MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ನಟಿ ಬ್ಲೌಸ್ ಜಾರಿದರೂ ಒಪ್ಪದ ನಿರ್ದೇಶಕನೊಂದಿಗಿನ ಭಾವುಕ ಘಟನೆ ಸ್ಮರಿಸಿದ ರಮ್ಯಾ ಕೃಷ್ಣನ್!

ನಟಿ ಬ್ಲೌಸ್ ಜಾರಿದರೂ ಒಪ್ಪದ ನಿರ್ದೇಶಕನೊಂದಿಗಿನ ಭಾವುಕ ಘಟನೆ ಸ್ಮರಿಸಿದ ರಮ್ಯಾ ಕೃಷ್ಣನ್!

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಂಥ ಅನೇಕ ಚಿತ್ರಗಳನ್ನು ನೀಡಿರುವ ರಮ್ಯಾ ಕೃಷ್ಣನ್ ನಾಯಿಕಿಯಾಗಿ ಬೇಡಿಕೆ ನಟಿಯಾಗಿದ್ದರು. ಆಧರೆ, ಶ್ರೀದೇವಿ ತಿರಸ್ಕರಿಸಿದ ಬಾಹುಬಲಿಯ ಶಿವಗಾಮಿ ಪಾತ್ರ ಯಾವಾಗ ಮಾಡಿ ಸೈ ಎನಿಸಿಕೊಂಡರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿಯೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ಕಣ್ಣಲ್ಲೇ ಎಲ್ಲರನ್ನೂ ಕೊಲ್ಲುವಂಥ ಸೌಂದರ್ಯ ಇರೋ ನಟಿ ನಿರ್ದೇಶಕನೊಂದಿಗಿದ್ದ ಒಳ್ಳೇ ಸಂಬಂಧದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಏನದು ಘಟನೆ? 

2 Min read
Author : Suvarna News
| Updated : Oct 06 2024, 05:18 PM IST
Share this Photo Gallery
  • FB
  • TW
  • Linkdin
  • Whatsapp
15

ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಕಣ್ಣಿನಿಂದಲೇ ಎಲ್ಲರನ್ನೂ ಕೊಲ್ಲುವಂಥ ನಟನೆ ತೋರುವ ನಟಿ. ಕನ್ನಡದಲ್ಲಿಯೂ ನಟಿಸಿರುವ ಇವರು ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಯಾರೇ ನೀ ಅಭಿಮಾನಿ, ಸ್ನೇಹ, ಆಂಧ್ರ ಹೆಂಡತಿ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 

25

ಗ್ಲಾಮರ್, ನಟನೆ ಎರಡರಲ್ಲೂ ರಮ್ಯಾ ಕೃಷ್ಣನ್ ಗೆ ಒಂದು ಕಾಲದಲ್ಲಿ ಸರಿಸಾಟಿಯೇ ಇರಲಿಲ್ಲ. ನರಸಿಂಹ ಚಿತ್ರದಲ್ಲಿ ರಜನಿಕಾಂತ್ ಜೊತೆ ಪೈಪೋಟಿ ನೀಡುವಂತೆ ನಟಿಸಿದ್ದರು. 1990ರಲ್ಲಿ ಕೆ. ವಿಶ್ವನಾಥ್ ಅವರ ಸೂತ್ರದಾರಲು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ನಂತರ ರಮ್ಯಾಗೆ ಆಫರ್ಸ್ ಹರಿದು ಬರಲು ಶುರುವಾಯಿತು.

35

ರಮ್ಯಾ ಕೃಷ್ಣನ್ ಟಾಲಿವುಡ್ ನಲ್ಲಿ ನಾಗಾರ್ಜುನ, ವೆಂಕಟೇಶ್, ಚಿರಂಜೀವಿ, ಶ್ರೀಕಾಂತ್, ಬಾಲಕೃಷ್ಣ ಹೀಗೆ ಎಲ್ಲಾ ಹೀರೋಗಳ ಜೊತೆ ನಟಿಸಿದ್ದಾರೆ. ಶುಭಲಗ್ನಂ, ಆಹ್ವಾನಂ, ಎಗೀರೆ ಪಾವುರಮ ಚಿತ್ರಗಳೇ ಇದಕ್ಕೆ ಉದಾಹರಣೆ. ಆಹ್ವಾನಂ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಶ್ರೀಕಾಂತ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್ ಅವರ ಭಾವುಕ ಅಭಿನಯ ಹೈಲೈಟ್ ಆಗಿತ್ತು.

45
ನಟಿ ರಮ್ಯಾ ಕೃಷ್ಣನ್

ನಟಿ ರಮ್ಯಾ ಕೃಷ್ಣನ್

ನಟಿಯರನ್ನು ನಿರ್ದೇಶಕ ಎಸ್ ವಿ ಕೃಷ್ಣ ರೆಡ್ಡಿ ಸದಾ ಗೌರವದಿಂದ ನಡೆಸಿ ಕೊಡುತ್ತಾರೆ. ಅದಕ್ಕಾಗಿಯೇ ಅವರ ನಿರ್ದೇಶನದಲ್ಲಿ ನಟಿಸಲು ಕಲಾವಿದೆಯರು ದುಂಬಾಲು ಬೀಳುತ್ತಾರೆ. ನಟಿಸಲು ಸಾಧ್ಯವಾಗದಿದ್ದರೂ, ಕರೆ ಮಾಡಿ ಕ್ಷಮೆ ಕೇಳುತ್ತಾರೆ. ಸೌಂದರ್ಯ ಹಾಗೆಯೇ ಮಾಡಿದ್ದರು. ಯಾಕೆ ಹೀರೋಯಿನ್ಸ್ ಗೌರವಿಸುತ್ತಾರೆ ಎಂದು ನಿರೂಪಕರು ಕೇಳಿದಾಗ ಕೃಷ್ಣ ರೆಡ್ಡಿ ನೀಡಿದ ಉತ್ತರ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಆಹ್ವಾನಂ ಸಿನಿಮಾ ಚಿತ್ರೀಕರಣದ ಕೊನೆಯ ದಿನ ರಮ್ಯಾ ಕೃಷ್ಣನ್ ಗೆ ವೀಳ್ಯ ತಟ್ಟೆಯಲ್ಲಿ ಪಟ್ಟು ಸೀರೆ, ಅರಿಶಿನ ಕುಂಕುಮ, ಹತ್ತು ಸಾವಿರ ರೂಪಾಯಿ ಹಣ ಇಟ್ಟು ತೆಲುಗಿನ ಮನೆಯ ಸೊಸೆಯಂತೆ ತಾಂಬೂಲ ನೀಡಿದೆವು. ಅಷ್ಟೊಂದು ಗೌರವಿಸಿದೆವು. ಅವರನ್ನು ಅಷ್ಟು ಗೌರವದಿಂದ ನೋಡಿ ಕೊಂಡರೆ ನಮ್ಮನ್ನೂ ಗೌರವಿಸುತ್ತಾರೆ. ಆ ದಿನ ರಮ್ಯಾ ಕೃಷ್ಣನ್ ನನ್ನ ಕೈ ಹಿಡಿದು ಭಾವುಕರಾದರು. ಅತ್ತರು ಎಂದು ಎಸ್ ವಿ ಕೃಷ್ಣ ರೆಡ್ಡಿ ಹೇಳಿದ್ದು ದೊಡ್ಡ ಸದ್ದು ಮಾಡಿತ್ತು. 

55

ಇತ್ತೀಚೆಗೆ ರಮ್ಯಾ ಕೃಷ್ಣನ್ ತಾಯಿ, ಅತ್ತೆ ಪಾತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ಎಸ್ ವಿ ಕೃಷ್ಣ ರೆಡ್ಡಿ ಇತ್ತೀಚಿನ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕರು ಹೊಸ ಹೊಸ ವಿಧಾನಗಳೊಂದಿಗೆ ಸಿನಿಮಾ ಮಾಡುತ್ತಿರುವುದು, ಅಶ್ಲೀಲತೆ ನಂತಹ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕನಾಗಿ ನನ್ನ ವಿಧಾನ ಬೇರೆ ಎಂದು ಎಸ್ ವಿ ಕೃಷ್ಣ ರೆಡ್ಡಿ ತಿಳಿಸಿದ್ದಾರೆ. ನನ್ನ ಚಿತ್ರಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸುತ್ತೇನೆ. ಎಲ್ಲಿಯೂ ಬೈಗುಳ ಬರುವ ಸಂಭಾಷಣೆ ಇರಬಾರದು ಎಂಬುದು ಮೊದಲನೆಯದು. ಆಮೇಲೆ ಡಬಲ್ ಮೀನಿಂಗ್ ಸಂಭಾಷಣೆ ಕೂಡ ಇರಬಾರದು. ಕೊನೆಯದಾಗಿ ಹೀರೋಯಿನ್ ಬ್ಲೌಸ್ ಸರಿಯಾಗಿಲ್ಲದಿದ್ದರೆ, ಬ್ಲೌಸ್ ಅಂಚು ಜಾರಿದರೆ ನಾನು ಒಪ್ಪುವುದಿಲ್ಲ. ತಕ್ಷಣ ಕಟ್ ಹೇಳುತ್ತೇನೆ, ಎಂದಿದ್ದರು. 

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ರಮ್ಯಾ ಕೃಷ್ಣನ್

Latest Videos
Recommended Stories
Recommended image1
ಅಪ್ಪನ ಕೊರಳು ಪಟ್ಟಿ ಹಿಡಿದ ವಿನೀಶ್​! ನಟ ದರ್ಶನ್‌ಗೆ ಇದೆಂಥಾ ದುರ್ವಿಧಿ! ರಿವೀಲ್ ಆಗಿರೋ ಆ ವಿಡಿಯೋ ಹಿಂದಿನ ಕಥೆ ಏನು..?
Recommended image2
ಟಾಕ್ಸಿಕ್​ ಟೀಸರ್ ವಿರುದ್ದ ತೊಡೆ ತಟ್ಟಿದ ಧುರಂದರ್! ರಾಕಿಯನ್ನೇ ಮೀರಿಸ್ತಾರಾ ಬಿಟೌನ್ ಸ್ಟಾರ್ ರಣ್ವೀರ್?
Recommended image3
ತುಟಿ ಬಗ್ಗೆ ಕಮೆಂಟ್‌ಗೆ ಸ್ತಬ್ಧರಾದ ಭೂಮಿ ಪಡ್ನೇಕರ್, ನೋವು ತೋಡಿಕೊಂಡ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved