ಸಮಾಜಕ್ಕೆ ಉತ್ತಮ ಸಂದೇಶ ನೀಡದ ಜಾಹೀರಾತುಗಳನ್ನು ತಿರಸ್ಕರಿಸಿದ ಸಮಂತಾ
ನಾನು ಚಿಕ್ಕಂದಿನಲ್ಲಿ ಬಹಳಷ್ಟು ಜಾಹೀರಾತಿನಲ್ಲಿ ನಟಿಸಿದ್ದೇನೆ. ಆದರೆ ಈಗ ನನಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡದ ಜಾಹೀರಾತುಗಳಲ್ಲಿ ನಟಿಸಬಾರದು ಎಂದು ಅರ್ಥ ಮಾಡಿಕೊಂಡಿದ್ದೇನೆ. ಕಳೆದ ವರ್ಷ ಸುಮಾರು 15ರಷ್ಟು ಜಾಹೀರಾತುಗಳನ್ನ ತಿರಸ್ಕರಿಸಿದ್ದೇನೆ.

ಸೂಪರ್‌ಸ್ಟಾರ್‌ಗಳು ಗುಟ್ಕಾ, ಆನ್‌ಲೈನ್ ಗೇಮಿಂಗ್ ಮುಂತಾದ ಉತ್ಪನ್ನಗಳ ಜಾಹೀರಾತುಗಳಲ್ಲಿ ನಟಿಸಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ನಟಿ ಸಮಂತಾ ತಾನು ಸಮಾಜಕ್ಕೆ ಉತ್ತಮ ಸಂದೇಶ ನೀಡದ ಜಾಹೀರಾತುಗಳನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. ಕೋಟಿಗಟ್ಟಲೆ ಹಣವನ್ನು ನಷ್ಟ ಮಾಡಿಕೊಂಡಿರುವ ಅವರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು ಚಿಕ್ಕಂದಿನಲ್ಲಿ ಬಹಳಷ್ಟು ಜಾಹೀರಾತಿನಲ್ಲಿ ನಟಿಸಿದ್ದೇನೆ. ಆದರೆ ಈಗ ನನಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡದ ಜಾಹೀರಾತುಗಳಲ್ಲಿ ನಟಿಸಬಾರದು ಎಂದು ಅರ್ಥ ಮಾಡಿಕೊಂಡಿದ್ದೇನೆ. ಕಳೆದ ವರ್ಷ ಸುಮಾರು 15ರಷ್ಟು ಜಾಹೀರಾತುಗಳನ್ನ ತಿರಸ್ಕರಿಸಿದ್ದೇನೆ.
ಅದರಿಂದ ಕೋಟಿಗಟ್ಟಲೆ ನಷ್ಟ ಆಗಿದೆ. ಆದರೆ ಅದರಿಂದ ಪಶ್ಚಾತ್ತಾಪ ಇಲ್ಲ. ಇನ್ನೊಬ್ಬರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡದ ಜಾಹೀರಾತುಗಳಲ್ಲಿ ನಾನು ನಟಿಸುವುದಿಲ್ಲ. ಈಗ ನಾನು ಯಾವುದೇ ಜಾಹೀರಾತು ಒಪ್ಪಿಕೊಳ್ಳುವುದಾದರೆ ಮೂವರು ವೈದ್ಯರು ಪರಿಶೀಲಿಸಿ ಒಪ್ಪಿಕೊಂಡ ಬಳಿಕವೇ ಮುಂದುವರಿಯುತ್ತೇನೆ’ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯುವ ಪೀಳಿಗೆಗೆ ಕಿವಿಮಾತು ಹೇಳಿರುವ ಅವರು, ಚಿಕ್ಕ ವಯಸ್ಸಿನಲ್ಲಿ ನಾವು ಭಾರಿ ಹುಮ್ಮಸ್ಸಿನಿಂದ ಇರುತ್ತೇವೆ. ನಾನೂ ಹಾಗೆ ಇದ್ದೆ. ಆ ಕಾರಣದಿಂದಲೇ ಕೆಲವು ಅಸಮರ್ಪಕ ಜಾಹೀರಾತುಗಳಲ್ಲಿ ನಟಿಸಿದ್ದೆ. ನನ್ನ ಯಂಗರ್ ಸೆಲ್ಫ್ ಈಗ ನನ್ನ ಓಲ್ಡರ್ ಸೆಲ್ಫ್ ಬಳಿ ಕ್ಷಮೆ ಕೇಳಬೇಕಾಗಿದೆ.
ಹಾಗಾಗಿ ನಿಮ್ಮ ಚಿಕ್ಕ ವಯಸ್ಸಿನಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಸಮಂತಾ ಅವರ ಈ ಪ್ರಾಮಾಣಿಕ ಹೇಳಿಕೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸೂಪರ್‌ಸ್ಟಾರ್‌ಗಳು ಕೂಡ ಇದೇ ರೀತಿ ಪ್ರಬುದ್ಧವಾಗಿ ವರ್ತಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.