ಸೂಪರ್‌ಸ್ಟಾರ್ ನಟನ ಪ್ರೀತಿ ಸಿಗದೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಚಿತ್ರರಂಗ ತೊರೆದು ಖಿನ್ನತೆಗೆ ಜಾರಿದ ನಟಿ
ಬಾಲಿವುಡ್‌ನಲ್ಲಿ 50 ವರ್ಷ ದಾಟಿದರೂ ಮದುವೆಯಾಗದ ಅನೇಕ ನಟ-ನಟಿಯರಿದ್ದಾರೆ. ಕೆಲವರಿಗೆ ತಮ್ಮ ಇಷ್ಟದ ವ್ಯಕ್ತಿ ಸಿಕ್ಕಿಲ್ಲ ಅನ್ನುವ ಕಾರಣಕ್ಕೆ, ಇನ್ನು ಕೆಲವರಿಗೆ ಬ್ರೇಕಪ್ ಆಗಿರೋ ಕಾರಣಕ್ಕೆ ಇನ್ನು ಕೆಲವರಿಗೆ ಸಂಗಾತಿ ಬೇಕು ಅನ್ನಿಸಲೇ ಇಲ್ಲ ಎಂಬ ಕಾರಣಕ್ಕೆ. ಆದರೆ, ಕೆಲ ಬಾಲಿವುಡ್ ನಟರು ಪ್ರೀತಿಗಾಗಿ ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ. ಇಂದು ಅಂತಹವರ ಪಟ್ಟಿಯಲ್ಲಿ ಒಬ್ಬ ನಟಿಯ ಜೀವನ ಕಥೆಯನ್ನು ಹೇಳುತ್ತಿದ್ದೇವೆ.
70 ರ ದಶಕದಲ್ಲಿ, ಸುಲಕ್ಷಣಾ ಪಂಡಿತ್ ಎಂಬ ನಟಿಯೊಬ್ಬರು ಇದ್ದರು, ಅವರು ಸೂಪರ್‌ಸ್ಟಾರ್ ಒಬ್ಬರನ್ನು ಏಕಪಕ್ಷೀಯ ಪ್ರೀತಿಯಿಂದ ( one-sided love ) ತಮ್ಮ ಇಡೀ ಜೀವನದುದ್ದಕ್ಕೂ ಅವಿವಾಹಿತರಾಗಿಯೇ ಉಳಿದುಕೊಂಡರು.
ಸುಲಕ್ಷಣಾ ಪಂಡಿತ್ ಅವರು ಜೀತೇಂದ್ರ, ವಿನೋದ್ ಖನ್ನಾ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ, ಶಶಿ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದರು, ಆದರೆ ಅವರನ್ನು ಇನ್ನೂ ಬಾಲಿವುಡ್‌ನ ಅತ್ಯಂತ ದುರದೃಷ್ಟಕರ ನಟಿ ಎಂದು ಕರೆಯಲಾಗುತ್ತಿತ್ತು.
ವರದಿಗಳ ಪ್ರಕಾರ, ಸುಲಕ್ಷಣಾ ಪಂಡಿತ್ ಅವರು ಖ್ಯಾತ ನಟ ಸಂಜೀವ್ ಕುಮಾರ್ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಆದರೆ ಸಂಜೀವ್ ಕುಮಾರ್ ಬೇರೆ ನಟಿಯನ್ನು ಪ್ರೀತಿಸುತ್ತಿದ್ದರಿಂದ ಅವರನ್ನು ಮದುವೆಯಾಗಲಿಲ್ಲ. ಸುಲಕ್ಷಣಾ ಅವರು ಸಂಜೀವ್ ಕುಮಾರ್ ಅವರೊಂದಿಗೆ 'ಉಲ್ಜಾನ್' ಚಿತ್ರದಲ್ಲಿ ಕೆಲಸ ಮಾಡಿದ್ದರು ಮತ್ತು ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಗೆ ನಟನ ಮೇಲೆ ಒಲವಾಯ್ತು ಎಂದು ಹೇಳಲಾಗುತ್ತದೆ.
ಮತ್ತೊಂದೆಡೆ, ಸಂಜೀವ್ ಕುಮಾರ್ ಇನ್ನೊಬ್ಬ ನಟಿಯನ್ನು ಪ್ರೀತಿಸುತ್ತಿದ್ದರು ಮತ್ತು ನಟಿಯನ್ನು ಎರಡು ಬಾರಿ ಮದುವೆಗೆ ಪ್ರಸ್ತಾಪಿಸಿದರು, ಆದರೆ ಅವರ ಪ್ರಸ್ತಾಪವನ್ನು ನಟಿ ತಿರಸ್ಕರಿಸಿದರು. ನಿರಾಕರಣೆಯ ನಂತರ ಸಂಜೀವ್ ಕುಮಾರ್ ಹೃದಯದ ಕಟ್ಟೆಯೊಡೆಯಿತು ಹೀಗಾಗಿ ಖಿನ್ನತೆಗೆ ಒಳಗಾಗಿದ್ದರು ಮತ್ತು ತಮ್ಮ ಜೀವನದುದ್ದಕ್ಕೂ ಅವಿವಾಹಿತರಾಗಿ ಉಳಿಯಲು ನಿರ್ಧರಿಸಿದರು. ಸಂಜೀವ್ ಕುಮಾರ್ ಅವರ ಈ ನಿರ್ಧಾರವು ಸುಲಕ್ಷಣಾ ಪಂಡಿತ್ ಅವರ ಮೇಲೂ ಪರಿಣಾಮ ಬೀರಿತು ಮತ್ತು ಸುಲಕ್ಷಣಾ ಕೂಡ ಬೇರೆಯವರನ್ನು ಮದುವೆಯಾಗದಿರಲು ನಿರ್ಧರಿಸಿದರು.
1985 ರಲ್ಲಿ, ಸಂಜೀವ್ ಕುಮಾರ್ ಕೇವಲ 47 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಆದರೆ, ನಟ ಸಂಜೀವ್ ಮರಣದ ನಂತರವೂ ಸುಲಕ್ಷಣಾ ಮದುವೆಯಾಗಲಿಲ್ಲ. ಮತ್ತು ಖಿನ್ನತೆಗೆ ಒಳಗಾಗಿದ್ದರು ಎಂದು ಸುಲಕ್ಷಣಾ ಅವರ ಸಹೋದರಿ ವಿಜೇತಾ ಪಂಡಿತ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದಾಗಲೇ ಸಂಜೀವ್ ಕುಮಾರ್ ಪ್ರೀತಿ ಸಿಗದೆ ತನ್ನ ಸಿನಿ ಜೀವನದ ಉಚ್ಚ ಸ್ಥಿತಿಯಲ್ಲಿಯೇ ಪಂಡಿತ್ ಚಿತ್ರರಂಗವನ್ನು ತೊರೆದಿದ್ದರು.
ವಿಜೇತಾ ಪಂಡಿತ್ 2006 ರಲ್ಲಿ ಸುಲಕ್ಷಣಾಳನ್ನು ತನ್ನ ಮನೆಗೆ ಕರೆತಂದರು ಆದರೆ ನಟಿ ತನನ್ನು ತಾನು ಕೋಣೆಗೆ ಬೀಗ ಹಾಕಿಕೊಂಢು ಯಾರನ್ನೂ ಭೇಟಿಯಾಗಲು ಅಥವಾ ಮಾತನಾಡಲು ಇಷ್ಟಪಡಲಿಲ್ಲ. ಒಮ್ಮೆ ಸುಲಕ್ಷಣಾ ಅವರು ಸ್ನಾನಗೃಹದಲ್ಲಿ ಬಿದ್ದು ಸೊಂಟದ ಮೂಳೆ ಮುರಿದುಕೊಂಡರು. ಸೊಂಟದ ಮೂಳೆಯನ್ನು ಸರಿಪಡಿಸಲು ನಾಲ್ಕು ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ಆಕೆಗೆ ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ.