಯೆಗಳನ್ನು ಅಲ್ಲು ಅರ್ಜುನ್ ಎದುರಿಸಬೇಕಾಯಿತು. ಯಶಸ್ಸನ್ನೂ ಸಂಭ್ರಮಿಸಲು ಆಗಲಿಲ್ಲ.
ಒಂದು ರೀತಿಯಲ್ಲಿ ರೇವತಿ ಸಾವಿಗೆ ಅಲ್ಲು ಅರ್ಜುನ್ ಕಾರಣ ಅನ್ನೋ ಭಾವನೆ ಮೂಡಿತ್ತು. ಇದರಿಂದ ಅಲ್ಲು ಅರ್ಜುನ್ ತುಂಬಾ ಬೇಸರಪಟ್ಟರು. ಪುಷ್ಪ ಗೆಟಪ್ ನೋಡಿದ್ರೆ ಫ್ಯಾನ್ಸ್‌ಗೂ ಬೇಸರ ಶುರುವಾಗಿತ್ತು.
ಉದ್ದ ಕೂದಲು, ಗಡ್ಡ ಬಿಟ್ಟಿದ್ದ ಅಲ್ಲು ಅರ್ಜುನ್ ಈಗ ಕೂದಲು ಕತ್ತರಿಸಿ, ಗಡ್ಡ ಶೇವ್ ಮಾಡಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಪುಷ್ಪ 3 ಘೋಷಣೆಯಾಗಿದೆ. ಆದರೆ ಅಲ್ಲು ಅರ್ಜುನ್ ಪುಷ್ಪ ಗೆಟಪ್‌ನಿಂದ ಹೊರಬಂದಿರೋದು ಸಿನಿಮಾ ಸದ್ಯಕ್ಕೆ ಶುರುವಾಗೋದಿಲ್ಲ ಅನ್ನೋ ಸುಳಿವು ನೀಡುತ್ತಿದೆಯಾ?
ಪುಷ್ಪ 3 ಶುರುವಾಗಲು ಇನ್ನೂ ಸಮಯ ಹಿಡಿಯಬಹುದು. ಅಷ್ಟರಲ್ಲಿ ಅಲ್ಲು ಅರ್ಜುನ್ ಬೇರೆ ಸಿನಿಮಾಗಳಲ್ಲಿ ನಟಿಸಬಹುದು. ತ್ರಿವಿಕ್ರಮ್, ಸಂದೀಪ್ ರೆಡ್ಡಿ, ಕೊರಟಾಲ ಶಿವ ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.