- Home
- Entertainment
- Cine World
- ‘ವಾರಣಾಸಿ’ ಚೆಲುವೆ ಪ್ರಿಯಾಂಕಾ ಚೋಪ್ರಾ ಗೋವಾದಲ್ಲಿ…. ಅಲ್ಲೇನು ಮಾಡ್ತಿದ್ದಾರೆ ದೇಸಿ ಗರ್ಲ್
‘ವಾರಣಾಸಿ’ ಚೆಲುವೆ ಪ್ರಿಯಾಂಕಾ ಚೋಪ್ರಾ ಗೋವಾದಲ್ಲಿ…. ಅಲ್ಲೇನು ಮಾಡ್ತಿದ್ದಾರೆ ದೇಸಿ ಗರ್ಲ್
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ "ವಾರಣಾಸಿ" ಚಿತ್ರದಿಂದಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಸದ್ಯ ಭಾರತದಲ್ಲಿರುವ ಈ ಬ್ಯೂಟಿ ಕೊಂಚ ಬಿಡುವು ಮಾಡಿಕೊಂಡು, ಗೋವಾಕ್ಕೆ ತೆರಳಿದ್ದು, ಅಲ್ಲಿ ಸ್ನೇಹಿತರ ಜೊತೆ ಟೂರ್ ಎಂಜಾಯ್ ಮಾಡಿದ್ದು, ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ
ಹಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿರುವ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಮುಂಬರುವ ಚಿತ್ರ "ವಾರಣಾಸಿ"ಗಾಗಿ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಪ್ರಿಯಾಂಕಾ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನಟಿಯ ಲುಕ್ ನೋಡಿ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹೊಸ ಫೋಟೊ ಶೇರ್ ಮಾಡಿದ ದೇಸಿ ಗರ್ಲ್
ಪ್ರಿಯಾಂಕಾ ಚೋಪ್ರಾ ಅವರ ಈ ಲುಕ್ ಇನ್ನೂ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅವರ "ವಾರಣಾಸಿ" ಚಿತ್ರ ಬಿಡುಗಡೆಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ, ಪ್ರಿಯಾಂಕಾ ಚೋಪ್ರಾ ಅವರ ಹೊಸ ಫೋಟೋಗಳು ವೈರಲ್ ಆಗುತ್ತಿದೆ. ಸದ್ಯ ಪ್ರಿಯಾಂಕಾ ಗೋವಾದಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಗೋವಾದಲ್ಲಿ ಪ್ರಿಯಾಂಕ
ಪ್ರಿಯಾಂಕಾ ಚೋಪ್ರಾ ಗೋವಾದಲ್ಲಿ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ. ಗೋವಾದಲ್ಲಿ ಸೂರ್ಯ, ಮರಳು ಮತ್ತು ನೆಮ್ಮದಿಯನ್ನು ಆನಂದಿಸುತ್ತಿದ್ದಾರೆ. ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೆಕೇಶನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗೋವಾ ವಿಶೇಷವಾದ ನಗರ
ಪ್ರಿಯಾಂಕಾ ಚೋಪ್ರಾ ಗೋವಾವನ್ನು ತಮ್ಮ ಅತ್ಯಂತ ಸುಂದರ ಮತ್ತು ನೆಚ್ಚಿನ ನಗರ ಎಂದು ಬಣ್ಣಿಸಿದ್ದಾರೆ. ಫೋಟೋಗಳ ಜೊತೆಗೆ ಪಿಗ್ಗಿ, "ನಾನು ಗೋವಾದಲ್ಲಿ ಕೆಲವು ಶಾಂತಿಯುತ ಮತ್ತು ವಿಶ್ರಾಂತಿ ದಿನಗಳನ್ನು ಕಳೆದಿದ್ದೇನೆ, ಇದು ವಿಶ್ವದ ನನ್ನ ನೆಚ್ಚಿನ ನಗರಗಳಲ್ಲಿ ಒಂದಾಗಿದೆ. ಗೋವಾ ನಿಜವಾಗಿಯೂ ಎಲ್ಲ ರೀತಿಯಲ್ಲೂ ವಿಶೇಷವಾಗಿದೆ. ಜನರು, ಆಹಾರ ಮತ್ತು ಸಂಸ್ಕೃತಿ ನಿಜವಾಗಿಯೂ ಅದ್ಭುತವಾಗಿದೆ. ಈ ಸ್ಥಳವು ನಿಮ್ಮ ಪ್ರತಿಯೊಂದು ಅಗತ್ಯಕ್ಕೂ ಹೊಂದಿಕೊಳ್ಳಬಹುದು" ಎಂದು ಬರೆದಿದ್ದಾರೆ.
ಸ್ನೇಹಿತರ ಜೊತೆ ಪ್ರಿಯಾಂಕ
ಪ್ರಿಯಾಂಕಾ ಶೇರ್ ಮಾಡಿರುವ ಫೋಟೊಗಳಲ್ಲಿ, ನಟಿ ತನ್ನ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಫೋಟೋಗಳಲ್ಲಿ ಪ್ರಿಯಾಂಕಾ ರುಚಿಕರವಾದ ಆಹಾರವನ್ನು ಆನಂದಿಸುತ್ತಿರುವುದು, ಕೊಳದ ಬಳಿ ವಿಶ್ರಾಂತಿ ಪಡೆಯುವುದು, ಮೀನಿನೊಂದಿಗೆ ಆಟವಾಡುವುದು ಮತ್ತು ಕಡಲತೀರದ ನೋಟಗಳನ್ನು ಆನಂದಿಸುತ್ತಿರುವುದು ಕಂಡುಬರುತ್ತದೆ.
ಪ್ರಿಯಾಂಕಾ ಚೋಪ್ರಾ ಮೇಲೆ ಅಭಿಮಾನಿಗಳ ಕಣ್ಣು
ಪ್ರಿಯಾಂಕಾ ಶೇರ್ ಮಾಡಿರುವ ಫೋಟೋಗಳಲ್ಲಿ ನಟಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಲುಕ್ ನೋಡಿದ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ.. ಪ್ರಿಯಾಂಕಾ ಚೋಪ್ರಾ ಅವರ ಈ ಫೋಟೋಗಳು ಸದ್ಯ ಇಂಟರ್ನೆಟಲ್ಲಿ ವೈರಲ್ ಆಗುತ್ತಿವೆ.
ವಾರಣಾಸಿ ಚೆಲುವೆ ಪ್ರಿಯಾಂಕ
ಪ್ರಿಯಾಂಕಾ ಚೋಪ್ರಾ ಶೀಘ್ರದಲ್ಲೇ ರಾಜಮೌಳಿ ನಿರ್ದೇಶನದ "ವಾರಣಾಸಿ" ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ನಟಿಸಿದ್ದಾರೆ. ಈ ಚಿತ್ರವು ದೊಡ್ಡ ಬಜೆಟ್ ಚಿತ್ರವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ನೀಡೋದು ಖಚಿತಾ ಎಂದು ಜನ ಈಗಾಗಲೇ ನಂಬಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

