- Home
- Entertainment
- Cine World
- ಸಿನಿ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದ್ದ ನಟಿ ಪ್ರತ್ಯುಷಾ ಸಾವಿನ ಕೇಸ್: 24 ವರ್ಷಗಳ ಬಳಿಕ ಈಗ ಶಿಕ್ಷೆ ಪ್ರಕಟ!
ಸಿನಿ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದ್ದ ನಟಿ ಪ್ರತ್ಯುಷಾ ಸಾವಿನ ಕೇಸ್: 24 ವರ್ಷಗಳ ಬಳಿಕ ಈಗ ಶಿಕ್ಷೆ ಪ್ರಕಟ!
ನಟಿ ಪ್ರತ್ಯುಷಾ ಅವರ ಸಾವು 'ಪುನ್ನಗೈ ಮನ್ನನ್' ಚಿತ್ರದ ಕಥೆಯನ್ನು ಹೋಲುತ್ತದೆ. ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮ*ಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದ ಈ ಪ್ರಕರಣದಲ್ಲಿ, 24 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಏನಿದೆ ತೀರ್ಪಿನಲ್ಲಿ?

ಸಿನಿಮೀಯ ರೀತಿಯ ಸಾವು
1986ರಲ್ಲಿ ಬಿಡುಗಡೆಯಾಗಿದ್ದ ಕಮಲ ಹಾಸನ್, ರೇವತಿ ಅಭಿನಯದ ತಮಿಳು ಚಿತ್ರ 'ಪುನ್ನಕೈ ಮನ್ನನ್' (Punnagai Mannan). ಈ ಚಿತ್ರದಲ್ಲಿ, ನಾಯಕರಾದ ಕಮಲ್ ಮತ್ತು ರೇಖಾ ಲವ್ ಮಾಡಿದರೂ, ಅದಕ್ಕೆ ಮನೆಯವರ ಬೆಂಬಲ ಸಿಗದೇ ಪರ್ವತದಿಂದ ಹಾರಿ ಆತ್ಮ*ಹತ್ಯೆಗೆ ಪ್ರಯತ್ನಿಸುತ್ತಾರೆ. ನಾಯಕ ಕಮಲ್ ಮರದ ಕೊಂಬೆಯಲ್ಲಿ ಸಿಲುಕಿಕೊಂಡು ಬದುಕುಳಿದರೆ, ರೇಖಾ ಸಾಯುತ್ತಾಳೆ! ಆದರೆ ಇದೇ ಸಿನಿಮಾದ ಕಥೆ ನಿಜ ಜೀವನದಲ್ಲಿಯೂ ನಡೆದದ್ದು ಕಾಲಿವುಡ್ನ ಅತ್ಯಂತ ಸುಂದರ ನಟಿ ಎಂದೇ ಖ್ಯಾತಿ ಪಡೆದಿದ್ದ, ಕೇವಲ 22ರ ಹರೆಯದಲ್ಲಿಯೇ ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದ ನಟಿ ಪ್ರತ್ಯುಷಾ ಅವರದ್ದು!
24 ವರ್ಷಗಳ ಬಳಿಕ ತೀರ್ಪು
2002ರಲ್ಲಿ ಬದುಕನ್ನೇ ಕೊನೆಗೊಳಿಸಿಕೊಂಡಿದ್ದ ಪ್ರತ್ಯುಷಾ ಅವರ ಸಾವಿನ ಪ್ರಕರಣದಲ್ಲಿ ಬರೋಬ್ಬರಿ 24 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಈಗ ಆಕೆಯ ಪ್ರಿಯಕರನಾಗಿದ್ದ ಸಿದ್ಧಾರ್ಥ್ ರೆಡ್ಡಿಗೆ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. 4 ವಾರಗಳ ಒಳಗೆ ಶರಣಾಗುವಂತೆ ಕೋರ್ಟ್ ಹೇಳಿದೆ. ಇದು ಆರೋಪಿ ಮತ್ತು ಮೃತ ವ್ಯಕ್ತಿಯ ನಡುವಿನ ಆತ್ಮ*ಹತ್ಯೆ ಒಪ್ಪಂದ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ, ಬದುಕುಳಿದವರಿಗೆ ಶಿಕ್ಷೆ ಆಗಬೇಕು ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಹೇಳಿದೆ.
ಕುತೂಹಲ ಪ್ರಕರಣ
ಅಷ್ಟಕ್ಕೂ ಈ ಪ್ರಕರಣವೇ ಕುತೂಹಲವಾಗಿದೆ. 1998 ರಲ್ಲಿ ಆಗಿನ ತೆಲುಗು ಸೂಪರ್ ಸ್ಟಾರ್ ಮೋಹನ್ ಬಾಬು ಜೊತೆ 18ರ ವಯಸ್ಸಿನಲ್ಲಿಯೇ ಪ್ರತ್ಯುಷಾ ನಟಿಸಿದ್ದರು. ಮೊದಲ ಚಿತ್ರವೇ ಬ್ಲಾಕ್ಬಸ್ಟರ್ ಆದ ಮೇಲೆ ಅವಕಾಶಗಳು ಹುಡುಕಿ ಬಂದವು. ಅವರ ನಟನೆಗೆ ಜನರು ಮನಸೋತರು. ತೆಲುಗುವಿನ ಸಕ್ಸಸ್ ಬಳಿಕ ಆಕೆಗೆ ತಮಿಳಿನಲ್ಲಿಯೂ ಅವಕಾಶ ಸಿಕ್ಕಿತು. 1999 ರಲ್ಲಿ ತಂಬಿ ರಾಮಯ್ಯ ನಿರ್ದೇಶಿಸಿದ ಮನುನೀತಿ ಚಿತ್ರದಲ್ಲಿ ಮುರಳಿ ಜೊತೆ ನಟಿಸಿದರು. ಅಲ್ಲಿಯೂ ಫೇಮಸ್ ಆದರು.
11 ಬ್ಲಾಕ್ಬಸ್ಟರ್ ಚಿತ್ರ
ತೆಲಗು ಮತ್ತು ತಮಿಳು ಚಿತ್ರದ ಸೂಪರ್ಸ್ಟಾರ್ಗಳ ಜೊತೆ ನಟಿಸುತ್ತಿರುವಾಗಲೇ ಪ್ರತ್ಯುಷಾ ಸಿದ್ಧಾರ್ಥ್ ಅವರ ಜೊತೆ ಲವ್ನಲ್ಲಿ ಬಿದ್ದರು. ಇವರ ಈ ಪ್ರೀತಿಗೆ ಸಿದ್ಧಾರ್ಥ್ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ಆದರೆ ಒಬ್ಬರನ್ನೊಬ್ಬರು ಬಿಟ್ಟಿಲರಾದಷ್ಟು ಲವ್ ಮಾಡ್ತಿದ್ದ ಈ ಜೋಡಿ, ಸಾವಿನಲ್ಲಿ ಒಂದಾಗಲು ನಿರ್ಧರಿಸಿಯೇ ಬಿಟ್ಟರು. ಆಗ ಪ್ರತ್ಯುಷಾಗೆ ಇನ್ನೂ 22ರ ಹರೆಯ. ಅದಾಗಲೇ 11 ಬ್ಲಾಕ್ಬಸ್ಟರ್ ಚಿತ್ರ ಕೊಟ್ಟಾಕೆ.
ವಿಧಿಯಾಟವೇ ಬೇರೆಯಾಗಿತ್ತು
ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರೂ ಕೀಟನಾಶಕ ಸೇವಿಸಿದರು. ಸಿದ್ಧಾರ್ಥ್ ಬದುಕುಳಿದರೆ, ಪ್ರತ್ಯುಷಾ ಸಾವನ್ನಪ್ಪಿದರು. ತಮ್ಮ ಮಗಳದ್ದು ಆತ್ಮ*ಹತ್ಯೆಯಲ್ಲ, ಅದು ಅತ್ಯಾ*ಚಾರ ಮತ್ತು ಕೊ*ಲೆ ಎಂದು ಆಕೆಯ ತಾಯಿ ಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ಗಳ ಅಲೆದಾಟ
ವಿಚಾರಣಾ ನ್ಯಾಯಾಲಯ ರೆಡ್ಡಿಯನ್ನ ತಪ್ಪಿತಸ್ಥನೆಂದು ತೀರ್ಮಾನಿಸಿ, 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಹೀಗೆ ಹೈಕೋರ್ಟ್, ಸುಪ್ರೀಂಕೋರ್ಟ್ ಎಂದೆಲ್ಲಾ ಅಲೆದಾಡಿದ ಈ ಕೇಸ್ನಲ್ಲಿ ಈಗ 24 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ. ಇಲ್ಲಿ ಅತ್ಯಾ*ಚಾರ ನಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ವಿಷ ಸೇವನೆ ಕಾರಣ ಎಂದಿರುವ ಕೋರ್ಟ್, ಆತ್ಮ*ಹತ್ಯೆಗೆ ಪ್ರೇರಣೆ ನೀಡಿರುವ ಕಾರಣ, ಅಪರಾಧಿಗೆ ಶಿಕ್ಷೆ ಆಗಲೇಬೇಕು ಎಂದಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

