- Home
- Entertainment
- Cine World
- Traditional Lookನಲ್ಲಿ ರಾಶಿ ಖನ್ನಾ: ಸೀರೆಗೆ ಮೆರಗು ಬಂದಿದ್ದೆ ನಿನ್ನಿಂದ ಎಂದ ಫ್ಯಾನ್ಸ್!
Traditional Lookನಲ್ಲಿ ರಾಶಿ ಖನ್ನಾ: ಸೀರೆಗೆ ಮೆರಗು ಬಂದಿದ್ದೆ ನಿನ್ನಿಂದ ಎಂದ ಫ್ಯಾನ್ಸ್!
ರಾಶಿ ಖನ್ನಾ ಟಾಲಿವುಡ್ ವಲಯದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದು, ಉತ್ತಮ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇದೀಗ ಅವರು ಶೇರ್ ಮಾಡಿರುವ ಟ್ರೆಡಿಶನಲ್ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಿನಿಮಾ, ನಟನೆ ಮಾತ್ರವಲ್ಲ, ಸೌಂದರ್ಯದಿಂದಲೂ ರಾಶಿ ಖನ್ನಾ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಭಾರತೀಯ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದಾರೆ.
ಪರ್ಪಲ್-ಗೋಲ್ಡ್ ಕಾಂಬಿನೇಶನ್ನ ಸೀರೆಯುಟ್ಟು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸಾಂಪ್ರದಾಯಿಕ ನೋಟದಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.
ನಟಿ ರಾಶಿ ಖನ್ನಾ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಸಕ್ರಿಯ. ಇನ್ಸ್ಟಾಗ್ರಾಮ್ನಲ್ಲಿ 10.4 ಮಿಲಿಯನ್ ಫಾಲೋವರ್ಗಳನ್ನು ಸಂಪಾದಿಸಿರುವ ಇವರು ಬಗೆ ಬಗೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸಾಂಪ್ರದಾಯಿಕ ನೋಟಕ್ಕೂ ಸೈ, ಮಾರ್ಡನ್ ಲುಕ್ಗೂ ಓಕೆ. ನೋಟ ಯಾವುದೇ ಇರಲಿ ಕ್ಯಾಮರಾ ಎದುರು ಇವರು ಪರ್ಫೆಕ್ಟ್. ಇನ್ಸ್ಟಾಗ್ರಾಮ್ನಲ್ಲಿ ಇವರು ಈವರೆಗೆ 1,290 ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ.
ಈ ದೆಹಲಿ ಚೆಲುವೆಗೆ ಸೌತ್ನಲ್ಲಿ ಅಷ್ಟಾಗಿ ಮನ್ನಣೆ ಸಿಕ್ಕಿರಲಿಲ್ಲ. ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ ಈ ನಟಿ. ಆದರೆ, ಸ್ಟಾರ್ ಹೀರೋಯಿನ್ ಆಗಲು ಸಾಧ್ಯವಾಗಲಿಲ್ಲ.
ರಾಶಿ ಖನ್ನಾ 2013 ರಲ್ಲಿ ಹಿಂದಿ ಚಿತ್ರ 'ಮದ್ರಾಸ್ ಕೆಫೆ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾದಲ್ಲಿ ರಾಶಿ ಖನ್ನಾ ಹಾಗೂ ಜಾನ್ ಅಬ್ರಹಾಂ ಜೊತೆ ಕಾಸ್ತಾ ಹಾಟ್ ಆಗಿ ನಟಿಸಿದ್ದು ಮಾತ್ರವಲ್ಲದೆ ಕಿಸ್ ಕೂಡ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.