MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಕ್ಷಯರೋಗ ಬಂತೆಂದು ನಟಿಯನ್ನು ತೊರೆದ ಗಂಡ-ಕುಟುಂಬ, ನರಳಿದ ಸಹ ನಟಿಗೆ ನೆರವಾಗಿದ್ದು ಸಲ್ಮಾನ್ ಖಾನ್‌

ಕ್ಷಯರೋಗ ಬಂತೆಂದು ನಟಿಯನ್ನು ತೊರೆದ ಗಂಡ-ಕುಟುಂಬ, ನರಳಿದ ಸಹ ನಟಿಗೆ ನೆರವಾಗಿದ್ದು ಸಲ್ಮಾನ್ ಖಾನ್‌

ಬಾಲಿವುಡ್‌ನಲ್ಲಿ ಭರವಸೆ ಹುಟ್ಟಿಸಿದ ನಟಿಯೊಬ್ಬಳ ವೃತ್ತಿಜೀವನವು ಅಲ್ಪಕಾಲಿಕವಾಗಿತ್ತು. ಕೆಲವು  ಸಂದರ್ಭಗಳು ಆಕೆಯ ಜೀವನದ ಅತ್ಯಂತ ಕಷ್ಟಕರ ದಿನಗಳನ್ನು ಕಳೆಯುವಂತೆ ಮಾಡಿತು.  ನಟ ಸಲ್ಮಾನ್‌ ಖಾನ್‌ ಜೊತೆಗೆ ನಟಿಸಿದ್ದ ಈ ಜನಪ್ರಿಯ ನಟಿಗೆ ಮಾರಣಾಂತಿಕ ಕಾಯಿಲೆ ಬಾಧಿಸಿತ್ತು. ಚಿಕಿತ್ಸೆಗೆ ಹಣವಿಲ್ಲದೆ ನಟಿ ಪರಿದಾಡಿದರು. ಕುಟುಂಬ, ಗಂಡ ಆಕೆಯ ಕಾಯಿಲೆಯನ್ನು ತಿಳಿದು ಜೀವನದಿಂದಲೇ ದೂರವಾದರು. ಒಬ್ಬಂಟಿಯಾಗಿ ಬದುಕುತ್ತಿರುವ ನಟಿ ಈಗ ಜನರ ಸೇವೆ ಮಾಡುತ್ತಾ ಜೀವನ ಕಳೆಯುತ್ತಿದ್ದಾರೆ.

2 Min read
Gowthami K
Published : Oct 22 2023, 04:57 PM IST| Updated : Oct 22 2023, 05:05 PM IST
Share this Photo Gallery
  • FB
  • TW
  • Linkdin
  • Whatsapp
19

ಈ ದುರಂತ ಜೀವನ ಕಥೆ ಹೊಂದಿರುವ ಇವರೇ 1990ರ ದಶಕದ ಚಲನಚಿತ್ರವಾದ ‘ವೀರಗತಿ’ಯಲ್ಲಿ ಖ್ಯಾತನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಪೂಜಾ ದಾದ್ವಾಲ್.  ಕ್ಷಯರೋಗ ಮತ್ತು ಶ್ವಾಸಕೋಶದ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.

29

ಜನವರಿ 5, 1977 ರಂದು ಜನಿಸಿದ ಪೂಜಾ ಮುಂಬೈ ಮೂಲದವರು. ಪೂಜಾ ತನ್ನ ಶಾಲಾ ಕಾಲೇಜು ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದಳು. ಬಾಲ್ಯದಿಂದಲೂ ಪೂಜಾಗೆ ನಟನೆಯತ್ತ ಒಲವಿತ್ತು. ತನ್ನ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಪೂಜಾ ನಟನಾ ಸಂಸ್ಥೆಯನ್ನು ಸೇರಿಕೊಂಡಳು ಮತ್ತು ಶಾಲೆಯ ನಂತರ,  ತನ್ನ ಅಧ್ಯಯನದೊಂದಿಗೆ ನಟನಾ ತರಗತಿಗಳನ್ನು ಕೂಡ ನಿರ್ವಹಿಸುತ್ತಿದ್ದಳು. 

39

ಒಂದು ದಿನ, ತನ್ನ ಆಕ್ಟಿಂಗ್ ಕ್ಲಾಸ್ ಸಮಯದಲ್ಲಿ, ಪೂಜಾಗೆ ಸಿನಿಮಾದ ಆಫರ್ ಬಂದಿತು. 17 ನೇ ವಯಸ್ಸಿನಲ್ಲಿ, ಪೂಜಾ ಅವರು ಸಲ್ಮಾನ್ ಖಾನ್ ಜೊತೆಗಿನ ಆಕ್ಷನ್ ಚಿತ್ರ, ವೀರಗತಿ (1995) ನಲ್ಲಿ  ನಟಿಸುವ ಮೂಲಕ ಬಾಲಿವುಡ್‌ ಗೆ ಚೊಚ್ಚಲ ಪ್ರವೇಶ ಪಡೆದರು.

49

ಆದರೆ  ವೀರಗತಿ ಗಲ್ಲಾಪೆಟ್ಟಿಗೆಯಲ್ಲಿ ಶೋಚನೀಯವಾಗಿ ಸೋತಿತು. ಮತ್ತು ಪೂಜಾ ಅವರ ವೃತ್ತಿಜೀವನವು ಉತ್ತಮ ಸ್ಥಾನದಿಂದ ಪ್ರಾರಂಭವಾಗಲಿಲ್ಲ. ವೀರಗತಿ ನಂತರ, ಪೂಜಾ ಇತರ ಕೆಲವು  ಚಿತ್ರಗಳಿಗೆ ಸಹಿ ಹಾಕಿದ್ದಾರೆ. 

59

ಪೂಜಾಗೆ ಸಿನಿಮಾಗಳಲ್ಲಿ ಉತ್ತಮ ಅವಕಾಶಗಳು ಸಿಗದ ಕಾರಣ ಕಿರುತೆರೆಯತ್ತ ಮುಖ ಮಾಡಿದರು.  ಆಶಿಕಿ (1999) ಮತ್ತು ಘರಾನಾ (2001) ಎಂಬ ಎರಡು ಜನಪ್ರಿಯ ಶೋ ನಲ್ಲಿ ಭಾಗವಹಿಸಿದರು. ಎರಡು ಹಿಟ್ ಶೋಗಳಲ್ಲಿ ನಟಿಸಿದ್ದರೂ ಪೂಜಾಗೆ ಸಿನಿಮಾಗಳಿಂದ ಉತ್ತಮ ಆಫರ್ ಗಳು ಬರುತ್ತಿರಲಿಲ್ಲ. ಹೀಗಾಗಿ ಜೀವನದಲ್ಲಿ ಸೆಟಲ್ ಆಗಲು ನಿರ್ಧರಿಸಿದ ಪೂಜಾ ಮದುವೆಯಾಗಿ ಪತಿಯೊಂದಿಗೆ ಗೋವಾಕ್ಕೆ ಶಿಫ್ಟ್ ಆದರು. ಗೋವಾದಲ್ಲಿ, ಪೂಜಾ ತನ್ನ ಗಂಡನ ಕ್ಯಾಸಿನೊವನ್ನು ಸಹ ನಿರ್ವಹಿಸುತ್ತಿದ್ದರು. 

69

2018 ರಲ್ಲಿ, ಪೂಜಾ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಅಸ್ವಸ್ಥರಾಗಿದ್ದರು. ಆರೋಗ್ಯ ತಪಾಸಣೆಯ ನಂತರ ಆಕೆಗೆ ತೀವ್ರ ಕ್ಷಯರೋಗ ಇರುವುದು ಪತ್ತೆಯಾಯಿತು. ಪೂಜಾ ಅವರ ಆರೋಗ್ಯದ ಬಗ್ಗೆ ತಿಳಿದ ತಕ್ಷಣ ಪೂಜಾ ಅವರ ಅತ್ತೆ  ಮತ್ತು ಅವರ ಪತಿ  ತಮ್ಮ ಸಂಬಂಧವನ್ನು ಕೊನೆಗೊಳಿಸಿದರು, ಅವಳನ್ನು ಮುಂಬೈನಲ್ಲಿ ಒಂಟಿಯಾಗಿ ಬಿಟ್ಟರು. ಪೂಜಾಗೆ ಜೀವನದಲ್ಲಿ ಏನೂ ಇರಲಿಲ್ಲ, ಉತ್ತಮ ಆರೋಗ್ಯ, ಹಣ, ಕೆಲಸ ಅಥವಾ ಕುಟುಂಬ ಎಲ್ಲವನ್ನೂ ಕಳೆದುಕೊಂಡಿದ್ದರು.

79

ಪೂಜಾಳ ಹಿತೈಷಿ ರಾಜಿಂದರ್ ಸಿಂಗ್, ಪೂಜಾಳನ್ನು ಮತ್ತೆ ಮುಂಬೈಗೆ ಕರೆತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಹಂತದಲ್ಲಿ, ಪೂಜಾ ತನ್ನ ದೇಹದ ತೂಕವನ್ನು ತೀವ್ರವಾಗಿ ನಲುಗಿ ಹೋಗಿತ್ತು. ತನ್ನ ಕಷ್ಟದ ಸಮಯದಲ್ಲಿ ಸಲ್ಮಾನ್ ಖಾನ್, ರವಿ ಕಿಶನ್ ಮತ್ತು ರಾಜಿಂದರ್ ಸಿಂಗ್ ಈ ಮೂವರು ಮಾತ್ರವೇ  ಸಹಾಯ ಮಾಡಬಹುದು ಎಂದು ಬಲವಾಗಿ ನಂಬಿದರು.

89

ಯೂಟ್ಯೂಬ್‌ನಲ್ಲಿ ವಿಡಿಯೋ ಸಂದೇಶದ ಮೂಲಕ ಪೂಜಾ ಸಲ್ಮಾನ್‌ ಖಾನ್‌ ಹಣಕಾಸಿನ ನೆರವು ಕೋರಿದರು. ಬಳಿಕ ಸಲ್ಮಾನ್ ಸಂದೇಶವನ್ನು ಸ್ವೀಕರಿಸಿದರು ಮತ್ತು ಮುಂದಿನ ಆರು ತಿಂಗಳ ಕಾಲ ನಟ ಸಲ್ಮಾನ್‌ ಅವರ ಪೂರ್ತಿ ಚಿಕಿತ್ಸೆಯನ್ನು ನೋಡಿಕೊಂಡರು. ‘ಚಾರಿಟಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಸಂಸ್ಥಾಪಕರಾಗಿರುವ ಸಲ್ಮಾನ್ ಖಾನ್ ಭಾರತದಲ್ಲಿ ಶಿಕ್ಷಣ & ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.

99

ಪೂಜಾ ಮತ್ತೆ ಚಲನಚಿತ್ರಗಳಲ್ಲಿ ಬರಲು ಬಯಸಿದ್ದರು. ಮತ್ತು ಕಷ್ಟದಲ್ಲಿರುವಾಗ, ಅವರು  10X10 ವಸತಿ ಸಮಚ್ಚಯದಲ್ಲಿ ವಾಸಿಸುತ್ತಿದ್ದರು. ಪೂಜಾಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಕಾರಣ ಅಲ್ಲಿ ಮನೆ ಕೆಲಸ ಮಾಡುತ್ತಿದ್ದರು. 2020 ರಲ್ಲಿ, ಪೂಜಾ ಪಂಜಾಬಿ ಚಿತ್ರ, ಶುಕರನ: ಗುರು ನಾನಕ್ ದೇವ್ ಜಿ ಕಾ ಮೂಲಕ ನಟನೆಯಲ್ಲಿ ಪುನರಾಗಮನ ಮಾಡಿದರು. ಆದರೆ ಚಿತ್ರವು ಫ್ಲಾಪ್ ಆಯ್ತು. ಇಂದು, ಪೂಜಾ ತನ್ನ ಬದುಕಿಗಾಗಿ ಟಿಫಿನ್ ಮಾಡಿ ಮಾರುತ್ತಾರೆ. ಒಂದಲ್ಲ ಒಂದು ದಿನ ಪೂರ್ಣ ಬಲದಿಂದ ಹಿಂತಿರುಗುವ ಭರವಸೆಯಲ್ಲಿದ್ದಾರೆ. 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸಲ್ಮಾನ್ ಖಾನ್
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved