ವಯಸ್ಸು 40 ಆದ್ರೂ ಕಡಿಮೆಯಾಗಿಲ್ಲ ಶ್ರಿಯಾ ಶರಣ್ ಬ್ಯೂಟಿ: ಮಮ್ಮಿಯಾದ್ರೂ ಕಬ್ಜ ಬೆಡಗಿ ಸಖತ್ ಹಾಟ್!
ಬಹುಭಾಷಾ ನಟಿ ಶ್ರಿಯಾ ಶರಣ್ ಹೊಸ ಫೋಟೋಶೂಟ್ ಮಾಡಿಸಿದ್ದು, ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಫೋಟೋಸ್ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಹಾಟ್ ಫೋಟೋಗಳನ್ನು ನಟಿ ಶ್ರಿಯಾ ಶರಣ್ ಹಂಚಿಕೊಂಡಿದ್ದು, ಅವರ ಮಾದಕ ಲುಕ್ಗೆ ಅಭಿಮಾನಿಗಳು ಮಂತ್ರಮುಗ್ಧರಾಗಿದ್ದಾರೆ.
ಕಬ್ಜ ನಟಿ ಶ್ರಿಯಾ ಅವರು ಈ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗ್ತಿದೆ. ಸದ್ಯ ಅವರ ಫೋಟೂಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ಶ್ರಿಯಾ ಶರಣ್ ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರಿಯಾ ಕನ್ನಡಿಗರ ಮನಗೆದ್ದಿದ್ದಾರೆ.
ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ತನ್ನ ಬ್ಯೂಟಿ ಹಾಗೂ ನಟನೆಯಿಂದ ಅಭಿಮಾನಿಗಳ ಮನ ಕದ್ದಿದ್ದಾರೆ.
ಮದುವೆ ಬಳಿಕವೂ ಅನೇಕ ಸಿನಿಮಾಗಳಲ್ಲಿ ನಟಿ ಶ್ರಿಯಾ ನಟಿಸಿದ್ದು, ಅವರಿಗೆ ಮುದ್ದಾದ ಮಗಳಿದ್ದಾರೆ. ಜೊತೆಗೆ ಮಗಳ ಜೊತೆಗಿನ ಫೋಟೋಗಳನ್ನು ಸಹ ಆಗಾಗ ಹಂಚಿಕೊಳ್ಳುತ್ತಾರೆ.
ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರಿಯಾ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿ ಆಗಿದ್ದಾರೆ. ತೆಲುಗಿನಲ್ಲಿ ಟಾಪ್ ಹೀರೋಗಳ ಜೊತೆಯೂ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾ ನೀಡಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಅವರು ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ.
ನಟಿ ಶ್ರಿಯಾ ಶರಣ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅದನ್ನು ಫ್ಯಾನ್ಸ್ ಕೂಡ ಮೆಚ್ಚಿಕೊಳ್ತಾರೆ.