- Home
- Entertainment
- Cine World
- ಮಕ್ಕಳನ್ನು ಮಾಡ್ಕೋಳೋಕೆ ನಾವಿಬ್ರೂ ಫಿಟ್ ಆಗಿದ್ದೀವಿ, ಆದರೆ....: Pavithra Lokesh, Naresh ಸಂದರ್ಶನ ವೈರಲ್
ಮಕ್ಕಳನ್ನು ಮಾಡ್ಕೋಳೋಕೆ ನಾವಿಬ್ರೂ ಫಿಟ್ ಆಗಿದ್ದೀವಿ, ಆದರೆ....: Pavithra Lokesh, Naresh ಸಂದರ್ಶನ ವೈರಲ್
ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಜೋಡಿ ಮದುವೆ ಆಗ್ತೀರಾ ಎಂದು ಕೇಳಿದಾಗ, "ಇಲ್ಲ, ನಾವು ಹೀಗೆ ಚೆನ್ನಾಗಿದ್ದೇವೆ" ಎಂದು ಹೇಳಿತ್ತು. ಮಗು ಬಗ್ಗೆ ನೀಡಿದ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

"ನಟ ಕೃಷ್ಣ ಹಾಗೂ ವಿಜಯ ನಿರ್ಮಲಾ ಅವರಿಗೆ ಮದುವೆ ಆಗಿರಲಿಲ್ಲ. ಇದು ಒಪನ್ ಸೀಕ್ರೇಟ್. ಇವರಿಬ್ಬರು ಕೂಡ ನಾವು ಚೆನ್ನಾಗಿರಬೇಕು, ಮಕ್ಕಳು ಆರಾಮಾಗಿರಬೇಕು ಅಂತ ಅಂದುಕೊಂಡಿದ್ದರು. ಇವರಿಬ್ಬರ ಪ್ರೇಮ ನಿಜಕ್ಕೂ ನಿಸ್ವಾರ್ಥವಾಗಿತ್ತು" ಎಂದು ನರೇಶ್ ಅವರೇ ಹೇಳಿಕೊಂಡಿದ್ದಾರೆ.
"ಮಕ್ಕಳನ್ನು ಮಾಡಿಕೊಳ್ಳಲು ನಾನು, ಪವಿತ್ರಾ ದೈಹಿಕವಾಗಿ ಫಿಟ್ ಆಗಿದ್ದೇವೆ, ಈಗ ಇರುವ ಟೆಕ್ನಾಲಜಿ, ಸರೋಗಸಿಯಿಂದ ನಮ್ಮ ಮಕ್ಕಳನ್ನು ಪಡೆದುಕೊಳ್ಳಬಹುದು" ಎಂದು ನರೇಶ್ ಹೇಳಿದ್ದಾರೆ.
"ಎಷ್ಟೋ ಮಕ್ಕಳಿಗೆ ಪಾಲಕರಿಲ್ಲ. ಇಂಥ ಸಂದರ್ಭದಲ್ಲಿ ಬದುಕುತ್ತಿರುವಾಗ ನಾವು ಮಕ್ಕಳನ್ನು ಮಾಡಿಕೊಂಡು ಯಾಕೆ ಸಮಾಜಕ್ಕೆ ಕೊಡಬೇಕು. ಇದನ್ನು ಬಿಟ್ಟು ಬೇರೆ ಕೆಲಸ ಮಾಡಬಹುದು" ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.
"ನಾನು, ಪವಿತ್ರಾ ಲೋಕೇಶ್ ಭೇಟಿಯಾದಾಗ ನಾವು ಒಂದಷ್ಟು ನಿರ್ಣಯ ತಗೋಬೇಕು. ನಾವಿಬ್ಬರು ಅರ್ಥ ಮಾಡಿಕೊಳ್ಳಬೇಕು, ನಮ್ಮ ಕರಿಯರ್ ಸೆಟ್‌ಮಾಡಿಕೊಳ್ಳಬೇಕು. ನಮ್ಮಿಬ್ಬರ ಮಕ್ಕಳು ನಮ್ಮ ಮಕ್ಕಳೇ ಅಲ್ವಾ?" ಎಂದು ನರೇಶ್ ಹೇಳಿದ್ದಾರೆ.
"ನಿನಗೆ ಎಲ್ಲವನ್ನು ಕೊಟ್ಟಿದ್ದೇನೆ. ಆದರೆ ಒಳ್ಳೆಯ ಹೆಂಡ್ತಿ, ಸಂಗಾತಿ ಕೊಡೋಕೆ ಆಗಲಿಲ್ಲ ಎಂದು ನನ್ನ ತಾಯಿ ಹೇಳಿದ್ದರು. ಆಗ ನಾನು ತಾಯಿಗೆ ನೀನು ಹುಡುಕೋದಲ್ಲ, ನಾನು ಹುಡುಕಿಕೊಳ್ಳಬೇಕು ಅಂತ ಹೇಳಿದೆ. ಕೃಷ್ಣ ನಿಧನದ ಬಳಿಕ ನನಗೆ ಬಹಳ ಬೇಸರ ಆಯ್ತು" ಎಂದು ನರೇಶ್ ಹೇಳಿದ್ದಾರೆ.
"ನಾನು, ಪವಿತ್ರಾ ಮೂರು-ನಾಲ್ಕು ವರ್ಷದಿಂದ ಜೊತೆಗೆ ಇದ್ದೇವೆ. ನಾವಿಬ್ಬರು ಈ ಬಗ್ಗೆ ಮಾತನಾಡಿಲ್ಲ. ಆದರೆ ನಮ್ಮಿಬ್ಬರ ಮನಸ್ಸಿನಲ್ಲಿದ್ದ ಆಲೋಚನೆಗಳು ಒಂದೇ ಆಗಿವೆ" ಎಂದು ನರೇಶ್ ಹೇಳಿದ್ದಾರೆ.
"ನಾವಿಬ್ಬರು ಜೋಡಿಯಾಗಿ ಚೆನ್ನಾಗಿದ್ದೇವೆ. ನನಗೆ ಪವಿತ್ರಾ ಅಮ್ಮನಾಗಿ, ಹೆಂಡ್ತಿಯಾಗಿ, ಮಗಳಾಗಿ, ಫ್ರೆಂಡ್‌ಆಗಿ ಕಾಣಿಸುತ್ತಾಳೆ. ಪವಿತ್ರಾ ಬಂದಮೇಲೆ ನನ್ನ ಜೀವನ ಬದಲಾಗಿದೆ, ನಾನೀಗ ಪಾರ್ಟಿ ಕೂಡ ಮಾಡೋದಿಲ್ಲ. ನನ್ನ ಬ್ಯಾಂಕ್ ಅಕೌಂಟ್ ನಂಬರ್‌ಏನು ಅಂತ ಪವಿತ್ರಾಗೆ ಗೊತ್ತಿಲ್ಲ. ನನ್ನ ತಲೆ ಕೂದಲು ಅಷ್ಟು ಉದುರಿದರೆ ನನ್ನ ಜೊತೆ ಇರ್ತೀಯಾ ಅಂತ ಕೇಳಿದೆ. ಆಗ ಅವಳು ನಿಮ್ಮ ಬಳಿ ಏನೂ ಇಲ್ಲದಿದ್ರೂ ಕೂಡ ನಾನು ನಿನ್ನ ಜೊತೆಗೆ ಇರ್ತೀನಿ" ಎಂದು ನರೇಶ್‌ಹೇಳಿದ್ದಾರೆ.