ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಕೇಸ್: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧಿಸಿದ ಇ.ಡಿ
ಖಾಸಗಿ ವಿಮಾನಯಾನ ಕಂಪನಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಾರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಹಲವು ತಾಸು ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.
ನವದೆಹಲಿ (ಸೆಪ್ಟೆಂಬರ್ 2, 2023): ಖಾಸಗಿ ವಿಮಾನಯಾನ ಕಂಪನಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಹಲವು ತಾಸು ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. ಸಾರ್ವಜನಿಕ ಸ್ವಾಮ್ಯದ ಕೆನರಾ ಬ್ಯಾಂಕ್‌ನಿಂದ 538 ಕೋಟಿ ರು. ಸಾಲ ಪಡೆದು ಅದನ್ನು ಬೇರೆಡೆಗೆ ವರ್ಗಾವಣೆ ಮಾಡಿದ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.
538 ಕೋಟಿ ರೂ. ಕೆನರಾ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಶುಕ್ರವಾರ ರಾತ್ರಿ ಕೆಲವು ಹೊತ್ತಿನ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. ಈ ವರ್ಷದ ಮೇನಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಎಫ್‌ಐಆರ್ ಆಧರಿಸಿ, ಅವರನ್ನು ಇ,ಡಿ. ಬಂಧಿಸಿದೆ.
ಇದನ್ನು ಓದಿ: ಜಿ - 20 ಶೃಂಗಸಭೆ: ರಾಗಿ, ಗೋಲ್‌ಗಪ್ಪಾ ರುಚಿ ಸವಿಯಲಿರೋ ವಿದೇಶಿ ಪ್ರತಿನಿಧಿಗಳು; ಯುಪಿಐ ಮ್ಯಾಜಿಕ್ ಬಗ್ಗೆಯೂ ಮಾಹಿತಿ
ಕಳೆದ ವರ್ಷ ನವೆಂಬರ್ 11 ರಂದು ಸಲ್ಲಿಸಲಾದ ಲಿಖಿತ ದೂರಿನಲ್ಲಿ ನರೇಶ್ ಗೋಯಲ್ ಮೇಲೆ ವಂಚನೆ, ಕ್ರಿಮಿಲ್ ಪಿತೂರಿ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಕ್ರಿಮಿನಲ್ ದುಷ್ಕೃತ್ಯ ಆರೋಪವನ್ನು ಸಿಬಿಐ ಹೊರಿಸಿತ್ತು. ಮೇ 5ರಂದು ಸಿಬಿಐ ಅಧಿಕಾರಿಗಳು ನರೇಶ್ ಗೋಯಲ್ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಮುಂಬೈನ ಏಳು ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಈ ನಡುವೆ, 2 ಸಮನ್ಸ್‌ಗಳನ್ನು ನರೇಶ್ ಗೋಯಲ್ ಸ್ವೀಕರಿಸಿರಲಿಲ್ಲ.
ಏನಿದು ಪ್ರಕರಣ?:
ನರೇಶ್ ಗೋಯಲ್ ಜೆಟ್ ಏರ್‌ವೇಸ್‌ಗಾಗಿ 848 ಕೋಟಿ ರೂ. ಸಾಲ ಪಡೆದಿದ್ದರು. ಈ ಪೈಕಿ 538 ಕೋಟಿ ರೂ. ಮರುಪಾವತಿ ಮಾಡಿರಲಿಲ್ಲ. ಈ ಹಣವನ್ನು ಬೇರೆಡೆ ವರ್ಗಾಯಿಸಿದ ಆರೋಪ ಕೇಳಿಬಂದಿತ್ತು. ಸಾಲ ಬಾಕಿ ಉಳಿಸಿಕೊಂಡ ಕಾರಣಕ್ಕೆ ಅವರ ಜೆಟ್‌ನ ಖಾತೆಯನ್ನು 2021ರಲ್ಲಿ ‘ವಂಚನೆ’ ಎಂದು ಸಿಬಿಐ ಘೋಷಿಸಿತ್ತು. ಈ ಸಂಬಂಧ ಸಿಬಿಐಗೆ ಕೆನರಾ ಬ್ಯಾಂಕ್ ದೂರು ನೀಡಿತ್ತು.
ಇದನ್ನೂ ಓದಿ: 2023 ರಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಮ್ಯೂಚುಯಲ್ ಫಂಡ್‌ಗಳ ವಿವರ ಹೀಗಿದೆ..
ಜೆಟ್ ಏರ್‌ವೇಸ್ ಸುಮಾರು 25 ವರ್ಷಗಳ ಕಾಲ ಹಾರಾಟ ನಡೆಸಿದ ನಂತರ, ಭಾರಿ ನಷ್ಟದ ಕಾರಣ ಏಪ್ರಿಲ್ 2019ರಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: Good News: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 158 ರೂ. ಇಳಿಕೆ; ಪರಿಷ್ಕೃತ ಬೆಲೆ ವಿವರ ಹೀಗಿದೆ..