Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಅಲ್ಕೋಹಾಲ್ ಅಡಿಕ್ಡ್ ಆಗಿ ಮನೆಯೊಳಗೇ ಲಾಕ್ ಮಾಡ್ಕೊಂಡಿದ್ದ ನಟಿಯೀಗ 650 ಕೋಟಿ ಸಿನ್ಮಾದ ಹೀರೋಯಿನ್‌!

ಅಲ್ಕೋಹಾಲ್ ಅಡಿಕ್ಡ್ ಆಗಿ ಮನೆಯೊಳಗೇ ಲಾಕ್ ಮಾಡ್ಕೊಂಡಿದ್ದ ನಟಿಯೀಗ 650 ಕೋಟಿ ಸಿನ್ಮಾದ ಹೀರೋಯಿನ್‌!

ಆಕೆ ಬಾಲಿವುಡ್, ಟಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಸೂಪರ್‌ಸ್ಟಾರ್‌ ಅನಿಸಿಕೊಂಡಿರುವ ನಟಿ. ಇತ್ತೀಚಿಗಷ್ಟೇ ರಿಲೀಸ್ ಆದ  650 ಕೋಟಿ ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಳು. ಆದರೆ ಈ ನಟಿ ಒಂದು ಕಾಲದಲ್ಲಿ ಅಲ್ಕೋಹಾಲ್ ಅಡಿಕ್ಟ್ ಆಗಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಳು ಅನ್ನೋದು ನಿಮ್ಗೊತ್ತಾ?

Vinutha Perla | Updated : Jan 09 2024, 11:23 AM
2 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
19
Asianet Image

ಆಕೆ ಬಾಲಿವುಡ್, ಟಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಸೂಪರ್‌ಸ್ಟಾರ್‌ ಅನಿಸಿಕೊಂಡಿರುವ ನಟಿ. ಇತ್ತೀಚಿಗಷ್ಟೇ ರಿಲೀಸ್ ಆದ  650 ಕೋಟಿ ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಳು. ಆದರೆ ಈ ನಟಿ ಒಂದು ಕಾಲದಲ್ಲಿ ಅಲ್ಕೋಹಾಲ್ ಅಡಿಕ್ಟ್ ಆಗಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಳು ಅನ್ನೋದು ನಿಮ್ಗೊತ್ತಾ?

29
Asianet Image

37ರ ಹರೆಯದ ಈ ನಟಿ ಪ್ರೀತಿಯಲ್ಲಿ ಮೋಸ ಹೋದಾಗ ಖಿನ್ನತೆಗೆ ಒಳಗಾಗಿ ಕುಡಿತದ ಚಟಕ್ಕೆ ಬಿದ್ದಳು. ಕುಡಿತಕ್ಕೆ ಎಷ್ಟು ವ್ಯಸನಿಯಾಗಿದ್ದಳೆಂದರೆ, ಇಡೀ ದಿನ ಕುಡಿಯುತ್ತಲೇ ಕಳೆಯುತ್ತಿದ್ದಳು. ಇದರಿಂದ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಯಿತು. ಕೆರಿಯರ್ ಹಾಳಾಯಿತು. ಹೀಗಾಗಿ ನಟಿ ತನ್ನನ್ನು ತಾನು ನಿಯಂತ್ರಿಸಿಕೊಂಡು ತನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದಳು. 

39
Asianet Image

ಈ ನಟಿ ಇತ್ತೀಚೆಗೆ 650 ಕೋಟಿ ರೂಪಾಯಿ ಗಳಿಸಿದ ಚಿತ್ರದಲ್ಲಿ ನಟಿಸಿದ್ದರು. ಹೌದು, ನಾವು ಹೇಳ್ತಿರೋದು ಸಲಾರ್ ಚಿತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದ ಶ್ರುತಿ ಹಾಸನ್ ಬಗ್ಗೆ. ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಪುತ್ರಿ. ಸೌತ್ ನಟಿ ಶ್ರುತಿ ಹಾಸನ್ 'ಸಲಾರ್: ಭಾಗ 1' ಚಿತ್ರದಲ್ಲಿ ಪ್ರಭಾಸ್ ಎದುರು ಕಾಣಿಸಿಕೊಂಡರು. 

49
Asianet Image

ಈಗಾಗಲೇ ತಮಿಳು, ತೆಲುಗು, ಹಿಂದಿ ಭಾಷೆಯ ಹಲವು ಸಿನಿಮಾ, ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಶ್ರುತಿ ಹಾಸನ್ ಸೈ ಅನಿಸಿಕೊಂಡಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ, ಶ್ರುತಿ ಹಾಸನ್ ಮದ್ಯದ ವ್ಯಸನದಿಂದ ಹೊರಬರಲಾಗದೆ ಒದ್ದಾಡಿದ ದಿನಗಳೂ ಇದ್ದವು.

59
Asianet Image

ಶ್ರುತಿ ಹಾಸನ್ ಹೆಸರು ಮೈಕೆಲ್ ಕೊಸಾಲೆಗೆ ತಳುಕು ಹಾಕಿಕೊಂಡಿತ್ತು. ಇಬ್ಬರೂ 2016ರಲ್ಲಿ ಸಂಬಂಧದಲ್ಲಿರುವುದಾಗಿ ಹೇಳಿಕೊಂಡರು. ಆದರೆ 2019 ರಲ್ಲಿ ಬೇರ್ಪಟ್ಟರು. ಶ್ರುತಿ ಹಾಸನ್ ಕೂಡ ತನ್ನ ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದರು. ಇಲ್ಲಿಂದ ಶೃತಿ ಕುಡಿತದ ಚಟವನ್ನು ಆರಂಭಿಸಿ ಅಲ್ಕೋಹಾಲ್‌ಗೆ ಅಡಿಕ್ಟ್ ಆದರು. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ಒಪ್ಪಿಕೊಂಡಿದ್ದರು.

69
Asianet Image

'ನಾನು ಒಂದು ಸಮಯದಲ್ಲಿ ಡ್ರಿಂಕ್ಸ್‌ಗೆ ಅಡಿಕ್ಟ್ ಆಗಿದೆ. ಆದರೆ ಜೀವನದಲ್ಲಿ ಎಲ್ಲವೂ ಕಷ್ಟಕರವಾಗಿ ಪರಿಣಮಿಸಿದ ಕಾರಣ ಎಲ್ಲವನ್ನೂ ನಿಲ್ಲಿಸಲು ನಿರ್ಧರಿಸಿದೆ. ಇದು ನನಗೆ ಹೊಸ ಬದಲಾವಣೆಯಾಗಿದೆ'ಎಂದು ಶ್ರುತಿ ಹಾಸನ್ ಹೇಳಿದ್ದರು.

79
Asianet Image

ಅವರು ತಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, 'ನಾನು ಅಸ್ವಸ್ಥಳಾಗಿದ್ದೆ. ಇದನ್ನು ಯಾರಿಗೂ ಹೇಳಲಿಲ್ಲ. ಇದು ವೈಯಕ್ತಿಕ ಎಂದು ನಾನು ಭಾವಿಸಿದೆ ಮತ್ತು ನಾನು ನನ್ನ ಅನಾರೋಗ್ಯವನ್ನು ಹೊರಗಿನವರು ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಲಿಲ್ಲ' ಎಂದಿದ್ದರು.

89
Asianet Image

'ಈಗ ಮದ್ಯಪಾನ ಮಾಡುವಂತೆ ಪ್ರೇರೇಪಿಸುತ್ತಿದ್ದ ವ್ಯಕ್ತಿಗಳಿಂದ ದೂರ ಉಳಿದಿದ್ದೇನೆ' ಎಂದಿದ್ದಾರೆ. ಶ್ರುತಿ ಅವರ ಹೆಸರು ಈ ಹಿಂದೆ ರಣಬೀರ್ ಕಪೂರ್, ನಾಗ ಚೈತನ್ಯ, ಸುರೇಶ್ ರೈನಾ ಮೊದಲಾದವರ ಜೊತೆ ಕೇಳಿ ಬಂದಿತ್ತು.

99
Asianet Image

ಆದರೆ ನಟಿ ಇವರೆಲ್ಲರ ಜೊತೆ ಸಂಬಂಧವನ್ನು ಅಲ್ಲಗಳೆದಿದ್ದರು. ಶ್ರುತಿ ಹಾಸನ್ ಪ್ರಸ್ತುತ 2020ರಿಂದ ತನ್ನ ಗೆಳೆಯ, ಸಂತಾನು ಹಜಾರಿಕಾ ಅವರೊಂದಿಗೆ ಸಂಬಂಧದಲ್ಲಿದ್ದಾರೆ.

Vinutha Perla
About the Author
Vinutha Perla
ಮದ್ಯ
ನಟಿ
ಸಿನಿಮಾ
 
Recommended Stories
Top Stories