ಸೂಫಯಮ್‌ನೊಂದಿಗೆ ಮತ್ತೆ ಮಾಲಿವುಡ್ ‌ಗೆ ಅದಿತಿ ರಾವ್ ಹೈದಾರಿ

First Published Jun 26, 2020, 5:59 PM IST

ಅದಿತಿ ರಾವ್ ಹೈದಾರಿ ಬಾಲಿವುಡ್, ತಮಿಳು, ತೆಲಗು ಮಲೆಯಾಳಂ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ. ಮಲೆಯಾಳಂ ಚಿತ್ರ ಪ್ರಜಾಪತಿ ಮೂಲಕ ತಮ್ಮ ಸಿನಿಮಾ ಕೆರಿಯರ್‌ ಶುರುಮಾಡಿದ್ದರು ಇವರು. ಮುಗ್ದ ಚೆಲುವಿನ ಜೊತೆ ಅದ್ಭುತ ನಟನಾ ಕೌಶಲ್ಯ ಹೊಂದಿರುವ ಇವರು ಸಿನಿಮಾರಂಗದಲ್ಲಿ ಭರವಸೆ ಮೂಡಿಸಿರುವ ನಟಿ. ಪಾತ್ರಗಳ ಆಯ್ಕೆಯಲ್ಲಿ ಸೆನ್ಸಿಬಲ್‌ ಆಗಿರುವ ಅದಿತಿ, ತಮ್ಮ ಅಭಿನಯ ಹಾಗೂ ಪಾತ್ರಕ್ಕಾಗಿ ಫ್ಯಾನ್ಸ್‌ ಜೊತೆಗೆ ವಿಮರ್ಶಕರ ಮನವನ್ನೂ ಗೆದ್ದಿದ್ದಾರೆ. ಈಗ ಮತ್ತೆ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅದಿತಿ ಸುದ್ದಿಯಲ್ಲಿದ್ದಾರೆ. ಈ ಬಹುಭಾ‍ಅ ನಟಿಯ ಟಾಪ್‌ 5 ಸಿನಿಮಾದ ಕಿರುಪರಿಚಯ ಇಲ್ಲಿದೆ.