ವಯಸ್ಸು 40 ಅಂದ್ರೆ ನಂಬೋಕಾಗಲ್ಲ: ಮೋಡಿ ಮಾಡುತ್ತೆ ಶ್ರಿಯಾ ಶರಣ್ ಗ್ಲಾಮರಸ್ ಸೌಂದರ್ಯ!
ಕಬ್ಜ ಬೆಡಗಿ ಶ್ರಿಯಾ ಶರಣ್ ಗ್ಲಾಮರಸ್ ಫೋಟೋಶೂಟ್ ಮಾಡಿಸಿ ಮಿಂಚುತ್ತಿದ್ದಾರೆ. 40 ವರ್ಷವಾದ್ರೂ ಸಿಂಪಲ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಶ್ರಿಯಾ ಅವರನ್ನು ನೋಡಿದ ನೆಟ್ಟಿಗರು ಸ್ಟನ್ ಆಗಿದ್ದಾರೆ.
ಕನ್ನಡದ ಪ್ಯಾನ್ ಇಂಡಿಯಾ ಕಬ್ಜದಲ್ಲಿ ಮಧುಮತಿ ಪಾತ್ರದಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಶ್ರಿಯಾ ಶರಣ್ ಬಾಲಿವುಡ್ , ಟಾಲಿವುಡ್ ಮಾತ್ರ ಖ್ಯಾತಿ ಪಡೆಯದೇ ಕಬ್ಜ ಮೂಲಕ ಸ್ಯಾಂಡಲ್‌ವುಡ್‌ಗೂ ಪರಿಚಯವಾದರು.
ಇದೀಗ ಕಬ್ಜ ಬೆಡಗಿ ಗ್ಲಾಮರಸ್ ಫೋಟೋಶೂಟ್ ಮಾಡಿಸಿ ಮಿಂಚುತ್ತಿದ್ದಾರೆ. 40 ವರ್ಷವಾದ್ರೂ ಸಿಂಪಲ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಶ್ರಿಯಾ ಅವರನ್ನು ನೋಡಿದ ನೆಟ್ಟಿಗರು ಸ್ಟನ್ ಆಗಿದ್ದಾರೆ.
ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾದರೆ ಶ್ರಿಯಾಗೆ ರಿವರ್ಸ್‌ನಲ್ಲಿ ಗ್ಲಾಮರ್ ಹೆಚ್ಚುತ್ತಿದೆ. ನಟಿ ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ರೇಂಜ್ನಲ್ಲಿ ಫೋಟೋಶೂಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ತನ್ನ ಬ್ಯೂಟಿ ಹಾಗೂ ನಟನೆಯಿಂದ ಅಭಿಮಾನಿಗಳ ಮನ ಕದ್ದಿದ್ದಾರೆ.
ಶ್ರಿಯಾ ಶರಣ್ ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಆನಂದಿಸಿದ್ದು ಅದಕ್ಕೆ ಸಂಬಂಧಿಸಿದ ಪ್ರತಿ ಕ್ಷಣವನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದಲ್ಲದೆ, ಅವರು ಯಾವಾಗಲೂ ತಮ್ಮ ಮಗುವಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರಿಯಾ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿ ಆಗಿದ್ದಾರೆ. ತೆಲುಗಿನಲ್ಲಿ ಟಾಪ್ ಹೀರೋಗಳ ಜೊತೆಯೂ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾ ನೀಡಿದ್ದಾರೆ.
ನಟಿ ಶ್ರಿಯಾ ಶರಣ್ ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರಿಯಾ ಕನ್ನಡಿಗರ ಮನಗೆದ್ದಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಅವರು ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ.