ವಿಭೂತಿ ತಿನ್ನೋ ಚಟ ಆಗ್ಬಿಟ್ಟಿದೆ; ನಟಿ ಸಾಯಿ ಪಲ್ಲವಿಯ ಮತ್ತೊಂದು ರಹಸ್ಯ ಬಯಲು
ಏನ್ ಏನೋ ತಿನ್ನಬೇಕು ಅಂತ ಆಸೆ ಇರುತ್ತೆ ಆದರೆ ಸಾಯಿ ಪಲ್ಲವಿ ಆಸೆ ಕೇಳಿದ್ರೆ ಶಾಕ್ ಆಗ್ತೀರಾ....

ಬಹುಭಾಷಾ ನಟಿ ಸಾಯಿ ಪಲ್ಲವಿ ಒಂಥರಾ ಡಿಫರೆಂಟ್ ಹುಡುಗಿ ಅನ್ನೋ ವಿಚಾರ ಇಡೀ ಇಂಡಿಯಾಗೆ ಗೊತ್ತಿದೆ. ಆದರೆ ಈ ವಿಚಾರ ಯಾರಿಗೂ ಗೊತ್ತಿಲ್ಲ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಚಾಕೋಲೇಟ್, ಕೇಕ್, ಐಸ್ ಕ್ರೀಂ ಅದೂ ಇಲ್ಲ ಅಂದ್ರೆ ಪಾನಿ ಪೂರಿ ಆದರೂ ಬಯಕೆ ಮಾಡ್ಕೊಂಡು ತಿಂತಾರೆ.
ಆದರೆ ಸಾಯಿ ಪಲ್ಲವಿ ಮಾತ್ರ ಹಾಗಲ್ಲ. ತಮ್ಮ ಬ್ಯಾಗ್‌ನಲ್ಲಿ ತಪ್ಪದೆ ಇದನ್ನು ಇಟ್ಕೊಂಡು ಓಡಾಡುವುದಲ್ಲ ಯಾರಿಗೂ ಗೊತ್ತಿಲ್ಲದ ಹಾಗೆ ತಿನ್ನುತ್ತಾರಂತೆ.
ತಮಿಳು ಯೂಟ್ಯೂಬ್ ಚಾನೆಲ್ಗೆ (Youtube Channel) ಸಂದರ್ಶನದಲ್ಲಿ ಈ ವಿಷಯವನ್ನು ನಟಿ ಬಾಯಿಬಿಟ್ಟಿದ್ದಾರೆ. ಅಷ್ಟಕ್ಕೂ ನಟಿಗೆ ಇರುವ ವಿಚಿತ್ರ ಅಭ್ಯಾಸವೆಂದರೆ ವಿಭೂತಿ ತಿನ್ನುವುದರಂತೆ.
ತಮಗೆ ವಿಭೂತಿ ಎಂದರೆ ತುಂಬಾ ಇಷ್ಟ ಎಂದಿರುವ ನಟಿ, ಅದನ್ನು ಸದಾ ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.
ಅಷ್ಟಕ್ಕೂ ತಾವು ತಿನ್ನುವ ವಿಭೂತಿ ಅಂತಿಂಥ ಮಾಮೂಲಿನದ್ದಲ್ಲ ಎಂದೂ ನಟಿ ಹೇಳಿದ್ದಾರೆ. ಇದು ಸಾಮಾನ್ಯವಾದ ವಿಭೂತಿ ಅಲ್ಲ. ಇದು ವಿಶೇಷ ಮರದಿಂದ ಮಾಡಲ್ಪಟ್ಟಿದೆ ಮತ್ತು ಉತ್ತಮ ರುಚಿಯನ್ನು ಹೊಂದಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.